Advertisement
ಪುರುಷರಿಗೆ ಹೋಲಿಸಿದರೆ ಮೂತ್ರಾಂಗ ವ್ಯೂಹ ಸೋಂಕಿ (ಯುಟಿಐ – ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್)ಗೆ ತುತ್ತಾಗುವ ಅಪಾಯ ಸ್ತ್ರೀಯರಿಗೆ 30 ಪಟ್ಟು ಹೆಚ್ಚಿರುತ್ತದೆ. ಪ್ರತೀ ಸ್ತ್ರೀಗೂ ತನ್ನ ಜೀವಮಾನದಲ್ಲಿ ಒಂದಲ್ಲ ಒಂದು ಬಾರಿ ಮೂತ್ರಾಂಗವ್ಯೂಹ ಸೋಂಕಿಗೆ ತುತ್ತಾಗುವ ಅಪಾಯ ಶೇ.50ರಷ್ಟು ಇದ್ದೇ ಇರುತ್ತದೆ. ಇದರರ್ಥ, ಪ್ರತೀ ಇಬ್ಬರು ಮಹಿಳೆಯರಲ್ಲಿ ಒಬ್ಬರು ತನ್ನ ಜೀವಮಾನದಲ್ಲಿ ಮೂತ್ರಾಂಗ ಸೋಂಕಿಗೆ ತುತ್ತಾಗುತ್ತಾರೆ.
Related Articles
Advertisement
ಮೂತ್ರನಾಳದಿಂದ ಬ್ಯಾಕ್ಟೀರಿಯಾಗಳು ಮೂತ್ರಕೋಶಗಳನ್ನು ತಲುಪುತ್ತವೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಒದಗಿಸದಿದ್ದರೆ ಅವು ಯುರೇಟರ್‌ಗಳು ಮತ್ತು ಮೂತ್ರಪಿಂಡಗಳಿಗೂ ಲಗ್ಗೆ ಹಾಕುತ್ತವೆ.
ಯುಟಿಐ ಯಾವುದೇ ಸ್ತ್ರೀಯಲ್ಲಿ ಕಾಣಿಸಿ ಕೊಳ್ಳಬಹುದಾಗಿದ್ದರೂ ಮಧುಮೇಹಿಗಳು, ಗರ್ಭಿಣಿಯರು, ನೈರ್ಮಲ್ಯದ ಕಡೆಗೆ ಗಮನ ಕೊಡದಿರುವವರು. ಆಗಾಗ ಸಾರ್ವಜನಿಕ ಶೌಚಾಲಯ ಬಳಸುವವರು ಮತ್ತು ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿರುವವರಲ್ಲಿ ಉಂಟಾಗುವ ಸಾಧ್ಯತೆ ಹೆಚ್ಚು.
ಕೆಲವೊಮ್ಮೆ ನಿಮ್ಮಲ್ಲಿ ಕಾಣಿಸಿಕೊಂಡಿರುವ ಚಿಹ್ನೆಗಳಿಂದಷ್ಟೇ ಯುಟಿಐ ಉಂಟಾಗಿದೆ ಎಂದು ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಆಗ ನಿಮ್ಮಿಂದ ಮೂತ್ರದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಬೇಕಾಗುತ್ತದೆ. ಅದರ ಫಲಿತಾಂಶವು ಮೂತ್ರಾಂಗ ವ್ಯೂಹ ಸೋಂಕನ್ನು ಖಚಿತಪಡಿಸಿದ ಬಳಿಕ ನಿಮ್ಮ ಸೋಂಕನ್ನು ಪರಿಣಾಮಕಾರಿಯಾಗಿ ನಿವಾರಿಸಬಲ್ಲ ಆ್ಯಂಟಿಬಯಾಟಿಕ್ ಔಷಧವನ್ನು ಆರಿಸಿಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕಾಣಿಸಿಕೊಂಡಿರುವ ಸೋಂಕನ್ನು ಮೂಲೋ ತ್ಪಾಟನೆ ಮಾಡಲು ವೈದ್ಯರು ಆ್ಯಂಟಿ ಬಯಾಟಿಕ್ ಔಷಧದ ಕೋರ್ಸನ್ನು ಶಿಫಾರಸು ಮಾಡಿದ್ದರೆ ಸೋಂಕಿನ ಲಕ್ಷಣಗಳು ನಿವಾರಣೆ ಆದ ಬಳಿಕವೂ ಕೋರ್ಸನ್ನು ತಪ್ಪದೆ ಸಂಪೂರ್ಣಗೊಳಿಸುವುದು ಪಾಲಿಸುವುದು ಅತ್ಯಗತ್ಯ. ಇಲ್ಲವಾದರೆ ಸೋಂಕು ಮರುಕಳಿಸುವ ಅಪಾಯ ಇದ್ದೇ ಇದೆ. ಕೆಲವು ಪ್ರಕರಣಗಳಲ್ಲಿ ನಿಮಗೆ ಯುಟಿಐ ಇದೆ ಎಂಬ ಶಂಕೆಯಿದ್ದು, ಪ್ರಯೋಗಾಲಯ ಪರೀಕ್ಷೆಗಳು ಅದನ್ನು ಖಚಿತಪಡಿಸದೆ ಇದ್ದಲ್ಲಿ ನೀವು ಯುರೋಗೈನೆಕಾಲಜಿಸ್ಟ್ ಅವರನ್ನು ಸಂಪರ್ಕಿಸಬೇಕಾಗಬಹುದು. ಇದೊಂದು ಅಪರೂಪದ ಸೋಂಕು ಆಗಿರಬಹುದಾಗಿದ್ದು, ರೂಢಿಗತ ಪರೀಕ್ಷೆಗಳಲ್ಲಿ ಪತ್ತೆಯಾಗುವುದಿಲ್ಲ ಅಥವಾ ನೀವು “ಇಂಟರ್‌ಸ್ಟೀಶಿಯಲ್ ಕ್ರಿಸ್ಟೈಟಿಸ್’ ಎಂಬ ಇನ್ನೊಂದು ಬಗೆಯ ಸೋಂಕಿಗೆ ತುತ್ತಾಗಿರಬಹುದು. ಇಂಟರ್‌ಸ್ಟೀಶಿಯಲ್ ಕ್ರಿಸ್ಟೈಟಿಸ್ ಸೋಂಕು ಯುಟಿಐಯದೇ ಚಿಹ್ನೆಗಳನ್ನು ಪ್ರದರ್ಶಿಸುತ್ತದೆ. ಅತ್ಯಂತ ಅಪರೂಪಕ್ಕೆ ಈ ಚಿಹ್ನೆಗಳಿಗೆ ಕಾರಣ ಕಲ್ಲು ಅಥವಾ ಗಡ್ಡೆಯಾಗಿರಬಹುದು. ಯುರೋಗೈನೆಕಾಲಜಿಸ್ಟ್ ನಿಮ್ಮ ಚಿಹ್ನೆಗಳು ಮತ್ತು ಪರೀಕ್ಷೆಗಳನ್ನು ಆಧರಿಸಿ ಅನಾರೋಗ್ಯಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಸಮರ್ಥರಿರುತ್ತಾರೆ. ಸೌಮ್ಯಾ 29 ವರ್ಷ ವಯಸ್ಸಿನ ಮಹಿಳೆ, ಇಬ್ಬರು ಮಕ್ಕಳ ತಾಯಿ. ಆಕೆಗೆ ಕಳೆದ ವರ್ಷ ನಾಲ್ಕು ಬಾರಿ ಯುಟಿಐ ಉಂಟಾಗಿತ್ತು. ಇನ್ನಷ್ಟು ಬಾರಿ ಸೋಂಕು ಉಂಟಾಗುವುದನ್ನು ತಡೆಯಲು ಏನಾದರೂ ಮಾಡಬಹುದೇ ಎಂಬುದಾಗಿ ಆಕೆ ಕಾತರದಿಂದ ಇದ್ದರು. ಸೌಮ್ಯಾ ಮತ್ತು ಅವರಂತಹ ಇನ್ನಷ್ಟೋ ಮಹಿಳೆಯರ ಕಾತರಕ್ಕೆ ಉತ್ತರ, ಒಂದು ಹಂತದ ವರೆಗೆ “ಹೌದು’. ಪದೇ ಪದೇ ಯುಟಿಐ ಉಂಟಾಗುವುದನ್ನು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು, ಸಾರ್ವಜನಿಕ ಶೌಚಾಲಯಗಳ ಬಳಕೆಯನ್ನು ಕಡಿಮೆ ಮಾಡುವುದು, ತುಂಬಾ ಸಮಯದವರೆಗೆ ಮೂತ್ರ ತಡೆಹಿಡಿದುಕೊಳ್ಳದಿರುವುದು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ತಡೆಯಬಹುದು. ನಿಮಗೆ ಉಂಟಾಗಿರುವ ಚಿಹ್ನೆಗಳನ್ನು ಗುರುತಿಸಿ ಸೂಕ್ತ ಕಾಲದಲ್ಲಿ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಕೂಡ ಅಷ್ಟೇ ಪ್ರಾಮುಖ್ಯವಾದದ್ದು. ಶೀಘ್ರ ರೋಗ ಪರೀಕ್ಷೆ ಮತ್ತು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಯುಟಿಐ ಮತ್ತು ಅದರ ಸಂಕೀರ್ಣ ಸಮಸ್ಯೆಗಳಿಂದ ಪಾರಾಗಬಹುದು.
– ಡಾ| ದೀಕ್ಷಾ ಪಾಂಡೆ
ಡಾ| ರಿಚಾ ಚೊಕ್ಸಿ
ಡಾ| ಶ್ರೀಪಾದ ಹೆಬ್ಟಾರ್
ಓಬಿಜಿ, ಕೆ.ಎಂ.ಸಿ., ಮಣಿಪಾಲ