Advertisement
ಸೆಮಿಫೈನಲ್ ಮುಖಾ ಮುಖೀಯಲ್ಲಿ ರಫೆಲ್ ನಡಾಲ್ ಇಟಲಿಯ ಮ್ಯಾಟಿಯೊ ಬೆರೆಟಿನಿ ಅವರನ್ನು 7-6 (8-6), 6-4, 6-1 ಅಂತರದಿಂದ ಪರಾಭವಗೊಳಿಸಿದರೆ, ಡ್ಯಾನಿಲ್ ಮೆಡ್ವಡೇವ್ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಅವರಿಗೆ 7-6 (7-5), 6-4, 6-3ರಿಂದ ಆಘಾತವಿಕ್ಕಿದರು.
23ರ ಹರೆಯದ, 5ನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವಡೇವ್ ಕೇವಲ ಫೈನಲ್ ಮಾತ್ರವಲ್ಲ, ಗ್ರ್ಯಾನ್‌ಸ್ಲಾಮ್ ನಾಕೌಟ್ ತಲುಪಿದ್ದೇ ಇದು ಮೊದಲು. ಆದರೆ ಕಳೆದ 6 ತಿಂಗಳಲ್ಲಿ ಈ ರಶ್ಯನ್ ಟೆನಿಸಿಗನ ಫಾರ್ಮ್ ಅಮೋಘ ಮಟ್ಟದಲ್ಲಿರುವುದು ಗಮನಾ ರ್ಹ. ಆಡಿದ 24 ಪಂದ್ಯಗಳಲ್ಲಿ 22 ಗೆಲುವು ಸಾಧಿಸಿದ್ದಾರೆ. ಸಿನ್ಸಿನಾಟಿಯಲ್ಲಿ ಚಾಂಪಿ ಯನ್ ಆಗಿ ಮೂಡಿ ಬಂದಿದ್ದಾರೆ. ಎಡವಿದ್ದು ವಾಷಿಂಗ್ಟನ್ ಮತ್ತು ಕೆನಡಾ ಕೂಟಗಳ ಫೈನಲ್‌ಗಳಲ್ಲಿ ಮಾತ್ರ.
Related Articles
Advertisement
ಅಸಾಮಾನ್ಯ ಆಟ ಅನಿವಾರ್ಯ“ಮೆಡ್ವಡೇವ್ ಅತ್ಯಂತ ಬಲಿಷ್ಠ ಯುವ ಆಟಗಾರನಾಗಿದ್ದಾರೆ. ಈ ಋತುವಿನಲ್ಲಂತೂ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರೆದುರು ನಾನು ಅಸಾಮಾನ್ಯ ಆಟವನ್ನೇ ಆಡಬೇಕಾಗುತ್ತದೆ’ ಎಂದು ರಫೆಲ್ ನಡಾಲ್ ಫೈನಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಡಾಲ್‌ಗೆ ಸಾಟಿಯೇ?
ಯುಎಸ್ ಓಪನ್ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಇಡುವ ಮೂಲಕ ಡ್ಯಾನಿಲ್ ಮೆಡ್ವಡೇವ್ ಮೈಲುಗಲ್ಲೊಂದನ್ನು ನೆಟ್ಟಿದ್ದಾರೆ. ಅವರು ಒಂದೇ ಋತುವಿನಲ್ಲಿ ವಾಷಿಂಗ್ಟನ್, ಕೆನಡಾ, ಸಿನ್ಸಿನಾಟಿ ಮತ್ತು ನ್ಯೂಯಾರ್ಕ್ ಕೂಟಗಳ ಫೈನಲ್ ತಲುಪಿ ಆ್ಯಂಡ್ರೆ ಅಗಾಸಿ, ಇವಾನ್ ಲೆಂಡ್ಲ್ ಸಾಲಿನಲ್ಲಿ ಕಾಣಿಸಿಕೊಂಡರು. ಆದರೆ ಅಂದಿನ ನ್ಯೂಯಾರ್ಕ್ ಫೈನಲ್‌ನಲ್ಲಿ ಅಗಾಸ್ಸಿ, ಲೆಂಡ್ಲ್ ಇಬ್ಬರೂ ಸೋಲನು ಭವಿಸಿದ್ದರು. ಹೀಗಾಗಿ ಫೈನಲ್‌ನಲ್ಲಿ ಮೆಡ್ವಡೇವ್ ಗೆದ್ದರೆ ಹೊಸ ಇತಿಹಾಸ ಬರೆಯ ಲಿದ್ದಾರೆ. ಮೆಡ್ವಡೇವ್ 2005ರ ಬಳಿಕ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಏರಿದ ರಶ್ಯದ ಮೊದಲ ಟೆನಿಸಿಗನೂ ಹೌದು. ಫೈನಲ್‌ನಲ್ಲಿ ಅವರು ನಡಾಲ್‌ಗೆ ಸಾಟಿಯಾಗುವರೇ ಎಂಬುದು ಎಲ್ಲರ ಕುತೂಹಲ.