Advertisement

US; ತಲೆಗೆ 50 ಬಾರಿ ಹೊಡೆದು ಭಾರತೀಯ ವಿದ್ಯಾರ್ಥಿ ಹತ್ಯೆ

12:35 AM Jan 30, 2024 | Team Udayavani |

ನ್ಯೂಯಾರ್ಕ್‌: ಭಾರತೀಯ ವಿದ್ಯಾ ರ್ಥಿಯ ತಲೆಗೆ ಮಾದಕ ವ್ಯಸನಿಯೊಬ್ಬ ಸುಮಾರು 50 ಬಾರಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಅಮೆರಿಕ ಜಾರ್ಜಿಯಾ ಪ್ರಾಂತದ ಲಿಥೋನಿಯಾ ನಗರದಲ್ಲಿ ನಡೆದಿದೆ. ಈ ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement

ಹರಿಯಾಣದ ವಿವೇಕ್‌ ಸೈನಿ ಮೃತ ಪಟ್ಟವರು. ಕೆಲವು ದಿನಗಳ ಹಿಂದಷ್ಟೇ ಎಂಬಿಎ ಪೂರ್ಣಗೊಳಿಸಿ ದ್ದ ಇವರು, ಒಂದು ಮಳಿಗೆಯಲ್ಲಿ ಅರೆ ಕಾಲಿಕ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು.

ಮನೆಯಿಲ್ಲದೇ ನಿರ್ಗತಿಕನಾಗಿದ್ದ ಜೂಲಿಯನ್‌ ಫಾಕ್ನರ್‌ ಎಂಬಾತನಿಗೆ ಕಳೆದ ಎರಡು ದಿನಗಳಿಂದ ಅಂಗಡಿಯ ಬಳಿಯೇ ಉಳಿದುಕೊಳ್ಳಲು ವಿವೇಕ್‌ ಅವಕಾಶ ನೀಡಿದ್ದರು. ಅಲ್ಲದೇ ತಿನ್ನಲು ಚಿಪ್ಸ್‌, ಕೋಕ್‌, ನೀರು ಮತ್ತು ಜಾಕೆಟ್‌ ಸಹ ನೀಡಿದ್ದರು. ಆದರೆ ರವಿವಾರ ಮಾದಕ ವ್ಯಸನಿಯಾಗಿದ್ದ ಫಾಕ್ನರ್‌ ಏಕಾಏಕಿ ಸುತ್ತಿಗೆಯಿಂದ ವಿವೇಕ್‌ ಮೇಲೆ ದಾಳಿ ನಡೆಸಿದ. ತಲೆಗೆ ಸುತ್ತಿಗೆ ಯಿಂದ ಸುಮಾರು 50 ಬಾರಿ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿ ಫಾಕ್ನರ್‌ನನ್ನುಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next