ವಾಷಿಂಗ್ಟನ್: ಅಮೆರಿಕಕ್ಕೆ ಪ್ರವಾಸ, ಶಿಕ್ಷಣ ನಿಮಿತ್ತ ತೆರಳುವವರಿಗೆ ಕಹಿ ಸುದ್ದಿ ಕಾದಿದೆ. ಮೇ 30ರಿಂದ ಅನ್ವಯವಾಗುವಂತೆ ಪ್ರವಾಸಿ ವೀಸಾ, ವಿದ್ಯಾರ್ಥಿ ವೀಸಾ ಶುಲ್ಕ ಏರಿಕೆ ಮಾಡುವ ಬಗ್ಗೆ ಆ ದೇಶದ ವಿದೇಶಾಂಗ ಇಲಾಖೆ ತೀರ್ಮಾನ ಕೈಗೊಂಡಿದೆ.
ಎರಡೂ ವಿಭಾಗದ ವೀಸಾ ಶುಲ್ಕ 160 ಅಮೆರಿಕನ್ ಡಾಲರ್‌ಗಳಿಂದ 185 ಡಾಲರ್‌ವರೆಗೆ ಪರಿಷ್ಕರಿಸಲಾಗಿದೆ.
ಇದಲ್ಲದೆ ತಾತ್ಕಾಲಿಕವಾಗಿ ವೀಸಾ ಪಡೆದು ಅಮೆರಿಕಕ್ಕೆ ಕೆಲಸಕ್ಕಾಗಿ ಬರುವ ವರ್ಗದ ವೀಸಾ (ಎಚ್, ಎಲ್, ಒ, ಪಿ, ಕ್ಯೂ ಮತ್ತು ಆರ್)ಶುಲ್ಕವನ್ನು ಕೂಡ 190 ಅಮೆರಿಕನ್ ಡಾಲರ್‌ಗಳಿಂದ 205 ಅಮೆರಿಕನ್ ಡಾಲರ್ ವರೆಗೆ ಪರಿಷ್ಕರಿಸಲು ನಿರ್ಧರಿಸಲಾಗಿದೆ.
ಪ್ರವಾಸಿ ಮತ್ತು ವಿದ್ಯಾರ್ಥಿ ವೀಸಾ ಶುಲ್ಕವನ್ನು 2012, ಇನ್ನಿತರ ವರ್ಗದ ವೀಸಾಗಳ ಶುಲ್ಕವನ್ನು 2014ರಲ್ಲಿ ಪರಿಷ್ಕರಿಸಲಾಗಿತ್ತು.