Advertisement

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

12:59 AM Oct 01, 2024 | Team Udayavani |

ಮಡಂತ್ಯಾರು: ಇಲ್ಲಿನ ಉರುವಾಲು ಗ್ರಾಮದಲ್ಲಿ ಸೋಮವಾರ ಸಂಜೆ ಮನೆಗೆ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿದೆ.

Advertisement

ತಾರಿದಡಿ ನಿವಾಸಿ ಸೇಸಪ್ಪ ಅವರ ಮನೆಗೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಿಡಿಲು ಬಡಿದಿದ್ದು, ಗೋಡೆ ಬಿರುಕು ಬಿಟ್ಟಿದೆ. ಜತೆಗೆ ವಿದ್ಯುತ್‌ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಸಂದರ್ಭ ಸೇಸಪ್ಪ ಗೌಡರು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿದ್ದರು. ಆದ್ದರಿಂದ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. 9 ವರ್ಷಗಳ ಹಿಂದೆ ಕಟ್ಟಿದ್ದ ಈ ಕಾಂಕ್ರೀಟ್‌ ಮನೆ ಸಂಪೂರ್ಣ ಹಾನಿಗೀಡಾಗಿದೆ ಎಂದು ಸೇಸಪ್ಪ ತಿಳಿಸಿದ್ದಾರೆ.

ಉಪ್ಪಿನಂಗಡಿ: ಭಾರೀ ಮಳೆ
ಉಪ್ಪಿನಂಗಡಿ: ಸೋಮವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಸಿಡಿಲಬ್ಬರದೊಂದಿಗೆ ಸುರಿದ ಭಾರೀ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ.

ಉಪ್ಪಿನಂಗಡಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸಿಡಿಲಿನ ತೀವ್ರತೆಗೆ ವಿದ್ಯುತ್‌ ಸರಬರಾಜಿನಲ್ಲಿ ಅಳವಡಿಸಲಾದ ಸಲಕರಣೆಗಳು ಹಾನಿಗೀಡಾಗಿವೆ. ಇದರಿಂದಾಗಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವುಂಟಾಯಿತು. ಪರಿಸರದಲ್ಲಿ 5 ವಿದ್ಯುತ್‌ ಕಂಬಗಳು ತುಂಡಾಗಿವೆ. ಮಧ್ಯಾಹ್ನದ ವರೆಗೆ ಸುಡುವ ಬಿಸಿಲಿನ ವಾತಾವರಣವಿದ್ದು, ಸಾಯಂಕಾಲವಾಗುತ್ತಿದ್ದಂತೆಯೇ ಮೋಡ ಆವರಿಸಿ ರಾತ್ರಿ ಬಿರುಸಿನ ಮಳೆ ಸುರಿಯಲಾರಂಭಿಸಿತ್ತು. ಭಾರೀ ಗಾಳಿಗೆ ಸಿಲುಕಿದ ಕೆಲವು ಛಾವಣಿಯ ಶೀಟುಗಳು ಶೀಟ್‌ಗಳು, ಜಾಹೀರಾತು ಫ‌ಲಕಗಳು ಹಾರಿ ಹೋಗಿವೆ. ಕೃಷಿ ಬೆಳೆಗಳಿಗೂ ಹಾನಿಯಾಗಿದೆ.

ವಿವಿಧೆಡೆ ಗುಡುಗು ಸಹಿತ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಿದೆ.

Advertisement

ಬೆಳ್ತಂಗಡಿಯಲ್ಲಿ ಮಧ್ಯಾಹ್ನ ಬಳಿಕ ಗುಡುಗು ಸಹಿತ ಮಳೆಯಾಗಿದೆ. ಬಂಟ್ವಾಳ ತಾಲೂಕಿನ ಹಲವೆಡೆ ಸಂಜೆ ಮಳೆ ಸುರಿದಿದೆ.

ಪುತ್ತೂರಿನಲ್ಲೂ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಮಾನ್ಯ ಮಳೆಯಾಗಿದೆ. ಕರಾವಳಿಯ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 32 ಡಿ.ಸೆ. ಮತ್ತು ಕನಿಷ್ಠ ತಾಪಮಾನ 25.2 ಡಿ.ಸೆ. ದಾಖಲಾಗಿತ್ತು.

ಉಡುಪಿಯಲ್ಲಿ
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಹಲವೆಡೆ ಬಿಸಿಲು ವಾತಾವರಣವಿದ್ದು, ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಉಡುಪಿ, ಮಣಿಪಾಲ, ಮಲ್ಪೆ, ಕುಂದಾಪುರ, ಕಾರ್ಕಳ ಸುತ್ತಮುತ್ತ ಬಿಟ್ಟುಬಿಟ್ಟು ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next