Advertisement

1ರಿಂದ 5ನೇ ತರಗತಿ ಆರಂಭಿಸಲು ಒತ್ತಾಯ

02:41 PM Mar 13, 2021 | Team Udayavani |

ತುಮಕೂರು: ರಾಜ್ಯದಲ್ಲಿ ಮಾಲ್‌, ಚಿತ್ರ ಮಂದಿರ, ರೈಲು ಸಂಚಾರ, ಬಸ್‌ ಸಂಚಾರಆರಂಭಗೊಂಡಿವೆ. ಮದುವೆ ಸಮಾರಂಭಗಳಲ್ಲಿ ಜನರು ಭಾಗವಹಿಸುತ್ತಿದ್ದಾರೆ ಶಾಲಾ ಕಾಲೇಜು ನಡೆಯುತ್ತಿದೆ. ಆದರೂ ಕೋವಿಡ್‌ನೆಪದಲ್ಲಿ ಒಂದರಿಂದ 5ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಅವಕಾಶ ನೀಡದೆ ಖಾಸಗಿ ಶಾಲೆಗಳ ಮೇಲೆ ಸರ್ಕಾರ ಗದಾಪ್ರಹಾರ ಮುಂದುವರಿಸಿದೆ ಎಂದು ನೂತನ ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಆರೋಪಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಮ್ಮ ಖಾಸಗಿ ಶಾಲೆಗಳನ್ನು ಮುಗಿ ಸಲು ಹೊರಟಿದೆ. ಕಾರ್ಪೊರೇಟ್‌ಶಾಲೆ ಗಳಿಗೆ ಅನುಕೂಲ ಮಾಡುವ ಹುನ್ನಾರ ನಡೆದಿದೆ, ನಮಗೆ ಮಕ್ಕಳ ದಾಖಲಾತಿ ಶಾಲೆ ಆರಂಭಿಸಲು ಅವಕಾಶವಿಲ್ಲ ಆದರೆ ಕಾರ್ಪೊ ರೇಟ್‌ ಶಾಲೆಗಳಲ್ಲಿ ದಾಖಲಾತಿ ಈಗಾಗಲೇಮುಗಿ ದಿದ್ದು, ಈಗ ದಾಖಲಾತಿ ಮಾಡಿಕೊಳ್ಳಬೇಕಾದ ಬಜೆಟ್‌ ಶಾಲೆಗಳಿಗೆ ಅನುಮತಿಸಿಗದೇ ಇದ್ದರೆ ನಮ್ಮ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.

ನಮಗೂ ಅವಕಾಶ ನೀಡಿ: ಸರ್ಕಾರ ಇದನ್ನೆಲ್ಲಾ ಗಮನಿಸಬೇಕು ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್‌ ನಿಯಮಾವಳಿಅನುಸಾರ ಶಾಲೆಗಳನ್ನು ನಡೆಸಲು ಸಿದ್ಧವಿದ್ದರುಸಹಿತ ನಮ್ಮ ಶಾಲೆಗಳ ದಾಖಲಾತಿಗೆ ಅವಕಾಶನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನಮಗೂ ಅವಕಾಶನೀಡಬೇಕು ಎಂದುಒತ್ತಾಯಿಸಿದರು.

ರುಪ್ಸಾ ಸಂಘಟನೆ ರಾಜ್ಯ ಖಾಸಗಿ ಸಂಸ್ಥೆಗಳಹಿತವನ್ನು ಕಾಯುವುದಕ್ಕಾಗಿ ರಾಜ್ಯಾದ್ಯಂತಹೋರಾಟ ಮಾಡುತ್ತಿದ್ದು, ಸರ್ಕಾರ ಮುಂದಿಟ್ಟಿದ್ದ 16 ಬೇಡಿಕೆಗಳಲ್ಲಿ ಶಿಕ್ಷಕರ ನಿಧಿ, ವಿದ್ಯಾರ್ಥಿ ಗಳ ನಿಧಿ ಖಾಸಗಿ ಶಾಲೆಗಳಿಗೆ ನೀಡು ವಬೇಡಿಕೆಗೆ ಒಪ್ಪಿಕೊಂಡಿದೆ ಆದರೆ ಇದುವೆರಗೂಪಾಲಿಸಿಲ್ಲ ಎಂದು ಹೇಳಿದರು.

ಈ ಹಿಂದೆ ರುಪ್ಸಾ ಅಧ್ಯಕ್ಷರಾಗಿದ್ದ ಲೋಕೇಶ್‌ ತಾಳಿಕಟ್ಟೆ ಅವರು ಸಂಘದ ಹೆಸರನ್ನುದುರುಪಯೋಗ ಮಾಡಿಕೊಂಡು ತಮ್ಮಸ್ವಂತಕ್ಕೆ ಸಂಘವನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸಂಘದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದರು. ಈಗ ಅವರು ರುಪ್ಸಾ ಹೆಸರಿನಲ್ಲಿ ಬೇರೊಂದು ಸಂಘಟನೆ ಹುಟ್ಟಿಕೊಂಡಿದ್ದು,ಹೋರಾಟದ ಹೆಸರಿನಲ್ಲಿ ಉಚ್ಛಾಟಿತ ಅಧ್ಯಕ್ಷ ಲೋಕೇಶ್‌ ಹಣ ಸಂಗ್ರಹಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

Advertisement

ಫೈರ್‌ ಸೇಫ್ಟಿ ಮತ್ತು ಬಿಲ್ಡಿಂಗ್‌ ಸೇಫ್ಟಿ ವಿಚಾರದಲ್ಲಿ ಆಗಿರುವ ತೊಂದರೆಯನ್ನು ಬಗೆಹರಿಸುವಂತೆ ಸಿದ್ಧಗಂಗಾ ಶ್ರೀ ಅವರು ಸರ್ಕಾರ ಹೇಳಿದರು, ಸಹ ಶಿಕ್ಷಣ ಸಚಿವರು ಇದನ್ನುಬಗೆಹರಿಸಿಲ್ಲ, ಸರ್ಕಾರಿ ಶಾಲೆಗಳಿಗೆ ಇಲ್ಲದ ಈನಿಯಮ ಖಾಸಗಿ ಶಾಲೆಗಳಿಗೆ ಮಾತ್ರ ಏಕೆಜಾರಿ ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವರ ಹೇಳಿಕೆಗೆ ಆಕ್ರೋಶ: ಒಂದರಿಂದ ಐದನೇ ತರಗತಿವರೆಗೆ ಶಾಲೆಗಳನ್ನುತೆರೆಯಲು ಬಿಡುವುದಿಲ್ಲ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ, ಅಂಗನವಾಡಿ ನಡೆಸಲುಅವಕಾಶ ನೀಡಿರುವ ಸರ್ಕಾರ ಐದನೇ ತರಗತಿ ವರೆಗೆ ಮಾತ್ರ ಏಕೆ ಬೇಡ ಎನ್ನುತ್ತಿದೆ,ಕಾರ್ಪೊರೇಟ್‌ ಸಂಸ್ಥೆಗಳಿಗೆ ಅನುಕೂಲಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಅನುಮಾನಮೂಡುತ್ತಿದೆ ಎಂದರು. ಮಾರ್ಚ್‌ ಅಂತ್ಯವಾ ಗುತ್ತಾ ಬಂದರು ಸಹ ಆರ್‌ಟಿಇ ಅಡಿಯಲ್ಲಿದಾಖಲಾಗಿರುವ ಮಕ್ಕಳ ಅನುದಾನವನ್ನುಶಾಲೆಗಳಿಗೆ ನೀಡಿಲ್ಲ, ಅನುದಾನ ಬಿಡುಗಡೆಮಾಡಬೇ ಕೆಂದು ಆಗ್ರಹಿಸಿದ ಅವರು, ಫೈರ್‌ಸೇಫ್ಟಿ ಬಗ್ಗೆ ಉಚ್ಚ ನ್ಯಾಯಾಲ ಯದಲ್ಲಿ ಮೊಕದ್ದಮೆ ಹೂಡಿದ್ದು, ನ್ಯಾಯಾಲ ಯದ ತೀರ್ಪನ್ನು ಕಾಯುತ್ತಿದ್ದೇವೆ ಎಂದು ತಿಳಿಸಿದರು.

ತಾಳಿಕಟ್ಟೆಯಿಂದ ಜನರಿಗೆ ಮೋಸ: ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಧರ್‌ ದಿಂಡೂರುಮಾತ ನಾಡಿ, ರುಪ್ಸಾ ಸಂಘಟನೆಯಿಂದಖಾಸಗಿ ಸಂಸ್ಥೆಗಳ ಸಮಸ್ಯೆಗಳನ್ನು ಸರ್ಕಾರಕ್ಕೆಮನವರಿಕೆ ಮಾಡಿಕೊಡಲು ಹೋರಾಡಲುಸಂಘಟ ನೆ ಕಾರ್ಯನಿರ್ವಹಿಸುತ್ತಿರುವರುಪ್ಸಾ ಸಂಘಟನೆ, ಸರ್ಕಾರ ಖಾಸಗಿ ಸಂಸ್ಥೆಗಳನ್ನು ನಿರ್ಲಕ್ಷಿಸಿರುವುದರ ವಿರುದ್ಧ ಹೋರಾಟಮಾಡಲಿದ್ದೇವೆ ಎಂದರು.

ರುಪ್ಸಾ ಸಂಘಟನೆ ಏಳ್ಗೆಗೆ ಶ್ರಮಿಸದೇ,ವೈಯಕ್ತಿಕ ಹಿತಾಸಕ್ತಿಗಾಗಿ ಸಂಘಟನೆಯನ್ನುರಾಜ್ಯದ ಬಜೆಟ್‌ ಶಾಲೆಗಳನ್ನು ಬಲಿಕೊಡಲುಮುಂದಾಗಿದ್ದ ಉಚ್ಛಾಟಿತ ಅಧ್ಯಕ್ಷರ ಕಾರ್ಯ ವೈಖರಿಗೆ ಬೇಸತ್ತು, ಸಂಘಟನೆಯಿಂದ ಹೊರಹಾಕಲಾಗಿದೆ. ಆದರೂ ನಮ್ಮ ಸಂಘಟನೆ ಹೆಸರಿನಲ್ಲಿ ಇನ್ನೊಂದು ಸಂಘಟನೆ ಮಾಡಿಲೋಕೇಶ್‌ ತಾಳಿಕಟ್ಟೆ ಜನರಿಗೆ ಮೋಸಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಉಪಾಧ್ಯಕ್ಷ ನಾಗೇಂದ್ರ ಕಟೋRಲ್‌, ನಿರ್ದೇಶಕ ವಿನಯ್‌ ಪಾಟೀಲ್‌, ನಯಾಜ್‌ ಅಹ್ಮದ್‌ ಇತರರು ಇದ್ದರು.

ರಾಜ್ಯ ಬಜೆಟ್‌ ಶಾಲೆಗಳ ಹಿತವನ್ನು ಕಾಯುವುದಕ್ಕಾಗಿ ಸ್ಥಾಪಿಸಿದ ರುಪ್ಸಾಸಂಘಟನೆಯನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ ರುಪ್ಸಾಅಧ್ಯಕ್ಷರಾಗಿದ್ದ ಲೋಕೇಶ್‌ ತಾಳಿಕಟ್ಟೆಯನ್ನು ಉಚ್ಚಾಟಿಸಲಾಗಿದೆ. ಈತ ಇದೇಹೆಸರಿನಲ್ಲಿ ಮತ್ತೂಂದು ಸಂಘ ನೋಂದಾಯಿಸಿ ಕೊಂಡು ಖಾಸಗಿ ಶಿಕ್ಷಣಸಂಸ್ಥೆಗಳನ್ನು ವಂಚಿಸುವ ಸಾಧ್ಯತೆ ಇದೆ. ಈ ಬಗ್ಗೆ ಜಾಗೃತರಾಗಬೇಕು. – ಡಾ.ಹಾಲನೂರು ಎಸ್‌.ಲೇಪಾಕ್ಷ, ರುಪ್ಸಾ, ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next