Advertisement

ಕೋವಿಡ್ -19ಗೆ ನಲುಗಿದ ಅಮೆರಿಕ: ಒಂದೇ ದಿನ 1,435 ಜನರು ಸಾವು

08:24 AM May 04, 2020 | Mithun PG |

ವಾಷಿಂಗ್ಟನ್: ಕೋವಿಡ್ -19 ಅಮೆರಿಕಾದಲ್ಲಿ ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 1,435 ಜನರು ಬಲಿಯಾಗಿದ್ದಾರೆ.  ಜಾನ್ಸ್ ಹಾಫ್ ಕಿನ್ಸ್ ಯುನಿವರ್ಸಿಟಿ ನೀಡಿದ ಅಂಕಿಅಂಶಗಳ ಪ್ರಕಾರ ಇವರೆಗೂ ಈ ದೇಶದಲ್ಲಿ ಸುಮಾರು 66 ಸಾವಿರಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

Advertisement

ಮಾತ್ರವಲ್ಲದೆ 11 ಲಕ್ಷಕ್ಕಿಂತಲೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದು ಅತೀ ಹೆಚ್ಚು ವೈರಾಣು ಪೀಡಿತರಿರುವ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.  ಸೋಂಕಿಗೆ ಒಳಗಾದ ಸುಮಾರು 1,73,725 ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ ನ್ಯೂಯಾರ್ಕ್ ನಗರವೊಂದರಲ್ಲೇ ಅತೀ ಹೆಚ್ಚು ಸೋಂಕಿತರಿದ್ದು (3,19,213) , ಇಲ್ಲಿ 24,368 ಜನರು ಮೃತಪಟ್ಟಿದ್ದಾರೆ.

ಈ ಕುರಿತು ಅಮೆರಿಕಾದ ಅಧ್ಯಕ್ಷ ಕಳವಳ ವ್ಯಕ್ತಪಡಿಸಿದ್ದು, ಸೋಂಕು ವೈರಸ್ ಹರಡಲು ಕಾರಣರಾದವರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಮತ್ತೊಮ್ಮೆ ಹರಿಹಾಯ್ದಿದ್ದಾರೆ.

ಜಗತ್ತಿನಾದ್ಯಂತ 34 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ಮಾರಕ ವೈರಸ್ ಗೆ ತುತ್ತಾಗಿದ್ದು, 2.44ಲಕ್ಷಕ್ಕಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣ ಕಂಡು ವಿಶ್ವ ಆರೋಗ್ಯ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದ್ದು ಹಲವು ದೇಶಗಳಲ್ಲಿ ಜಾರಿಗೆ ತಂದಿರುವ ಲಾಕ್ ಡೌನ್ ಸಡಿಲಿಕೆ ಮಾಡಿದರೆ ಮತ್ತಷ್ಟು ಅಪಾಯಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next