Advertisement

ಕಾರ್ಲ್ಸನ್‌ ವಿರುದ್ಧ 828 ಕೋ. ರೂ. ಮಾನಹಾನಿ ಮೊಕದ್ದಮೆ

11:00 PM Oct 21, 2022 | Team Udayavani |

ನ್ಯೂಯಾರ್ಕ್‌: ನಾರ್ವೆಯ ಚೆಸ್‌ ದಂತಕತೆ ಮ್ಯಾಗ್ನಸ್‌ ಕಾರ್ಲ್ಸನ್‌ ವಿರುದ್ಧ ಅಮೆರಿಕದ ಗ್ರ್ಯಾನ್‌ ಮಾಸ್ಟರ್‌ ಹ್ಯಾನ್ಸ್‌ ನೀಮನ್‌ 828 ಕೋಟಿ ರೂ. (100 ಮಿಲಿಯನ್‌ ಡಾಲರ್‌) ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕಾರ್ಲ್ಸನ್‌ ಮಾನಹಾನಿ ಮಾಡಿದ್ದಾರೆ, ಅಪನಿಂದೆ ಮಾಡಿದ್ದಾರೆ, ನಿಯಮಬಾಹಿರವಾಗಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ, ಅನಗತ್ಯವಾಗಿ ತನ್ನ ಜೀವನದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ ಎಂದು ನೀಮನ್‌ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ. ಅಮೆರಿಕದ ಪೂರ್ವ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇವೆಲ್ಲವೂ ಶುರುವಾಗಿದ್ದು ಸೆ. 4ರಂದು ನಡೆದ ಸಿಂಖ್‌ಫೀಲ್ಡ್‌ ಕಪ್‌ ಚೆಸ್‌ ಪಂದ್ಯದಿಂದ. ಅವತ್ತು ಕಾರ್ಲ್ಸನ್‌ ಅವರನ್ನು ಹ್ಯಾನ್ಸ್‌ ನೀಮನ್‌ ಸೋಲಿಸಿದ್ದರು. ಅದರ ಮರುದಿನ ಕಾಲ್ಸìನ್‌ ಕೂಟದಿಂದಲೇ ಹಿಂದೆ ಸರಿದರು. ಮುಂದಿನ ವಾರ ಆನ್‌ಲೈನ್‌ ಮೂಲಕ ಜೂಲಿಯಸ್‌ ಬೇಯರ್‌ ಕಪ್‌ ನಡೆಯಿತು. ಅಲ್ಲಿ ನೀಮನ್‌ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ಬಾರಿ ಕಾಯಿ ನಡೆಸಿ, ಕಾರ್ಲ್ಸನ್‌ ಪಂದ್ಯದಿಂದಲೇ ಹಿಂದೆ ಸರಿದರು! ಅನಂತರ ಟ್ವೀಟ್‌ ಮಾಡಿ ನೀಮನ್‌ ಇತ್ತೀಚೆಗಿನ ಪಂದ್ಯಗಳಲ್ಲಿ ಬಹಳ ಮೋಸ ಮಾಡಿದ್ದಾರೆ, ಅವರು ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚು ಮೋಸವೆಸಗಿದ್ದಾರೆ ಎಂದಿದ್ದರು.

ವಿಶೇಷವೆಂದರೆ ಸ್ವತಃ ನೀಮನ್‌ ತಾನು 12, 16ನೇ ವರ್ಷದಲ್ಲಿದ್ದಾಗ ಆನ್‌ಲೈನ್‌ ಚೆಸ್‌ನಲ್ಲಿ ಮೋಸ ಮಾಡಿದ್ದೆ, ಆದರೆ ನೇರವಾಗಿ ಆಡುವಾಗ ಯಾವತ್ತೂ ಹಾಗೆ ಮಾಡಿಲ್ಲ ಎಂದಿದ್ದರು. ನೀಮನ್‌ ಮೋಸದಾಟದ ಬಗ್ಗೆ ಆನ್‌ಲೈನ್‌ ತಾಣ ಚೆಸ್‌.ಕಾಮ್‌ ತನಿಖೆ ನಡೆಸಿ, ನೀಮನ್‌ 100ಕ್ಕೂ ಅಧಿಕ ಚೆಸ್‌ ಪಂದ್ಯಗಳಲ್ಲಿ ಮೋಸ ಮಾಡಿದ್ದಾರೆ ಎಂದು ವರದಿ ನೀಡಿತ್ತು.

ವಿಚಿತ್ರವೆಂದರೆ, ಸೋಲೇ ಇಲ್ಲದ ಸರದಾರನೆಂಬಂತೆ ಹಲವು ವರ್ಷಗಳಿಂದ ಮೆರೆದಾಡುತ್ತಿದ್ದ ಕಾರ್ಲ್ಸನ್‌ ಇತ್ತೀಚೆಗೆ ಸೋಲುತ್ತಿದ್ದಾರೆ. ಪ್ರಜ್ಞಾನಂದ, ಅರ್ಜುನ್‌ ಎರಿಗೈಸಿ, ಡಿ.ಗುಕೇಶ್‌ ಕೂಡ ಅವರನ್ನು ಮಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next