Advertisement

ಅಮೆರಿಕ: ಮೇ ನಂತರ ಇದೇ ಮೊದಲ ಬಾರಿಗೆ ಕೋವಿಡ್ ಗೆ 1,200 ಬಲಿ, ಒಟ್ಟು 43 ಲಕ್ಷ ಜನರಿಗೆ ಸೋಂಕು

08:43 AM Jul 29, 2020 | Mithun PG |

ವಾಷಿಂಗ್ಟನ್: ಮೇ ತಿಂಗಳ ನಂತರ ಅಮೆರಿಕಾದಲ್ಲಿ ಕಳೆದ ಒಂದೇ ದಿನ 1,200 ಕ್ಕಿಂತ ಹೆಚ್ಚು ಜನರು ಕೋವಿಡ್ ವೈರಸ್ ಗೆ ಸಾವನ್ನಪ್ಪುವ ಮೂಲಕ ದಾಖಲೆ ಸೃಷ್ಟಿಯಾಗಿದೆ.

Advertisement

ಜುಲೈ 28ರ ಮಂಗಳವಾರದಂದು ಕ್ಯಾಲಿಫೋರ್ನಿಯಾ, ಫ್ಲೋರಿಡಾ ಸೇರಿದಂತೆ ಒಟ್ಟಾರೆಯಾಗಿ ಹಲವಾರು ರಾಜ್ಯಗಳಲ್ಲಿ 1,227 ಜನರು ಮೃತರಾಗಿದ್ದಾರೆ. ಆರ್ಕಾನ್ಸಸ್ ಮೊಂಟೇನಾ, ಓರಿಜನ್ ಮುಂತಾದ ಕಡೆ ಕೂಡ ಸಾವು ನೋವುಗಳ ಪ್ರಮಾಣ ದಾಖಲೆಯಲ್ಲಿ ಏರಿಕೆಯಾಗಿದೆ.

ಜುಲೈ ತಿಂಗಳಿನಲ್ಲಿ ಆರಿಜೋನಾ, ಕ್ಯಾಲಿಫೋರ್ನಿಯಾ, ಫ್ಲೋರಿಡಾ ಮತ್ತು ಟೆಕ್ಸಾಸ್‌ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ.  ಇದೀಗ ವೈರಸ್ ಹರಡುವುದನ್ನು ನಿಧಾನಗೊಳಿಸಲು ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಲಾಕ್‌ಡೌನ್‌ ಗಳಿಂದ ನಿರ್ಬಂಧಿಸಲ್ಪಟ್ಟ ಆರ್ಥಿಕತೆಗಳನ್ನು ಪುನಃ ತೆರೆಯಲು ರಾಜ್ಯಗಳು ಒತ್ತಾಯಿಸಿದೆ.

ಅಮೆರಿಕಾದಲ್ಲಿ ಪ್ರತಿನಿತ್ಯ 60 ಸಾವಿರಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು ಈವರೆಗೂ ಸುಮಾರು 1.50 ಲಕ್ಷ ಮಂದಿ ವೈರಸ್ ಕಾರಣದಿಂದ ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೆ 4.38 ಮಿಲಿಯನ್ ಜನರು ಸೊಂಕಿಗೆ ತುತ್ತಾಗಿದ್ದಾರೆ. ಮಾತ್ರವಲ್ಲದೆ ಸೋಂಕಿನಿಂದ 13,55,363 ಜನರು ವೈರಾಣುವಿನಿಂದ ಗುಣಮುಖರಾಗಿದ್ದಾರೆ ಎಂದು ಜಾನ್ ಹಾಫ್ ಕಿನ್ಸ್ ವಿಶ್ವವಿದ್ಯಾನಿಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next