Advertisement

US Open Super 300: ಕ್ವಾರ್ಟರ್‌ ಫೈನಲ್‌ಗೆ ಸಿಂಧು, ಸೇನ್‌, ಶಂಕರ್‌

11:04 PM Jul 14, 2023 | Team Udayavani |

ಕೌನ್ಸಿಲ್‌ ಬ್ಲಿಫ್ (ಯುಎಸ್‌): ಯುಎಸ್‌ ಓಪನ್‌ ಸೂಪರ್‌-300 ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪಿ.ವಿ. ಸಿಂಧು, ಲಕ್ಷ್ಯ ಸೇನ್‌ ಮತ್ತು ಎಸ್‌. ಶಂಕರ್‌ ಮುತ್ತುಸ್ವಾಮಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ವಿಶೇಷವೆಂದರೆ, ಪುರುಷರ ಕ್ವಾರ್ಟರ್‌ ಫೈನಲ್‌ನಲ್ಲಿ ಲಕ್ಷ್ಯ ಸೇನ್‌ ಮತ್ತು ಶಂಕರ್‌ ಮುತ್ತುಸ್ವಾಮಿ ಮುಖಾಮುಖಿ ಆಗುವುದು. ಅಲ್ಲಿಗೆ ಭಾರತದ ಒಬ್ಬರಿಗೆ ಸೆಮಿಫೈನಲ್‌ ಖಾತ್ರಿಯಾದಂತಾಯಿತು.

ತೃತೀಯ ಶ್ರೇಯಾಂಕದ ಪಿ.ವಿ. ಸಿಂಧು ಕೊರಿಯಾದ ಶುವೊ ಯುನ್‌ ಅವರನ್ನು 21-14, 21-12 ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು.

ಲಕ್ಷ್ಯ ಸೇನ್‌ ಜೆಕ್‌ ಗಣ ರಾಜ್ಯದ ಜಾನ್‌ ಲೌಡ ಅವರನ್ನು 21-8, 23-21ರಿಂದ ಪರಾಭವಗೊಳಿ ಸಿದರು. ಎಸ್‌. ಶಂಕರ್‌ ಮುತ್ತುಸ್ವಾಮಿ ಇಸ್ರೇಲ್‌ನ ಮಿಶಾ ಜಿಲ್ಬರ್ಮನ್‌ಗೆ 21-18, 21-23, 21-13 ಅಂಕ ಗಳಿಂದ ಆಘಾತವಿಕ್ಕಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next