Advertisement

US Election 2024: ಕಮಲಾ ಹ್ಯಾರಿಸ್ ಗೆದ್ದರೆ ಇತಿಹಾಸ- ಟ್ರಂಪ್ ಗೆದ್ದರೆ ಫಲಿತಾಂಶ..?

05:20 PM Nov 04, 2024 | Team Udayavani |

ಇದಾಗಲೇ ದೊಡ್ಡಣ್ಣ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ ಮುಗಿಲು ಮುಟ್ಟಿದೆ. ಅಮೇರಿಕಾದ 235ವರುಷಗಳ ಅಧ್ಯಕ್ಷೀಯ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷ ಗಿರಿಯನ್ನು ಸ್ವೀಕರಿಸ ಬಹುದೇ ಅನ್ನುವ ಅತಿದೊಡ್ಡ ಪ್ರಶ್ನೆ ವಿಶ್ವದ ಎಲ್ಲೆಡೆ ಮೂಡಿ ಬರುತ್ತಿದೆ.ಬಹು ಮುಖ್ಯವಾಗಿ ಭಾರತದ ಪಾಲಿಗೆ ಭಾರತ ಮೂಲದ ಕಮಲ ಅಮೇರಿಕಾದಲ್ಲಿ ಗದ್ದುಗೆ ಅಲಂಕರಿಸ ಬಹುದೇ ಅನ್ನುವ ಇನ್ನೊಂದು ಸೇೂಜಿಗದ ಪ್ರಶ್ನೆ ಎದ್ದಿದೆ.ಇದರ ಜೊತೆಗೆ ಟ್ರಂಪ್ ಗೆದ್ದರೆ ಭಾರತಕ್ಕೆ ಅನುಕೂಲವಿದ್ದರು ಕೂಡ ಭಾರತದ ಕಮಲ ಅಮೇರಿಕಾದಲ್ಲಿ ಅರಳುವುದು ಇದೊಂದು ಇನ್ನೊಂದು ಇತಿಹಾಸದ ಸೃಷ್ಟಿಗೆ ಕಾರಣವೂ ಆದೀತು.

Advertisement

ಮೊದಲ ಹಂತದಲ್ಲಿ ಎರಡು ಪಕ್ಷಗಳು ಅಂದರೆ ರಿಪಬ್ಲಿಕ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಜನಾಭಿಪ್ರಾಯ ಸಂಗ್ರಹ ನಡೆಸಿ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಾಗಿದೆ. ಡೆಮಾಕ್ರಟಿಕ್ ಪಕ್ಷದಿಂದ ಮಹಿಳಾ ಅಭ್ಯರ್ಥಿಯಾಗಿ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿರುವ ಕಮಲಾ ಹ್ಯಾರಿಸ್ ಕನಸು ಕಟ್ಟಿ ಕೊಂಡಿದ್ದರೆ ಎರಡನೇ ಬಾರಿ ಅಧ್ಯಕ್ಷ ಪೀಠ ಏರಲು ಸನ್ನಧರಾಗಿರುವ 78ರ ಹರೆಯದ ಡೇೂನಾಲ್ಡ್ ಟ್ರಂಪ್ ಹೇೂರಾಟದ ಮುಂಚೂಣಿಯಲ್ಲಿ ನಿಂತಿದ್ದಾರೆ.‌

ಅಮೇರಿಕಾ ಈ ವರೆಗಿನ 235 ವರುಷಗಳ ಚುನಾವಣಾ ಇತಿಹಾಸದಲ್ಲಿ 59ಮಂದಿ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಪ್ರಸ್ತುತ 47 ನೇ ಚುನಾವಣೆಯಲ್ಲಿ 60 ನೇ ಅಧ್ಯಕ್ಷರನ್ನು ಚುನಾಯಿಸುವ ರಣರಂಗದ ಕಾವು ಅಂತಿಮ ಘಟ್ಟಕ್ಕೆ ಬಂದು(ನ.೦5ರಂದು ಚುನಾವಣೆ) ತಲುಪಿದೆ.

ಮೊದಲ ಅಧ್ಯಕ್ಷರಾದ ಜಾರ್ಜ್ ವಾಷಿಂಗ್ಟನ್ (1789-1796)ದ್ವಿತೀಯ ಅಧ್ಯಕ್ಷ ಜಾನ್‌ ಆ್ಯಡಮ್ಸ್ 1796-1800) ಇವರು ಅವಿರೇೂಧವಾಗಿ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರರಾದವರು. ಅನಂತರದಲ್ಲಿ ನಡೆದ ಚುನಾವಣೆಗಳು ಪಕ್ಷದ ಆಧಾರದಲ್ಲಿಯೇ ನಡೆದ ಚುನಾವಣೆಗಳು.ಒಟ್ಟು ಸರಾಸರಿ ನೇೂಡುವಾಗ ರಿಪಬ್ಲಿಕ್ ಪಕ್ಷದವರೇ ಅತಿ ಹೆಚ್ಚಿನ ಬಾರಿ ತನ್ನ ಅಧ್ಯಕ್ಷರನ್ನು ವೈಟ್ ಹೌಸ್ ಗೆ ಕಳುಹಿಸಿದ ಉದಾಹರಣೆಗಳು ಎದ್ದು ಕಾಣುತ್ತದೆ.

Advertisement

ವಿಲಿಯಂ ಹೆನ್ರಿ , ಹ್ಯಾರಿಸನ್ , ಜಚರಿ ಟೇಲರ್ , ವಾರನ್ ಟಿ.ಹಾರ್ಡಿಂಜ್, ಫ್ರಾಂಕ್ಲಿನ್ ಡಿ.ರೂಸ್‌ವೆಲ್ಟ್ ..ಇವರೆಲ್ಲರೂ ಅಧ್ಯಕ್ಷ ರಾಗಿರುವಾಗಲೇ ನಿಧನರಾದವರು.ಆದರೆ ಅಬ್ರಹಾಮ್ ಲಿಂಕನ್, ಜೇಮ್ಸ್ ಗಾರ್ ಫೀಲ್ಡ್, ವಿಲಿಯಮ್ ಮ್ಯಾಕೆನ್ಸಿ, ಜಾನ್ ಎಫ್ .ಕೆನಡಿ ಅಧಿಕಾರದಲ್ಲಿರುವಾಗಲೇ ಹತ್ಯೆಗೊಳಗಾದ ಅಧ್ಯಕ್ಷರು.

ಅಮೇರಿಕಾದ ದ್ವಿತೀಯ ಅಧ್ಯಕ್ಷ ಜಾನ್ ಆಡ್ಯಮ್ ಅವರ ಪುತ್ರ ಜಾನ್ ಆ್ಯಡಮ್ಸ್ ಆರನೆಯ ಅಧ್ಯಕ್ಷರಾಗಿ ಆಯ್ಕೆ, ಜಾರ್ಜ್ ಬುಶ್ 41ನೇ ಅಧ್ಯಕ್ಷರಾಗಿ ಮತ್ತು ಅವರ ಪುತ್ರ ಜಾರ್ಜ್ ಡಬ್ಲ್ಯು ಬುಶ್ ಅಧ್ಯಕ್ಷ ರಾಗಿ ಆಯ್ಕೆಯಾದ ಕುಟುಂಬ ಪರಂಪರೆಯ ರಾಜಕೀಯವನ್ನು ಅಮೇರಿಕಾದಲ್ಲಿ ಕಾಣ ಬಹುದಾಗಿದೆ.‌

ಅಮೇರಿಕಾದ ಅಧ್ಯಕ್ಷರ ಸ್ಥಾನ ಮಾನ ಎಷ್ಟೊಂದು ಹಿರಿದು ಅನ್ನುವುದನ್ನು ಅಮೇರಿಕಾದ ಮಾಜಿ ಅಧ್ಯಕ್ಷ ವುಡ್ರೊವಿಲ್ಸನ್ ರ ಹೇಳಿಕೆ ಸಾಬೀತು ಪಡಿಸುತ್ತದೆ.”ಅಮೇರಿಕಾದ ಅಧ್ಯಕ್ಷ ಬರೇ ಒಂದು ಚುನಾವಣಾ ಕ್ಷೇತ್ರದ ಪ್ರತಿನಿಧಿಯಲ್ಲ ಬದಲಾಗಿ ಇಡಿ ರಾಷ್ಟ್ರ ದ ಪ್ರತಿನಿಧಿ” ಎಂದು ಹೇಳಿದ್ದರೆ, “ಅಮೇರಿಕಾದ ಅಧ್ಯಕ್ಷ ರಾಷ್ಟ್ರದ ವಾಣಿ ಮಾತ್ರವಲ್ಲ ವಿಶ್ವದ ವಾಣಿ” ಅನ್ನುವ ತರದಲ್ಲಿ ವೈಭವೀಕರಿಸಿ ವ್ಯಾಖ್ಯಾನಿಸಿದ್ದಾರೆ ರಾಜಕೀಯ ಚಿಂತಕ ಹಾಕಿನ್ಸ್‌ರವರು.

ಇಂತಹ ಒಬ್ಬ ದೇಶದ ಮುಖ್ಯಸ್ಥನನ್ನು ಅಮೇರಿಕಾದ ಮತದಾರರು ಹೇಗೆ ಆಯ್ಕೆ ಮಾಡುತ್ತಾರೆ ಅನ್ನುವ ಕುತೂಹಲ ಸಹಜವೆ?ಒಂದು ಅರ್ಥದಲ್ಲಿ ಅಮೇರಿಕಾದ ಅಧ್ಯಕ್ಷ ಜನರಿಂದ ನೇರವಾಗಿ ಚುನಾಯಿತನಾಗುತ್ತಾನೆ ಅನ್ನುವ ಅಭಿಪ್ರಾಯವಿದ್ದರೂ ಕೂಡಾ ಇದನ್ನು ನೇರ ಚುನಾವಣೆ ಎಂದು ಕರೆಯುವುದು ತಪ್ಪು.ಅಧ್ಯಕ್ಷ ರನ್ನು ಚುನಾಯಿಸುವುದಕ್ಕಾಗಿಯೇ ವಿಶೇಷವಾಗಿ ಚುನಾಯಿಸಲ್ಪಟ್ಟ ಸದಸ್ಯರ ಗುಂಪು ಅಥಾ೯ತ ಚುನಾವಣಾ ಕಾಲೇಜಿನ electoral college) ಸದಸ್ಯರಿಂದಲೇ ಅಧ್ಯಕ್ಷನ ಆಯ್ಕೆ ನಡೆಯುತ್ತದೆ. ಈಗ ಬೇರೆ ಬೇರೆ ರಾಜ್ಯ ಗಳಿಂದ ನಡೆಸುತ್ತಿರುವ ಚುನಾವಣೆ ಈ ಚುನಾವಣಾ ಕಾಲೇಜಿಗೆ ಸದಸ್ಯರನ್ನು ಆಯ್ಕೆ ಮಾಡುತ್ತಿದೆ.ಹಾಗಾಗಿ ಈ ಚುನಾವಣೆ ನಡೆದ ಅನಂತರದಲ್ಲಿ ಅಂದರೆ ನವಂಬರ್ 5 ರ ಅನಂತರದಲ್ಲಿ ಅಮೇರಿಕಾದ ಮುಂದಿನ ಅಧ್ಯಕ್ಷರು ಯಾರಾಗ ಬಹುದು ಅನ್ನುವ ಸ್ವಷ್ಟ ಚಿತ್ರಣ ಲಭ್ಯವಾಗುತ್ತದೆ.

ಅಮೇರಿಕಾದ ಅಧ್ಯಕ್ಷರನ್ನು ನಮ್ಮ ಹಾಗೆ ಸಂಸತ್ತಿನ ಸದಸ್ಯರು ಆಯ್ಕೆ ಮಾಡುವುದಲ್ಲ ಬದಲಾಗಿ ಅಲ್ಲಿನ ಈ ವಿಶೇಷ ಮತದಾರರ ಮಂಡಳಿ ಅರ್ಥಾತ್ electoral collegeನ ಸದಸ್ಯರು ಆಯ್ಕೆ ಮಾಡುತ್ತಾರೆ.ಹಾಗಾದರೆ ಈ ಮತದಾರರ ಕಾಲೇಜಿನ ಸದಸ್ಯರ ಸಂಖ್ಯೆ ನಿಧಾ೯ರ ಮಾಡುವುದು ಯಾವ ಸೂತ್ರದಲ್ಲಿ ಅನ್ನುವ ಪ್ರಶ್ನೆ. ಅಂದರೆ ಅಮೇರಿಕಾದ ಕಾಂಗ್ರೆಸ್ ಅಂದರೆ ಸಂಸತ್ತು.ಈ ಸಂಸತ್ತಿ ನ ಒಟ್ಟು ಸಂಖ್ಯೆ 538. ಇದೇ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಈ ಮತದಾರರ ಕಾಲೇಜಿನ ಸದಸ್ಯರನ್ನು ಆಯ್ಕೆ ಮಾಡುತ್ತಾರೆ.

ಉದಾ:ನ್ಯೂಯಾರ್ಕ್ ನಿಂದ 35 ಮಂದಿ ಸದಸ್ಯರು ಜನ ಪ್ರತಿನಿಧಿ ಸದನಕ್ಕೆ(House of Representative) ಮತ್ತು ಮೇಲ್ ಸದನವಾದ ಸೆನೆಟ್ ಗೆ ಇಬ್ಬರು ಆಯ್ಕೆಯಾಗುತ್ತಾರೆ;.ಅಂದರೆ ನ್ಯೂಯಾರ್ಕ್ ನಿಂದ 37 ಮಂದಿ ಸದಸ್ಯರನ್ನು ಪ್ರತ್ಯೇಕವಾಗಿ ಈ ಮತದಾರರ ಕಾಲೇಜಿಗೆ ಆಯ್ಕೆ ಮಾಡಿ ಕಳುಹಿಸುತ್ತಾರೆ..ಇದೇ ತರಹ ಉಳಿದ 49ರಾಜ್ಯಗಳಿಂದ ಮತ್ತುಡಿಸ್ಟಿಕ್ ಕೊಲಂಬಿಯಾ ದಿಂದ…ಆಯ್ಕೆ ಮಾಡಿ ಕಳುಹಿಸಿ ಕೊಡುತ್ತಾರೆ..ಇವರು ಮತ್ತೆ ಅಮೇರಿಕಾದ ಅಧ್ಯಕ್ಷ ರನ್ನು ಆಯ್ಕೆ ಮಾಡುತ್ತಾರೆ.

ಈ ಚುನಾವಣಾ ಕಾಲೇಜಿನ ಒಟ್ಟು ಸದಸ್ಯರ ಸಂಖ್ಯೆ 538.ಇಲ್ಲಿ ಯಾವುದೇ ಅಭ್ಯರ್ಥಿ 270 ಮತಗಳನ್ನು ಪಡೆಯುತ್ತಾನೊ ಆತ ಅಮೇರಿಕಾದ ಮುಂದಿನ ಅಧ್ಯಕ್ಷ ರಾಗಿ ನೇಮಕಗೊಳ್ಳುತ್ತಾನೆ. ಪ್ರತಿ ರಾಜ್ಯದ ಮತ ಪೆಟ್ಟಿಗೆ ದೇಶದ ರಾಜಧಾನಿ ವಾಷಿಂಗ್ಟನ್‌ ಡಿ.ಸಿ.ಗೆ ರವಾನಿಸಿ ಅಲ್ಲಿ ಮತ ಏಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೇೂಷಣೆ ಯಾಗುತ್ತದೆ.ಫಲಿತಾಂಶ ಘೇೂಷಣೆ ಮಾಡಿದ ಅನಂತರದಲ್ಲಿ ಈ ಮತದಾರರ ಕಾಲೇಜನ್ನು ವಿಸಜ ೯ನೆ ಮಾಡುತ್ತಾರೆ. ಈ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಜನವರಿ 20ನೇ ತಾರೀಖಿನಂದು ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ದೇಶದ ಸವೇೂ೯ಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಪ್ರಮಾಣ ವಚನ ಬೇೂಧಿಸುತ್ತಾರೆ. ಅಂತೂ ಮುಂದಿನ ದಿವಸಗಳಲ್ಲಿ ಅಮೇರಿಕಾದ ಅಧ್ಯಕ್ಷ ಯಾರಾಗ ಬಹುದು ಅಮೇರಿಕಾದ ಶ್ವೇತ ಭವನವನ್ನು ಯಾರು ಅಲಂಕರಿಸ ಬಹುದು ಅನ್ನುವುದನ್ನು ಇಡಿ ವಿಶ್ವದ ಜನ ಬಹು ನಿರೀಕ್ಷೆಯಲ್ಲಿ ಕಾಯುತ್ತಿರುವ ಸುದ್ದಿ ಅನ್ನುವುದಂತು ಸತ್ಯ.

*ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next