Advertisement

ಮುಸ್ಲಿಂ ಪ್ರಜೆಗಳಿಗೆ ನಿರ್ಬಂಧ;ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

02:16 PM Jan 29, 2017 | Team Udayavani |

ವಾಷಿಂಗ್ಟನ್:ಏಳು ಇಸ್ಲಾಮಿಕ್ ರಾಷ್ಟ್ರಗಳ ವಲಸಿಗರಿಗೆ ಮತ್ತು ನಿರಾಶ್ರಿತರಿಗೆ ಅಮೆರಿಕ ಪ್ರವೇಶಿಸಲು ನಿರ್ಬಂಧ ಹೇರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಆದೇಶದ ವಿರುದ್ಧ ಇಸ್ಲಾಂ ದೇಶ ಹಾಗೂ ಅಮೆರಿಕದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಟ್ರಂಪ್ ಆದೇಶಕ್ಕೆ ಫೆಡರಲ್ ಜಡ್ಜ್ ತಡೆ ನೀಡಿರುವ ಘಟನೆ ನಡೆದಿದೆ.

Advertisement

ಡೊನಾಲ್ಡ್ ಟ್ರಂಪ್ ಆದೇಶದ ವಿರುದ್ಧ ತಡೆ ನೀಡಬೇಕೆಂದು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್(ಎಸಿಎಲ್ ಯು) ನ್ಯಾಯಾಧೀಶರ ಮೊರೆ ಹೋಗಿತ್ತು. ಟ್ರಂಪ್ ಆದೇಶದಿಂದ ನಿರಾಶ್ರಿತರು, ಪ್ರವಾಸಿಗರು ಅಮೆರಿಕ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿದೆ ಎಂದು ದೂರಿತ್ತು.

ಈ ಹಿನ್ನೆಲೆಯಲ್ಲಿ ಅಮೆರಿಕದ ಜಿಲ್ಲಾ ನ್ಯಾಯಾಧೀಶೆ ಆನ್ ಡೋನ್ನ್ಲೈ ತಡೆ ಆದೇಶ ನೀಡಿದ್ದು, ಈ ಬಗ್ಗೆ ಎಸಿಎಲ್ ಯು ಟ್ವೀಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದೆ. ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ ವಿರುದ್ಧ ನಮ್ಮ ನ್ಯಾಯಾಲಯ ತೀರ್ಪು ನೀಡಿದ್ದು, ಇದು ನ್ಯಾಯಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next