Advertisement

ಊರುಬೈಲು ಸೇತುವೆ: ದಿಮ್ಮಿಗಳ ತೆರವು

11:01 PM Jul 25, 2019 | mahesh |

ಅರಂತೋಡು: ಕೆಲವು ದಿನಗಳ ಹಿಂದೆ ಕೊಡಗಿನಲ್ಲಿ ಸುರಿದ ಮಳೆಯ ಪರಿಣಾಮವಾಗಿ ಊರುಬೈಲು ಸೇತುವೆಯ ಅಡಿಯಲ್ಲಿ ಸಿಲುಕಿ ಹಾಕಿ ಕೊಂಡ ಮರದ ದಿಮ್ಮಿಗಳನ್ನು ಹಾಗೂ ಪೊದೆಗಳನ್ನು ಊರವರು ಶ್ರಮದಾನದ ಮೂಲಕ ತೆರವುಗೊಳಿಸಿದರು.

Advertisement

ಕಳೆದ ವರ್ಷದ ಕೊಡಗಿನ ಭೀಕರ ಜಲಪ್ರಳಯದಲ್ಲಿ ಹಾನಿಗೀಡಾದ ಊರು ಬೈಲು ಸೇತುವೆಯನ್ನು ಜಿಲ್ಲಾಡಳಿತ ತಾತ್ಕಾ ಲಿಕವಾಗಿ ದುರಸ್ತಿಗೊಳಿಸಿ, ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಮೂರ್‍ನಾಲ್ಕು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಮತ್ತೂಮ್ಮೆ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದಿದ್ದು, ಊರುಬೈಲು ಸೇತುವೆ ಭಾಗಶಃ ಹಾನಿಗೀಡಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರಾದ ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್‌.ಎಸ್‌. ಅನಂತ ಅವರ ಮುಂದಾಳುತ್ವದಲ್ಲಿ ಸ್ಥಳೀಯ ಶ್ರೀ ಭಗವಾನ್‌ ಸಂಘದ ಸದಸ್ಯರು ಹಾಗೂ ಯುವಕರು ಶ್ರಮದಾನ ಮಾಡಿ, ಸೇತುವೆಯನ್ನು ದುರಸ್ತಿಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಚೆಂಬು ಗ್ರಾ.ಪಂ. ಸದಸ್ಯ ಮನೋಹರ್‌ ಎನ್‌.ಸಿ. ಪಂಚಾಯತ್‌ ವತಿಯಿಂದ ಜೆಸಿಬಿ ವ್ಯವಸ್ಥೆ ಮಾಡಿಕೊಡುವ ಮೂಲಕ ಸಹಕರಿಸಿದರು. ಮಕ್ಕಳು, ಊರವರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next