Advertisement

US Open Tennis: ವೀನಸ್‌, ವೋಜ್ನಿಯಾಕಿಗೆ ವೈಲ್ಡ್ ಕಾರ್ಡ್‌

12:13 AM Aug 18, 2023 | Team Udayavani |

ನ್ಯೂಯಾರ್ಕ್‌: ಏಳು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ವೀನಸ್‌ ವಿಲಿಯಮ್ಸ್‌ ಮತ್ತು ಮಾಜಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಕ್ಯಾರೋಲಿನ್‌ ವೋಜ್ನಿಯಾಕಿ ಅವರಿಗೆ ಯುಎಸ್‌ ಓಪನ್‌ ಮುಖ್ಯ ಸುತ್ತಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ನೀಡಲಾಗಿದೆ.

Advertisement

ಪುರುಷರ ವಿಭಾಗದಲ್ಲಿ ಮಾಜಿ ಟಾಪ್‌-10 ರ್‍ಯಾಂಕಿಂಗ್‌ ಆಟಗಾರ ಜಾನ್‌ ಇಸ್ನರ್‌ ಅವರೂ ವೈಲ್ಡ್‌ ಕಾರ್ಡ್‌ ಪಡೆದಿದ್ದಾರೆ. ಈ ವೈಲ್ಡ್‌ಕಾರ್ಡ್‌ ಅವಕಾಶದೊಂದಿಗೆ 43 ವರ್ಷದ ವೀನಸ್‌ ವಿಲಿಯಮ್ಸ್‌ 24ನೇ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪ್ರಧಾನ ಸುತ್ತಿನಲ್ಲಿ ಆಡಿದಂತಾಗುತ್ತದೆ. ವೋಜ್ನಿಯಾಕಿ 2020ರ ಬಳಿಕ ಮೊದಲ ಗ್ರ್ಯಾನ್‌ಸ್ಲಾಮ್‌ ಆಡುವ ಅವಕಾಶ ಪಡೆಯಲಿದ್ದಾರೆ.

ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಾದ ಯುಎಸ್‌ ಓಪನ್‌ ಆ. 28ರಿಂದ ಸೆ. 10ರ ತನಕ ನಡೆಯಲಿದೆ.

ವೈಲ್ಡ್‌ಕಾರ್ಡ್‌ ಪಡೆದವರು
ಪುರುಷರ ವಿಭಾಗ: ಜಾನ್‌ ಇಸ್ನರ್‌, ಅಲೆಕ್ಸ್‌ ಮೈಕಲ್‌ಸೆನ್‌, ಎಥಾನ್‌ ಕ್ವಿನ್‌, ಲರ್ನರ್‌ ಟೀನ್‌, ಸ್ಟೀವ್‌ ಜಾನ್ಸನ್‌, ಮೈಕಲ್‌ ಮೋಹ್‌, ರಿಂಕಿ ಹಿಜಿಕಾಟ, ಬೆಂಜಮಿನ್‌ ಬೊಂಝಿ.

ವನಿತಾ ವಿಭಾಗ: ವೀನಸ್‌ ವಿಲಿಯಮ್ಸ್‌, ಕ್ಯಾರೋಲಿನ್‌ ವೋಜ್ನಿಯಾಕಿ, ಆ್ಯಶ್ಲಿನ್‌ ಕ್ರುಗರ್‌, ರಾಬಿನ್‌ ಮಾಂಟ್ಗೊ ಮೆರಿ, ಕಾಯ್ಲಾ ಡೇ, ಫಿಯೋನಾ ಫೆರೊ, ಕ್ಲೆರ್ವಿ ಎನ್‌ಗೌನೌ, ಸ್ಟಾರ್ಮ್ ಹಂಟರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next