Advertisement
ನವೋಮಿ ಒಸಾಕಾ ತಮ್ಮ 4 ಗ್ರ್ಯಾನ್‌ಸ್ಲಾಮ್ ಗೆಲುವುಗಳಲ್ಲಿ ಮೊದಲ ಎರಡನ್ನು ಇಲ್ಲಿಯೇ ಜಯಿಸಿದ್ದರು (2018, 2020). ಆದರೆ ಉಳಿದ ಮಾಜಿ ಚಾಂಪಿಯನ್‌ಗಳಂತೆ ಒಸಾಕಾ ಅವರಿಗೆ ಈ ಬಾರಿ ನೇರ ಆಯ್ಕೆ ಸಾಧ್ಯವಾಗಲಿಲ್ಲ. ಉನ್ನತ ರ್‍ಯಾಂಕಿಂಗ್ ಕೂಡ ಹೊಂದಿರಲಿಲ್ಲ.
Related Articles
Advertisement
39 ವರ್ಷದ ಸ್ಟಾನಿಸ್ಲಾಸ್ ವಾವ್ರಿಂಕ 2016ರ ಯುಎಸ್ ಓಪನ್ ಚಾಂಪಿಯನ್. ಒಂದು ಕಾಲದಲ್ಲಿ ನಂ.3 ಟೆನಿಸಿಗನಾಗಿದ್ದ ವಾವ್ರಿಂಕ, ಈಗ ನೂರರಾಚೆ ಕುಸಿದಿದ್ದಾರೆ. ಇದು ಅವರ 72ನೇ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ. ಸಾರ್ವಕಾಲಿಕ ದಾಖಲೆಯ ಯಾದಿಯಲ್ಲಿ ಇವರಿಗೆ 5ನೇ ಸ್ಥಾನ.
ಇತರ ವೈಲ್ಡ್‌ಕಾರ್ಡ್ ಪ್ರವೇಶಿಗರುವೈಲ್ಡ್ಕಾರ್ಡ್ ಪಡೆದ ಇತರ ಆಟಗಾರ್ತಿಯ ರೆಂದರೆ ಅಮೆರಿಕದ ಅಮಂಡಾ ಅನಿಸಿಮೋವಾ, ಮೆಕಾರ್ಟಿನಿ ಕೆಸ್ಲರ್, ಅಲೆಕ್ಸಾ ನೋಯೆಲ್, ಇವಾ ಜೋವಿಕ್, ಫ್ರಾನ್ಸ್‌ನ ಕ್ಲೋ ಪಾಕೆಟ್, ಆಸ್ಟ್ರೇಲಿಯದ ಟಾಯ್ಲಾ ಪ್ರಸ್ಟನ್. ಪುರುಷರ ವಿಭಾಗದಿಂದ ಅಮೆರಿಕದ ಕ್ರಿಸ್ ಯೂಬ್ಯಾಂಕ್ಸ್, ಲರ್ನರ್ ಟೀನ್, ಝಕಾರಿ ಸ್ವಾಕ, ಮ್ಯಾಥ್ಯೂ ಫೋರ್ಬ್ಸ್ , ಫ್ರಾನ್ಸ್‌ನ ಅಲೆಕ್ಸಾಂಡ್ರೆ ಮುಲ್ಲರ್, ಆಸ್ಟ್ರೇಲಿಯದ ಟ್ರಿಸ್ಟನ್ ಸ್ಕೂಲ್‌ಕೇಟ್ ವೈಲ್ಡ್‌ಕಾರ್ಡ್ ಪಡೆದಿದ್ದಾರೆ.