Advertisement

ಶೀತ ಚಂಡಮಾರುತಕ್ಕೆ ಅಮೆರಿಕ ತತ್ತರ; ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

12:50 AM Dec 25, 2022 | Team Udayavani |

ವಾಷಿಂಗ್ಟನ್‌: ಕ್ರಿಸ್ಮಸ್‌, ಹೊಸ ವರ್ಷದ ಹಾಲಿಡೇ ಮೂಡ್‌ನ‌ಲ್ಲಿದ್ದ ಅಮೆರಿಕನ್ನರನ್ನು “ಬಾಂಬ್‌ ಸೈಕ್ಲೋನ್‌’ ಕಟ್ಟಿಹಾಕಿದೆ. ಈ ಐತಿಹಾಸಿಕ ಶೀತ ಚಂಡಮಾರುತದ ತೀವ್ರತೆಯು ನಾಗರಿಕರನ್ನು ಬಹುವಾಗಿ ಕಾಡುತ್ತಿದ್ದು, ಮೊಂಟಾನಾದಲ್ಲಿ ತಾಪಮಾನ ಮೈನಸ್‌ 48 ಡಿ.ಸೆ.ಗೆ ತಲುಪಿದೆ.

Advertisement

ವಿದ್ಯುತ್‌ ಅಭಾವದಿಂದಾಗಿ 15 ಲಕ್ಷಕ್ಕೂ ಹೆಚ್ಚು ಮಂದಿ ಕತ್ತಲಲ್ಲಿ ಮುಳುಗಿದ್ದಾರೆ. ಪೂರ್ವ ಅಮೆರಿಕ ದಲ್ಲಿ ಬೀಸುತ್ತಿರುವ ಚಳಿ ಗಾಳಿಯಿಂದ ಹಲವು ಮರಗಳು, ವಿದ್ಯುತ್‌ ತಂತಿಗಳು ಧರೆಗುರುಳಿವೆ. ಹೆದ್ದಾರಿಗಳನ್ನು ಮುಚ್ಚಲಾಗಿದೆ. ಪೈಪ್‌ಗಳಲ್ಲಿ ಬರುತ್ತಿರುವ ನೀರು ಕೂಡ ಮಂಜುಗಡ್ಡೆಯಾಗಿ ಪರಿವರ್ತನೆಗೊಂಡಿದೆ. ಕೊತ ಕೊತನೆ ಕುದಿಯುವ ನೀರನ್ನು ಎತ್ತಿ ಬಿಸಾಕಿದರೆ, ಅದು ಮಂಜುಗಡ್ಡೆ ಯಾಗಿ ಕೆಳಗೆ ಬೀಳುತ್ತಿದೆ. ಪ್ರತಿಕೂಲ ಹವಾಮಾನ ಹಿನ್ನೆಲೆ ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ವಲಸಿಗರ ವ್ಯಥೆ: ಇನ್ನೊಂದೆಡೆ, ಮೆಕ್ಸಿಕೋ ಗಡಿ ದಾಟಿ ಬಂದಿರುವಂಥ ವಲಸಿಗರ ಪರಿಸ್ಥಿತಿ ಹೇಳ ತೀರದಂತಾಗಿದೆ. ಆಶ್ರಯ ಪಡೆಯಲು ಯಾವುದೇ ವ್ಯವಸ್ಥೆಯಿಲ್ಲದ ಕಾರಣ, ಅನೇಕರು ಈ ಕೊರೆ ಯುವ ಚಳಿಯಲ್ಲಿ ಹೊರಗೇ ತಂಗಬೇಕಾದ ಸ್ಥಿತಿಯಿದೆ. ಕೆಲವರು ಸಿಕ್ಕ ಸಿಕ್ಕ ಚರ್ಚ್‌ಗಳು, ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಏನೇನು ಅವಾಂತರಗಳು?
ಅಮೆರಿಕದ ಹಲವು ಪ್ರದೇಶಗಳಲ್ಲಿ ಮೈನಸ್‌ 45 ಡಿ.ಸೆ.ಗೆ ತಲುಪಿದ ತಾಪಮಾನ

ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡ ಪರಿ ಣಾಮ 15 ಲಕ್ಷಕ್ಕೂ ಅಧಿಕ ಮಂದಿ ಕತ್ತಲಲ್ಲಿ

Advertisement

ಶನಿವಾರ 3 ಸಾವಿರ ವಿಮಾನಗಳ ಸಂಚಾರ ರದ್ದು, 7,600 ವಿಳಂಬ

ದಟ್ಟ ಮಂಜಿನಿಂದ ಗೋಚರತೆ ಕ್ಷೀಣಿಸಿ ಉಂಟಾದ ಅಪಘಾತಗಳಿಗೆ 4 ಮಂದಿ ಬಲಿ

ಪ್ರತಿಕೂಲ ಹವಾಮಾನದಿಂದಾಗಿ 9 ಮಂದಿ ಸಾವು

20 ಕೋಟಿ ಜನರಿಗೆ ಜಾಗರೂಕರಾಗಿರುವಂತೆ ಸಂದೇಶ ರವಾನೆ

ಒಹಿಯೋದಲ್ಲಿ 50 ವಾಹನಗಳ ಅಪಘಾತ

 

Advertisement

Udayavani is now on Telegram. Click here to join our channel and stay updated with the latest news.

Next