Advertisement

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

07:07 PM Aug 03, 2021 | Team Udayavani |

ವಾಷಿಂಗ್ಟನ್‌ : ನೌಕಾ ನಿಗ್ರಹ ಕ್ಷಿಪಣಿ ವ್ಯವಸ್ಥೆಯಾದ “ಹಾರ್ಪೂನ್‌ ಜಾಯಿಂಟ್‌ ಕಾಮನ್‌ ಟೆಸ್ಟ್‌ ಸೆಟ್‌’ (ಜೆಸಿಟಿಎಸ್‌) ಮತ್ತು ಅದಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ಭಾರತಕ್ಕೆ ಒದಗಿಸಲು ಅಮೆರಿಕ ಒಪ್ಪಿಗೆ ನೀಡಿದೆ. 82 ದಶಲಕ್ಷ ಡಾಲರ್‌ ವೆಚ್ಚದಲ್ಲಿ ಈ ಹಾರ್ಪೂನ್‌ ಗಳನ್ನು ಭಾರತ ಖರೀದಿಸಲಿದೆ.

Advertisement

ಉಭಯ ದೇಶಗಳ ವ್ಯೂಹಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಒಂದು ಹಾರ್ಪೂನ್‌ ಸೆಟ್‌, ಬಿಡಿ ಭಾಗಗಳು, ಪರೀಕ್ಷಾ ಸಾಮಗ್ರಿ, ಸಿಬ್ಬಂದಿ ತರಬೇತಿಗೆ ಸಂಬಂಧಿಸಿದ ಪ್ರಕಟಣೆಗಳು ಕೂಡ ಈ ಒಪ್ಪಂದದಲ್ಲಿ ಸೇರಿವೆ.

2016ರ ಜೂನ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ, ಅಮೆರಿಕವು ಭಾರತವನ್ನು “ಪ್ರಮುಖ ರಕ್ಷಣಾ ಪಾಲುದಾರ’ ಎಂದು ಘೋಷಿಸಿತ್ತು. ಜತೆಗೆ, ಭಾರತದೊಂದಿಗೆ ರಕ್ಷಣಾ ತಂತ್ರಜ್ಞಾನದ ಹಂಚಿಕೆ, ರಕ್ಷಣಾ ಉತ್ಪಾದನೆಯಲ್ಲಿ ಕೈಗಾರಿಕಾ ಸಹಭಾಗಿತ್ವವನ್ನೂ ಹೊಂದುವುದಾಗಿ ಹೇಳಿತ್ತು.

ಇದನ್ನೂ ಓದಿ :ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

Advertisement

Udayavani is now on Telegram. Click here to join our channel and stay updated with the latest news.

Next