ಮದ್ದೂರು: ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ಜತೆಗೆ ಮೀಟರೀಕರಣ ಕೈಬಿಟ್ಟು 40 ಯುನಿಟ್ ಪದ್ಧತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಸೆಸ್ಕ್ ಬಳಿ ಪ್ರತಿಭಟನೆ ನಡೆಸಿ ಎಇಇ ಪ್ರದೀಪ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ವಿವಿಧ ಗ್ರಾಮಗಳಗ್ರಾಮಸ್ಥರು ಪೇಟೇಬೀದಿ ಮೂಲಕಮೆರವಣಿಗೆ ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಬಳಿಕ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಜಾರಿಗೊಳಿಸಿರುವ ನಿಯಮಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
ಹಲವಾರು ವರ್ಷಗಳಿಂದಲು ವಿವಿಧ ಯೋ ಜನೆಗಳ ಮೂಲಕ ಬೆಳಕಿಲ್ಲದ ಸಾವಿರಾರು ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಿ ಉಚಿತವಾಗಿ ವಿದ್ಯುತ್ ನೀಡುತ್ತಿರುವಸೆಸ್ಕ್ ಇತ್ತೀಚೆಗೆ 40 ಯುನಿಟ್ ವಿದ್ಯುತ್ ನಿಗದಿಪಡಿಸಿ ಹೆಚ್ಚು ಯುನಿಟ್ ಬಳಸಿದಕುಟುಂಬದವರಿಗೆ ಎಲ್.ಟಿ-1ಗೆ ಸೇರಿಸಿಮೀಟರೀಕರಣ ಮಾಡುತ್ತಿರುವ ಕ್ರಮವನ್ನು ಖಂಡಿಸಿದರು. ಭಾಗ್ಯ, ಕುಟೀರ, ಸೌಭಾಗ್ಯ,ದೀನ್‌ದಯಾಳ್ ಉಪಾಧ್ಯಾಯ ಜ್ಯೋತಿ ಹಾಗೂ ಬೆಳಕು ಯೋಜನೆ ಮೂಲಕವಿದ್ಯುತ್ ವಂಚಿತ ಕುಟುಂಬಗಳಿಗೆವಿದ್ಯುತ್ ಸೌಲಭ್ಯ ಕಲ್ಪಿಸಿ ಮೀಟರೀಕರಣ ಕೈಬಿಡಬೇಕೆಂದು ಒತ್ತಾಯಿಸಿದರು.
ಎಲ್ಲಾ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳಶಾಹಿಗಳ ಪರ ಧ್ವನಿ ಎತ್ತುತ್ತಿರುವ ಕ್ರಮ ಸರಿಯಲ್ಲ. ಶೋಷಣೆಗಳನ್ನು ನಿಲ್ಲಿಸದಿದ್ದಲ್ಲಿ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು. ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ತಾಲೂಕು ಅಧ್ಯಕ್ಷೆ ಅನಿತಾ, ಪದಾಧಿಕಾರಿಗಳಾದ ಶಕುಂತಲಾ,ಚನ್ನಮ್ಮ, ಮಂಜುಳಾ, ವೆಂಕಟೇಶ್, ನಾಗಣ್ಣ,ಗೌರಮ್ಮ, ಜಯಮ್ಮ, ವಸಂತ, ಅರುಣ್ ಕುಮಾರ್, ಶೋಭಾ ನೇತೃತ್ವ ವಹಿಸಿದ್ದರು.