Advertisement

ಯುಎಸ್‌ ಓಪನ್‌ ಸ್ಕ್ವಾಷ್‌: ದೀಪಿಕಾ ವಿರುದ್ಧ ಗೆದ್ದ ಜೋಶ್ನಾ

06:55 AM Oct 10, 2017 | |

ನವದೆಹಲಿ: ಭಾರತದ ರಾಷ್ಟ್ರೀಯ ಚಾಂಪಿಯನ್‌ ಜೋಶ್ನಾ ಚಿನ್ನಪ್ಪ ಯು.ಎಸ್‌.ಓಪನ್‌ ಸ್ಕ್ವಾಷ್‌ನಲ್ಲಿ ಭಾರತದವರೇ ಆದ ಮತ್ತೂಬ್ಬ ತಾರಾ ಆಟಗಾರ್ತಿ ದೀಪಿಕಾ ಪಳ್ಳಿಕಲ್‌ ವಿರುದ್ಧ ಜಯ ಸಾಧಿಸಿದ್ದಾರೆ. 

Advertisement

13ನೇ ಶ್ರೇಯಾಂಕಿತ ಆಟಗಾರ್ತಿ ಜೋಶ್ನಾ 7-11, 11-8, 11-8, 11-9 ರಿಂದ ದೀಪಿಕಾ ವಿರುದ್ಧ ಗೆಲುವು ಪಡೆದರು. ಜೋಶ್ನಾ ಮತ್ತು ದೀಪಿಕಾ ಡಬಲ್ಸ್‌ ವಿಭಾಗದಲ್ಲಿ ಜತೆಗಾರರಾಗಿದ್ದಾರೆ. 45 ನಿಮಿಷದ ಹೋರಾಟದಲ್ಲಿ ಮೊದಲ ಸೆಟ್‌ ಕಳೆದುಕೊಂಡ ಜೋಶ್ನಾ ನಂತರದ ಮೂರು ಸೆಟ್‌ ಗೆದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿ ಜೋಶ್ನಾ ಈಜಿಪ್ಟ್ನ ನೌರನ್‌ ಗೋಹರ್‌ ಸವಾಲನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next