Advertisement

US: ಅಮೆರಿಕದಲ್ಲಿ ಆಘಾತಕಾರಿ ಘಟನೆ- ಸ್ನಾನಕ್ಕೂ ಅವಕಾಶ ಕೊಡದೆ ಭಾರತೀಯನಿಗೆ ಚಿತ್ರಹಿಂಸೆ

12:19 AM Dec 02, 2023 | Team Udayavani |

ವಾಷಿಂಗ್ಟನ್‌: ಭಾರತೀಯ ಮೂಲದ 20 ವರ್ಷದ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ತಿಂಗಳುಗಳ ಕಾಲ ಸ್ನಾನಕ್ಕೂ ಅವಕಾಶ ನೀಡದೆ ಕೂಡಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಪೊಲೀಸರು ಭಾರ ತೀಯ ಮೂಲದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಮಿಸೌರಿ ಪ್ರದೇಶದಲ್ಲಿ ವಿದ್ಯಾರ್ಥಿಯನ್ನು ಆತನ ಸಹೋದರ ಸಂಬಂಧಿ ವೆಂಕಟೇಶ್‌ ಆರ್‌ ಸತ್ತಾರು ಹಾಗೂ ಭಾರತೀಯ ಮೂಲದ ಇನ್ನಿಬ್ಬರು ವ್ಯಕ್ತಿಗಳಾದ ಶ್ರವಣ್‌ ವರ್ಮಾ ಪೆನುಮೆಚ್ಚ, ನಿಖೀಲ್‌ ವರ್ಮಾ ಪೆನಮತ್ಸ ಎಂಬವರು ಸೇರಿ 7 ತಿಂಗಳ ಹಿಂದಿನಿಂದ ಕೂಡಿಹಾಕಿದ್ದಾರೆ. ನೆಲಮಾಳಿಗೆಯಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿ ಹಿಂಸಿಸಿದ್ದಾರೆ. ಇವರ ಮೂವರ ಮನೆಗಳಿಗೂ ಕರೆದೊಯ್ದು ಅಲ್ಲಿಯೂ ಕೂಡಿ ಹಾಕಿ ಕೆಲಸ ಮಾಡುವಂತೆ ಹಿಂಸೆ ನೀಡುತ್ತಲೇ ಬಂದಿದ್ದಾರೆ. ಸಂತ್ರಸ್ತನ ಬಗ್ಗೆ ವಿಚಾರ ತಿಳಿದ ನಾಗರಿಕರೊಬ್ಬರು ಅಮೆರಿಕ ತುರ್ತು ಸಹಾಯವಾಣಿಗೆ ತಿಳಿಸಿದ ಬಳಿಕ ಪೊಲೀಸರು ವಿದ್ಯಾರ್ಥಿ ಯನ್ನು ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧ ಅಪಹರಣ, ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.

Advertisement

ವಿದ್ಯಾರ್ಥಿ ಮೃತದೇಹ ಪತ್ತೆ: ಯುಕೆಯಲ್ಲಿ ನ.17ರಂದು ನಾಪತ್ತೆಯಾಗಿದ್ದ ಭಾರತದ ವಿದ್ಯಾರ್ಥಿ ಮಿತು ಕುಮಾರ್‌ ಪಟೇಲ್‌ ಎಂಬವರ ಮೃತದೇಹ ಲಂಡನ್‌ನ ಥೇಮ್ಸ್‌ ನದಿ ಸಮೀಪ ಪತ್ತೆಯಾಗಿದೆ. ಈ ಅಂಶವನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದ ಸೆ.19ರಂದು ಅವರು ಯು.ಕೆ.ಗೆ ಉನ್ನತ ಅಧ್ಯಯನಕ್ಕಾಗಿ ಆಗಮಿ ಸಿದ್ದರು. ಕೆಲವು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ಧನ ಸಂಗ್ರ ಹ ಕಾರ್ಯಕ್ರಮವೊಂದರಲ್ಲಿಯೂ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next