Advertisement
ಮೈದಾನದಲ್ಲಿರುವ ಶೌಚಾಲಯ ಗಬ್ಬೆದ್ದು ಹೋಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಆದ್ದರಿಂದ ತತ್‌ಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶ್ರೀ ರಾಮ ಸೇನೆ ವತಿಯಿಂದ ಉರ್ವಸ್ಟೋರ್ ಜಂಕ್ಷನ್‌ನಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದರಿಂದ ಎಚ್ಚೆತ್ತ ಸ್ಥಳೀಯಾಡಳಿತ ಶೌಚಾಲಯ ಸಹಿತ ಸಂಪೂರ್ಣ ಮೈದಾನವನ್ನು ಅಭಿವೃದ್ಧಿ ಮಾಡಲು ಸಿದ್ಧತೆ ನಡೆದಿದ್ದು, ನ. 2ರಂದು ಗುದ್ದಲಿ ಪೂಜೆ ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ.
Related Articles
Advertisement
ರಂಗ ಮಂದಿರ ಸಹಿತ ಅಭಿವೃದ್ಧಿ
ಶೌಚಾಲಯದ ಪಕ್ಕದಲ್ಲೇ ಹಳೆಯ ಸ್ಟೇಜ್ ಕೂಡ ಇತ್ತು. ಅದು ಉಪಯೋಗಿಸಲು ಸಾಧ್ಯವಿಲ್ಲದಷ್ಟು ಹಾಳಾಗಿತ್ತು. ಮುಂದಿನ ದಿನ ದಿನಗಳ್ಲಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ರಂಗಮಂದಿರ ಸಹಿತ, ಮೈದಾನದ ಅಭಿವೃದ್ಧಿಯಾಗಲಿದೆ. ಜತೆಗೆ ಮೈದಾನದೊಳಗೆ ಅನಗತ್ಯವಾಗಿ ಪ್ರವೇಶಿಸುವುದನ್ನು ತಡೆಯಲು ಆವರಣ, ಗೇಟ್ ಕೂಡ ನಿರ್ಮಾಣವಾಗಲಿದೆ.
ಬೇರೆ ಶೌಚಾಲಯ ಇಲ್ಲ
ಉರ್ವಸ್ಟೋರ್‌ನ ಸಾರ್ವಜನಿಕರ ಮೈದಾನದಲ್ಲಿ ಯಕ್ಷನಾಗ, ನಾಟಕ ಸಹಿತ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ತರಕಾರಿ ಮಾರುಕಟ್ಟೆ, ವಿವಿಧ ಅಂಗಡಿ ಮಳಿಗೆಗಳು, ರಿಕ್ಷಾ ಸ್ಟ್ಯಾಂಡ್, ಗೂಡ್ಸ್ ರಿಕ್ಷಾ, ಟೆಂಪೋ ಸ್ಟ್ಯಾಂಡ್‌ಗಳು ಪಕ್ಕದಲ್ಲೇ ಇವೆ. ಬೇರೆ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲಿಲ್ಲ. ಇರುವ ಶೌಚಾಲಯವನ್ನು ದುರಸ್ತಿಗೊಳಿಸಬೇಕು ಎಂದು ಹಲವು ಸಮಯದಿಂದ ಆಗ್ರಹ ಕೇಳಿ ಬಂದಿತ್ತು.
ಮೈದಾನಕ್ಕೆ ಶೀಘ್ರ ಹೊಸ ರೂಪ ಮೈದಾನದ ಅಭಿವೃದ್ಧಿಗೆ ಪಿಡಬ್ಲ್ಯುಡಿಯಿಂದ 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ನ. 2ರಂದು ಗುದ್ದಲಿ ಪೂಜೆಗೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದ್ದು, ಶೀಘ್ರ ಮೈದಾನಕ್ಕೊಂದು ಹೊಸ ರೂಪ ನೀಡಲಾಗುವುದು. -ಗಣೇಶ್ ಕುಲಾಲ್, ಪಾಲಿಕೆ ಸದಸ್ಯ