Advertisement

ಉಗ್ರರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಿ: ಪಾಕಿಸ್ಥಾನಕ್ಕೆ ಅಮೆರಿಕ ತಾಕೀತು

02:34 PM Jun 11, 2019 | Sathish malya |

ವಾಷಿಂಗ್ಟನ್‌ : ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕೆಂದಿದ್ದರೆ ಪಾಕಿಸ್ಥಾನ ಸರ್ವಪ್ರಥಮವಾಗಿ ಭಯೋತ್ಪಾದನೆ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅಮೆರಿಕ, ಪಾಕಿಸ್ಥಾನಕ್ಕೆ ಕಟ್ಟುನಿಟ್ಟಾಗಿ ಹೇಳಿದೆ.

Advertisement

‘ಪಾಕಿಸ್ಥಾನ ತನ್ನಲ್ಲಿನ ಉಗ್ರರನ್ನು ಬಂಧಿಸಬೇಕು; ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವರನ್ನು ಹಿಡಿದು ಶಿಕ್ಷಿಸಬೇಕು; ಉಗ್ರ ಕೃತ್ಯಗಳಿಗಾಗಿ ಮುಕ್ತವಾಗಿ ಶಸ್ತ್ರಾಸ್ತ್ರ ಗಳನ್ನು ಸಂಗ್ರಹಿಸುತ್ತಿರುವ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಬೇಕು; ಭಾರತದಲ್ಲಿ ಉಗ್ರ ಕೃತ್ಯ ನಡೆಸುವುದಕ್ಕಾಗಿ ಭಾರತದ ಗಡಿಯೊಳಗೆ ಉಗ್ರರು ನುಸುಳುವುದನ್ನು ಪಾಕಿಸ್ಥಾನ ತಡೆಯಬೇಕು’ ಎಂದು ಶ್ವೇತಭವನ ಪಾಕಿಸ್ಥಾನಕ್ಕೆ ಅಪ್ಪಣೆ ಕೊಡಿಸಿದೆ. ಈ ವಿಷಯವನ್ನು ಪಾಕಿಸ್ಥಾನದ ಡಾನ್‌ ನ್ಯೂಸ್‌ ಬಹಿರಂಗಪಡಿಸಿದೆ.

‘ಭಾರತ ಮಾತ್ರವಲ್ಲ ಅಮೆರಿಕ ಕೂಡ, ಪಾಕಿಸ್ಥಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಚಟುವಟಿಕೆಗಳನ್ನು ಶಾಶ್ವತವಾಗಿ ಕೊನೆಗೊಳಿಸುವ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಪೇಕ್ಷಿಸುತ್ತದೆ’ ಎಂದು ಶ್ವೇತ ಭವನ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಸ್ಪಷ್ಟಪಡಿಸಿದೆ.

ಇಮ್ರಾನ್‌ ಖಾನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಚೆಗೆ ಪತ್ರ ಬರೆದು ಉಭಯ ದೇಶಗಳ ನಡುವಿನ ಮಾತುಕತೆಯನ್ನು ಪುನರಾರಂಭಿಸುವಂತೆ ಕೋರಿದ್ದರು. ಅದರ ಬೆನ್ನಿಗೆ ಅಮೆರಿಕ ಪಾಕಿಸ್ಥಾನಕ್ಕೆ ಈ ಬುದ್ಧಿವಾದ ಹೇಳಿರುವುದು ಗಮನಾರ್ಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next