ವಾಷಿಂಗ್ಟನ್:ಕೋವಿಡ್ 19 ಸೋಂಕು ಆರಂಭಗೊಂಡಾಗಿನಿಂದಲೂ ಅಮೆರಿಕದಲ್ಲಿ ಸೋಂಕು ಏರಿಕೆಯಾಗುತ್ತಲೇ ಇದ್ದು, ಈವರೆಗೆ 5ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ವರ್ಷದ ಅಂತ್ಯದವರೆಗೂ ಸೋಂಕು ನಿಯಂತ್ರಿಸುವುದು ಕಷ್ಟಕರವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ರಾಮಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿದ್ದಾರೆ: ಎಸ್ ಟಿ ಸೋಮಶೇಖರ್
ಕೋವಿಡ್ ಸೋಂಕಿಗೆ ಲಸಿಕೆ ಬಂದ ನಂತರ ಚಳಿಗಾಲದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಲಿದೆ ಎಂದು ವಿಶ್ವಾಸ ಹೊಂದಲಾಗಿತ್ತು. ಆದರೆ ದೇಶದಲ್ಲಿ ಕೋವಿಡ್ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ವರದಿ ತಿಳಿಸಿದೆ.
ಇದೊಂದು ಭೀಕರ ಪರಿಸ್ಥಿತಿಯಾಗಿದೆ. ನಾವು 1918ರಲ್ಲಿ ಇನ್ ಫ್ಲುಯೆಂಜಾ ಸೋಂಕು ಹರಿಡಿದ್ದ ಬಳಿಕ ಸುಮಾರು ನೂರು ವರ್ಷಗಳಲ್ಲಿಯೇ ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲವಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಮುಖ್ಯ ಆರೋಗ್ಯ ಸಲಹೆಗಾರ ಆತಂಕ ವ್ಯಕ್ತಪಡಿಸಿರುವುದಾಗಿ ಎನ್ ಬಿಸಿ ವರದಿ ಮಾಡಿದೆ.
ಅಮೆರಿಕದಲ್ಲಿನ ಕೋವಿಡ್ 19 ಸಾವಿನ ಸಂಖ್ಯೆಯನ್ನು ಗಮನಿಸಿದರೆ ಅಚ್ಚರಿಪಡಬೇಕಾಗುತ್ತದೆ. ಆದರೆ ಇದು ಸತ್ಯ. ಜಾನ್ಸ್ ಹಾಪ್ ಕಿನ್ಸ್ ಯೂನಿರ್ವಸಿಟಿ ವೆಬ್ ಸೈಟ್ ನಲ್ಲಿನ ಅಂಕಿಅಂಶದ ಪ್ರಕಾರ ಈವರೆಗೆ ಕೋವಿಡ್ ಗೆ 4,98,000 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
2020ರ ಫೆಬ್ರುವರಿಯಲ್ಲಿ ಕೋವಿಡ್ 19 ಸೋಂಕಿಗೆ ಮೊದಲ ಸಾವು ಸಂಭವಿಸಿದೆ ಎಂದು ಅಮೆರಿಕ ಘೋಷಿಸಿದ ಸುಮಾರು 3 ತಿಂಗಳ ಬಳಿಕ ಸಾವಿನ ಸಂಖ್ಯೆ 1,00,000ಕ್ಕೆ ಏರಿಕೆಯಾಗಿತ್ತು ಎಂದು ಹೇಳಿದೆ.