ಅಹಮದಬಾದ್: ಲಕ್ಷಾಂತರ ಪ್ರೇಕ್ಷಕ ಮುಂದೆ ತವರಿನ ಅಂಗಳದಲ್ಲೇ ಭಾರತ ಮತ್ತೊಮ್ಮೆ ಪಾಕ್ ತಂಡವನ್ನು ಸೋಲಿಸಿದೆ. ಆ ಮೂಲಕ ಪಾಕ್ ಗೆ ಎಂಟನೇ ಬಾರಿ ಸೋಲಿನ ರುಚಿ ತೋರಿಸಿದೆ. ಭಾರತ ಗೆಲುವಿನ ಸಂಭ್ರಮವನ್ನು ಮೈದಾನದಲ್ಲೇ ವೀಕ್ಷಿಸಿದವರಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೂಡ ಒಬ್ಬರು.
ಇಂಡೋ – ಪಾಕ್ ಕ್ರಿಕೆಟ್ ಕದನ ಅಹಮದಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದ ವೀಕ್ಷಣೆಗೆ ನಟಿ ಊರ್ವಶಿ ರೌಟೇಲಾ ಅವರು ತೆರಳಿದ್ದರು. ಕ್ರಿಕೆಟ್ ನೋಡಲು ತೆರಳಿದ್ದ ವೇಳೆ ಅವರು ತನ್ನ ಬೆಲೆಬಾಳುವ ಅಮೂಲ್ಯ ವಸ್ತುವೊಂದನ್ನು ಕಳೆದುಕೊಂಡಿದ್ದಾರೆ.
“ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ಚಿನ್ನದ ಐ ಫೋನ್ ಕಳೆದುಹೋಯಿತು! ಯಾರಾದರೂ ಅದನ್ನು ಕಂಡರೆ, ದಯವಿಟ್ಟು ಸಹಾಯ ಮಾಡಿ. ಆದಷ್ಟು ಬೇಗ ನನ್ನನ್ನು ಸಂಪರ್ಕಿಸಿ” ಎಂದು ನಟಿ ಸೋಶಿಯಲ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Art director: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ಕಲಾ ನಿರ್ದೇಶಕ ಮಿಲನ್ ನಿಧನ
“ಅವರು ಸ್ಟೇಡಿಯಂನಲ್ಲಿದ್ದಾಗ ಅವರ ಫೋನ್ ಆಕೆಯ ಅಂಗರಕ್ಷಕನ ಜೇಬಿನಲ್ಲಿತ್ತು. ಫೋಟೋಗಳನ್ನು ಕ್ಲಿಕ್ಕಿಸಲು ಊರ್ವಶಿ ಬಳಿ ಸಾಕಷ್ಟು ಜನರು ಜಮಾಯಿಸಿದ್ದರು ಈ ವೇಳೆಯಾರೋ ಅಂಗರಕ್ಷಕನ ಜೇಬಿನಿಂದ ಫೋನ್ ತೆಗೆದಿದ್ದಾರೆ. ಇದು 24 ಕ್ಯಾರೆಟ್ ಚಿನ್ನದ ಐಫೋನ್ 14 ಪ್ರೊ ಮ್ಯಾಕ್ಸ್ ಆಗಿತ್ತು. ಈ ಫೋನ್ ತುಂಬಾ ದುಬಾರಿಯಾಗಿದೆ” ಎಂದು ನಟಿಯ ಮೂಲವೊಂದು “ಫ್ರಿ ಪ್ರೆಸ್ ಜರ್ನಲ್” ಗೆ ಹೇಳಿರುವುದಾಗಿ ವರದಿ ಆಗಿದೆ.
ಸದ್ಯ ನಟಿ ಪೋಸ್ಟ್ ನಲ್ಲಿ ಅಹಮದಬಾದ್ ಪೊಲೀಸರನ್ನೂ ಟ್ಯಾಗ್ ಮಾಡಿದ್ದಾರೆ. ಪೊಲೀಸರು ನಟಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಕೇಳಿದ್ದಾರೆ.