Advertisement

ದೀಪಾವಳಿಗೆ ಸಾರ್ವಜನಿಕ ರಜೆ: ಅಮೆರಿಕದಲ್ಲಿ ವಿಧೇಯಕ ಮಂಡನೆ

07:20 PM Nov 04, 2021 | Team Udayavani |

ವಾಷಿಂಗ್ಟನ್‌: ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಮುಂದೆ ಅಮೆರಿಕದಲ್ಲೂ ಸಾರ್ವಜನಿಕ ರಜೆ ಘೋಷಣೆಯಾಗಲಿದೆಯೇ? ದೀಪಾವಳಿ ಹಬ್ಬವನ್ನು ರಾಷ್ಟ್ರೀಯ ರಜಾದಿನ ಎಂದು ಘೋಷಿಸುವಂತೆ ಕೋರಿದ ವಿಧೇಯಕವೊಂದನ್ನು ಬುಧವಾರ ಇಲ್ಲಿನ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಮಂಡನೆ ಮಾಡಲಾಗಿದೆ.

Advertisement

ನ್ಯೂಯಾರ್ಕ್‌ನ ಕಾಂಗ್ರೆಸ್‌ನ ಸದಸ್ಯೆ ಕೆರೋಲಿನ್‌ ಬಿ. ಮೆಲೋನಿ ನೇತೃತ್ವದ ಜನಪ್ರತಿನಿಧಿಗಳ ನಿಯೋಗ ಈ ವಿಧೇಯಕ ಮಂಡಿಸಿದೆ. ಈ ಐತಿಹಾಸಿಕ ವಿಧೇಯಕಕ್ಕೆ ಭಾರತೀಯ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ವಿವರಿಸುವಂಥ ನಿರ್ಣಯವನ್ನು ಕೃಷ್ಣಮೂರ್ತಿ ಯುಎಸ್‌ ಕಾಂಗ್ರೆಸ್‌ನಲ್ಲಿ ಮಂಡಿಸಿದ್ದಾರೆ.

ಈ ಭೀಕರ ಸೋಂಕಿನ ಕರಾಳತೆಯಿಂದ ನಾವೀಗ ಹೊರಬರುತ್ತಿದ್ದೇವೆ. ದೀಪಾವಳಿಯನ್ನು ಸಾರ್ವಜನಿಕ ರಜಾದಿನ ಎಂದು ಘೋಷಿಸಲು ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ. ಇದು ಕತ್ತಲೆಯ ವಿರುದ್ಧ ಬೆಳಕಿನ ಜಯ, ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯ, ನಿರ್ಲಕ್ಷ್ಯದ ವಿರುದ್ಧ ಜ್ಞಾನದ ಜಯವನ್ನು ಪ್ರತಿಬಿಂಬಿಸುವಂಥದ್ದು ಎಂದು ಮೆಲೋನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next