Advertisement

ಭೇಟೆಗೆಂದು ತೆರೆಳಿದ್ದ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಶ್ವಾನ ! ನಡೆದಿದ್ದರೂ ಏನು?

08:14 PM Jan 25, 2023 | Team Udayavani |

ವಾಷಿಂಗ್ಟನ್‌: ಸಾಕು ಶ್ವಾನದೊಂದಿಗೆ ಭೇಟೆಗೆಂದು ತೆರೆಳಿದ್ದ ವ್ಯಕ್ತಿಯನ್ನು ಶ್ವಾನವೇ ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.

Advertisement

ವ್ಯಕ್ತಿಯೊಬ್ಬ ಶ್ವಾನದೊಂದಿಗೆ ಭೇಟೆಗೆಂದು ಮಿನಿ ಟ್ರಕ್‌ನಲ್ಲಿ ತೆರಳಿದ್ದಾನೆ. ಈ ವೇಳೆ ಗನ್‌ ಅನ್ನು ಬುಲೆಟ್‌ ಲೋಡ್‌ ಮಾಡಿ,ಹಿಂಬದಿಯ ಸೀಟ್‌ನಲ್ಲಿ ಇರಿಸಲಾಗಿದ್ದು, ಚಾಲಕ ಮತ್ತು ಭೇಟೆಗೆ ತೆರಳುತ್ತಿದ್ದ ವ್ಯಕ್ತಿ ಇಬ್ಬರು ಮುಂಬದಿಯಲ್ಲಿ ಕುಳಿತಿದ್ದಾರೆ. ಅಚಾನಕ್ಕಾಗಿ ಶ್ವಾನ ಹಿಂಬದಿಯಲ್ಲಿದ್ದ ಗನ್‌ ಮೇಲೆ ಕಾಲಿಟ್ಟಿದ್ದು, ಈ ವೇಳೆ ಬುಲೆಟ್‌ ಫೈರ್‌ ಆಗಿದೆ ಎಂದು ಕನ್ಸಾಸ್‌ ಪೊಲೀಸರು ತಿಳಿಸಿದ್ದಾರೆ.

ಮುಂಬದಿ ಸೀಟ್‌ನಲ್ಲಿದ್ದ ಚಾಲಕನಿಗೆ ಯಾವುದೇ ಅಪಾಯವಾಗಿರಲಿಲ್ಲ. ಆದರೆ, ಭೇಟೆಗೆ ತೆರಳಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಆತ ಶ್ವಾನದ ಮಾಲೀಕನೇ, ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಅಮೆರಿಕದಲ್ಲಿ ಮನಷ್ಯರಿಗಿಂತ ಹೆಚ್ಚು ಗನ್‌ಗಳೇ ಇವೆ ಎನ್ನುವ ಮಾತೂ ಇದ್ದು, ಪದೇ ಪದೇ ಮಿಸ್‌ ಫೈಯರಿಂಗ್‌ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ವರದಿಯೊಂದರ ಪ್ರಕಾರ 2021ರ ಇದೇ ಕಾರಣಕ್ಕಾಗಿ 500 ಮಂದಿ ಮೃತರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಲೇಜು ಬಸ್ – ಲಾರಿ ನಡುವೆ ಅಪಘಾತ: ಬಸ್ ಚಾಲಕ ಗಂಭೀರ, ವಿದ್ಯಾರ್ಥಿಗಳು ಪಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next