Advertisement
ಭುಜದ ಗಾಯದಿಂದ ಚೇತರಿಸಿಕೊಂಡಿರುವ ಕಶ್ಯಪ್ ಅಮೋಘ ಆಟದ ಪ್ರದರ್ಶನ ನೀಡಿ ವಿಶ್ವದ 15ನೇ ರ್‍ಯಾಂಕಿನ ಹ್ಯುನ್ ಅವರನ್ನು 21-16, 10-21, 21-19 ಗೇಮ್‌ಗಳಿಂದ ಉರುಳಿಸಿದರು. ಈ ಹೋರಾಟ ಒಂದು ತಾಸು ಮತ್ತು 3 ನಿಮಿಷಗಳವರೆಗೆ ಸಾಗಿತ್ತು. ದ್ವಿತೀಯ ಸುತ್ತಿನಲ್ಲಿ ವಿಶ್ವದ 59ನೇ ರ್‍ಯಾಂಕಿನ ಕಶ್ಯಪ್ ಹಂಗೇರಿಯ ಗಾಗ್ಲೆì ಕ್ರುಝ್ ಅವರನ್ನು ಎದುರಿಸಲಿದ್ದಾರೆ.
Related Articles
ವನಿತೆಯರ ಸಿಂಗಲ್ಸ್‌ನಲ್ಲಿ ರಿತುಪರ್ಣ ದಾಸ್ ಅವರು ಕೆನಡದ ರಚೆಲ್ ಹೊಂಡೆರಿಚ್ ಅವರನ್ನು 21-16, 21-18 ಗೇಮ್‌ಗಳಿಂದ ಕೆಡಹಿದರೆ ಶ್ರೀಕೃಷ್ಣ ಪ್ರೀಯ ಕುಡರವಲ್ಲಿ ಅಮೆರಿಕದ ಮಾಯಾ ಚೆನ್ ಅವರನ್ನು 21-13, 21-16 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು. ಆದರೆ ಲಖಾನಿ ಸಾರಂಗ್, ಅಭಿಷೇಕ್ ಯೆಳೆಗಾರ್, ಸಾಯಿ ಉತ್ತೇಜಿತಾ ರಾವ್ ಚುಕ್ಕ, ರೇಶ್ಮಾ ಕಾರ್ತಿಕ್ ಮತ್ತು ರುತ್ವಿಕಾ ಶಿವಾನಿ ಗಾಡೆ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ.
Advertisement
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಅವರು ಕೆನಡದ ಜಾಸನ್ ಅಂತೋನಿ ಹೊ-ಶುಯಿ ಮತ್ತು ನಿಲ್ ಯಾಕುರ ಅವರನ್ನು 21-15, 21-19 ಗೇಮ್‌ಗಳಿಂದ ಸೋಲಿಸಿದರೆ ಫ್ರಾನ್ಸಿಸ್ ಅಲ್ವಿನ್ ಮತ್ತು ತರುಣ್ ಕೋನ ಅವರು ಸ್ಥಳೀಯ ಪ್ರತಿಭೆ ಯಾನ್ ಟಕ್ ಚಾನ್ ಮತ್ತು ಬ್ರಿಯಾನ್ ಚಿ ಚೆಂಗ್ ಅವರನ್ನು 21-3, 21-10 ಗೇಮ್‌ಗಳಿಂದ ಮಣಿಸಿದರು.
ಮಿಕ್ಸೆಡ್ ಡಬಲ್ಸ್‌ನಲ್ಲಿ ಮನು ಮತ್ತು ಮನೀಷಾ ಅವರು ಕೆನಡದ ನಿಲ್ ಯಾಕುರ ಮತ್ತು ಬ್ರಿಟ್ನಿ ಟಾಮ್ ಅವರನ್ನು21-13, 21-15 ಗೇಮ್‌ಗಳಿಂದ ಪರಾಭವಗೊಳಿಸಿದರೆ ಮೂರನೇ ಶ್ರೇಂಯಾಂಕದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಅವರು ಇಂಗ್ಲೆಂಡಿನ ಬೆನ್ ಲೇನ್ ಮತ್ತು ಜೆಸ್ಸಿಕಾ ಪುಗ್ ಅವರಿಗೆ 21-19, 19-21, 17-21 ಗೇಮ್‌ಗಳಿಂದ ಶರಣಾದರು.