Advertisement
ಒಂದು ವೇಳೆ, ಆ ಕ್ಷಣದಲ್ಲಿ ನಾನು ಅರ್ಧದಷ್ಟೇ ತಿರುಗಿದ್ದರೆ ಬುಲೆಟ್ ನನ್ನ ತಲೆಯ ಸೀಳಿಕೊಂಡು ಹೊರ ಬರುತ್ತಿತ್ತು. ನಾನು ಆ ಪರಿಪೂರ್ಣ ತಿರುವನ್ನು ಮಾಡುವ ಸಾಧ್ಯತೆಗಳು ಬಹುಶಃ ಶೇ.10ನೆಯ 1 ಭಾಗವಾಗಿತ್ತು. ಹಾಗಾಗದಿದ್ದರೆ ನಾನು ಇಲ್ಲಿರುತ್ತಿರಲಿಲ್ಲ. ಯಾಕೆಂದರೆ, ಸಾವು ನನ್ನಿಂದ ಕೇವಲ 1/8 ಇಂಚಿನಷ್ಟೇ(3.18 ಮಿ.ಮೀ) ದೂರವಿತ್ತು. ಆ ಸರಿಯಾದ ಕ್ಷಣದಲ್ಲೇ ನಾನು ತಿರುಗಿದೆ. ಆದರೆ ದಾಳಿಕೋರ ಗುಂಡು ಹಾರಿಸುವುದನ್ನು ನಿಲ್ಲಿಸಲಿಲ್ಲ. ನಾನು ಅದೃಷ್ಟವಷಾತ್ ಅಥವಾ ದೇವರ ಕಾರಣದಿಂದ ಬದುಕಿದ್ದೇನೆ ಎಂದು ಟ್ರಂಪ್ ಅವರು ವರದಿಗಾರರಿಗೆ ತಿಳಿಸಿದ್ದಾರೆ. ಪ್ರಚಾರದ ವೇಳೆ ನೆರೆದಿದ್ದ ಸಭಿಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಬಾರಿ ಗುಂಡು ಹಾರಿದರೂ ಜನರು ಅಲ್ಲಾಡಲಿಲ್ಲ. ನನ್ನ ಜತೆ ಸ್ಥಿರವಾಗಿ ನಿಂತರು . ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಟ್ರಂಪ್ ಹೇಳಿದರು.
ಭಾಷಣದ ವೇಳೆ ಟ್ರಂಪ್ ತಮ್ಮ ತಲೆಯನ್ನು ಸ್ವಲ್ಪವೇ ಸ್ವಲ್ಪ ತಿರುಗಿಸಿದ್ದರಿಂದ ಪ್ರಾಣ ಉಳಿಯಿತು. ಇಲ್ಲವೆಂದಾದರೆ ಬುಲೆಟ್ ನೇರವಾಗಿ ತಲೆ ಹೊಕ್ಕಿರುತ್ತಿತ್ತು. ಅವರ ಜೀವ ಉಳಿಸಿದ್ದು ವಲಸಿಗರಿಗೆ ಸಂಬಂಧಿಸಿದ ಚಾರ್ಟ್ ಎನ್ನುವುದು ಸ್ವತಃ ಟ್ರಂಪ್ ಸೇರಿದಂತೆ ಅನೇಕರ ವಾದ. ಭಾಷಣದಲ್ಲಿ ವಲಸಿಗರ ನೀತಿ ಕುರಿತು ಪ್ರಸ್ತಾವಿಸಿದ್ದ ಟ್ರಂಪ್, ಅದಕ್ಕೆ ಸಂಬಂಧಿಸಿದ ಚಾರ್ಟ್ ತೋರಿಸಲು ತಮ್ಮ ತಲೆಯನ್ನು ಅತ್ತ ಕಡೆಗೆ ತಿರುಗಿಸಿದ ಕ್ಷಣದಲ್ಲಿ ಗುಂಡು ಅವರ ಕಿವಿ ಸವರಿ ಹೋಗಿದೆ. ದಾಳಿಕೋರನಿಗೆ ಗುರಿ ಇಡಲು ಬರುತ್ತಿರಲಿಲ್ಲ!
ಟ್ರಂಪ್ ಹತ್ಯೆ ಯತ್ನದ ಆರೋಪಿ ಮ್ಯಾಥ್ಯೂ ಈ ಹಿಂದೆ ತನ್ನ ಹೈಸ್ಕೂಲ್‌ನ ರೈಫಲ್ ತಂಡಕ್ಕೆ ಸೇರಲು ಮುಂದಾಗಿದ್ದ. ಆದರೆ “ನಿಖರವಾಗಿ ಗುರಿ ಇಡಲು ಬರಲಿಲ್ಲ’ ಎಂಬ ಕಾರಣಕ್ಕೆ ಆತನನ್ನು ತಿರಸ್ಕರಿಸಲಾಗಿತ್ತು ಎಂದು ಕ್ಲಬ್‌ನ ಸದಸ್ಯರೊಬ್ಬರು ಹೇಳಿದ್ದಾರೆ. ಕ್ಲಬ್‌ಗ ಸೇರಲು ಬಂದಾಗ, ಕೇವಲ 20 ಅಡಿ ದೂರದಿಂದ ಶೂಟ್ ಮಾಡಲು ಹೇಳಲಾಗಿತ್ತು. ಆದರೂ ಅವನು ಗುರಿ ತಪ್ಪಿದ್ದ. ಆಗ ಎಲ್ಲರೂ ಸೇರಿ ಅವನನ್ನು ತಮಾಷೆ ಮಾಡಿದ್ದರು. ಹಾಗಾಗಿ ಬಂದ ದಿನವೇ ಆತ ವಾಪಸ್ ಹೋದ. ಮತ್ತೆಂದೂ ಕ್ಲಬ್‌ಗ ಮರಳಲಿಲ್ಲ ಎಂದು ಅವರು ಹೇಳಿದ್ದಾರೆ.
ಏಕಾಂಗಿ ಯುವಕನ ದಾಳಿ- ಎಫ್ಬಿಐ: ದಾಳಿಕೋರ ಮ್ಯಾಥ್ಯೂ ಏಕಾಂಗಿಯಾಗಿಯೇ ಈ ಕೃತ್ಯವೆಸಗಿದ್ದ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಈ ಕುರಿತು ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಎಫ್ಬಿಐ ಹೇಳಿದೆ. ಸದ್ಯಕ್ಕೆ ಈ ಪ್ರಕರಣವನ್ನು ದೇಶೀಯ ಭಯೋತ್ಪಾದನೆ ಎಂದು ಪರಿಗಣಿಸಲಾಗಿದೆ
Related Articles
ತನಿಖೆ ಬಳಿಕವೇ ದಾಳಿಕೋರನ ಉದ್ದೇಶ ಬಯಲು: ಅಧ್ಯಕ್ಷ
Advertisement
ಟ್ರಂಪ್ ಹತ್ಯೆ¬ಯತ್ನದ ಬೆನ್ನಲ್ಲೇ ಸೋಮವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಇಂಥ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾ ಗಿದೆ. ರಾಜಕೀಯ ಕಾವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬೇಕಿದೆ. ನಮ್ಮೆಲ್ಲರ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ನಾವು ಯಾರೂ ಶತ್ರುಗಳಲ್ಲ. ನಾವೆಲ್ಲ ಸ್ನೇಹಿತರು, ನೆರೆಹೊರೆಯವರು ಎಲ್ಲದಕ್ಕಿಂತಲೂ ಹೆಚ್ಚಾಗಿ ಅಮೆರಿಕನ್ನರು ಎಂಬುದನ್ನು ಮರೆಯಬಾರದು. ನಾವು ಇಂಥ ಹೊತ್ತಲ್ಲಿ ಒಂದಾಗಿ ನಿಲ್ಲಬೇಕು. ಶೂಟರ್‌ನ ಉದ್ದೇಶವೇನಿತ್ತು ಎಂಬುದು ನಮಗೆ ಇನ್ನೂ ಗೊತ್ತಿಲ್ಲ. ಆತನ ಅಭಿಪ್ರಾಯಗಳು, ಸಿದ್ಧಾಂತಗಳ ಕುರಿತೂ ಮಾಹಿತಿ ಲಭ್ಯವಿಲ್ಲ. ತನಿಖೆಯ ಬಳಿಕವೇ ಇದೆಲ್ಲ ಗೊತ್ತಾಗಬೇಕಿದೆ’ ಎಂದು ಹೇಳಿದ್ದಾರೆ.