Advertisement

Terrible; ಮಹಿಳೆಯ ತುಂಡಾದ ಕಾಲನ್ನು ತಿನ್ನುತ್ತಾ ರಸ್ತೆಯಲ್ಲಿ ಹೋದ ಯುವಕ!

09:58 PM Mar 23, 2024 | Team Udayavani |

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯ ತುಂಡಾದ ಕಾಲನ್ನು ಹಿಡಿದುಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

Advertisement

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ವ್ಯಕ್ತಿ ಕಾಲು ಹಿಡಿದುಕೊಂಡಿದ್ದು ಅದರ ಕೆಲವು ಭಾಗವನ್ನು ಮೂಗು ಮುಚ್ಚಿಕೊಂಡು ತಿನ್ನುತ್ತಿರುವುದು ಕಂಡು ಬಂದಿದೆ. ಯುಎಸ್ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಬಂಧಿತ 27 ವರ್ಷದ ರೆಸೆಂಡೋ ಟೆಲ್ಲೆಜ್ ಎಂದು ಗುರುತಿಸಲಾಗಿದೆ.

ಬೇಕರ್ಸ್‌ಫೀಲ್ಡ್‌ನ ವಾಯುವ್ಯ ಭಾಗದ 40 ಕಿಲೋಮೀಟರ್ ದೂರದಲ್ಲಿರುವ ಆಮ್‌ಟ್ರಾಕ್ ನಿಲ್ದಾಣದಲ್ಲಿ ಪಾದಚಾರಿ ಮಹಿಳೆಯೊಬ್ಬರು ರೈಲಿಗೆ ಸಿಲುಕಿದ ವರದಿ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ರೆಸೆಂಡೋ ಟೆಲ್ಲೆಜ್ ಅಪಘಾತದ ಸ್ಥಳದಿಂದ ತುಂಡಾದ ಕಾಲು ತೆಗೆದು ಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾರೆ. ಯುವಕನನ್ನು ಅನೇಕ ಬಾಕಿ ಇರುವ ವಾರಂಟ್‌ಗಳಲ್ಲಿ ಘಟನಾ ಸ್ಥಳದಿಂದ ಸಾಕ್ಷ್ಯವನ್ನು ತೆಗೆದುಕೊಂಡಿದ್ದಕ್ಕಾಗಿ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next