Advertisement

ನೀರಿನ ಪೈಪ್‌ಲೈನ್‌ ದುರಸ್ತಿಗೆ ಆಗ್ರಹಿಸಿ ಧರಣಿ

06:01 PM Mar 10, 2021 | Team Udayavani |

ಗದಗ: ವರ್ಷಗಳು ಕಳೆದರೂ ಕುಡಿಯುವ ನೀರಿನ ಪೈಪ್‌ಲೈನ್‌ ದುರಸ್ತಿಗೊಳಿಸದ ಲೋಕೋಪಯೋಗಿ ಇಲಾಖೆ ಅಧಿ ಕಾರಿಗಳ ಕ್ರಮವನ್ನು ಖಂಡಿಸಿ ನಗರದ ಹೊಂಬಳ ರಸ್ತೆಯಲ್ಲಿರುವ ಸರಕಾರಿ ಪಶು ವೈದ್ಯಕೀಯ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳುಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ನಗರದ 24×7 ಕುಡಿಯುವ ನೀರಿನ ಯೋಜನೆಯಡಿ ಕಾಲೇಜಿಗೆ ನೀರಿನ ಸಂಪರ್ಕ ಕಲ್ಪಿಸಿದೆ. ಆದರೆ, ಹೊಂಬಳ ನಾಕಾ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ನೀರಿನ ಪೈಪ್‌ ಒಡೆದಿದ್ದು, ಕಳೆದಎರಡು ವರ್ಷಗಳಿಂದ ಕಾಲೇಜಿಗೆ ನೀರು ಪೂರೈಕೆಸಂಪೂರ್ಣ ಸ್ಥಗಿತಗೊಂಡಿದೆ. ಪರಿಣಾಮ ಕಾಲೇಜಿನಲ್ಲಿನೀರಿಗಾಗಿ ಹಾಹಾಕಾರ ಶುರುವಾಗಿದೆ. ಇದರಿಂದಾಗಿ,ಕಾಲೇಜಿನಲ್ಲಿರುವ 200 ವಿದ್ಯಾರ್ಥಿಗಳು,50ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ನೂರಾರು ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದೆ.

ಕಾಲೇಜಿನಲ್ಲಿರುವ ಕೊಳವೆ ಬಾವಿಯಿಂದ ಅಲ್ಪಸ್ವಲ್ಪನೀರು ಪೂರೈಕೆಯಾಗುತ್ತಿದೆ. ಆದರೆ, ಅದು ಸಂಪೂರ್ಣ ಫ್ಲೋರೈಡ್‌ಯುಕ್ತವಾಗಿದ್ದು, ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸುದಿಧೀರ್ಘ‌ ಅವ ಧಿಗೆ ಫ್ಲೋರೈಡ್‌ ನೀರು ಬಳಸಿದಲ್ಲಿ ಚರ್ಮ ಹಾಗೂ ಕೂದಲಿನ ಸಮಸ್ಯೆ ಎದುರಾಗುತ್ತದೆ ಎಂದು ವಿದ್ಯಾರ್ಥಿನಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳೀಯ ಶಾಸಕ ಎಚ್‌.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲಅವರ ಗಮನಕ್ಕೆ ತಂದರೂ, ಅ ಧಿಕಾರಿಗಳು ಕ್ರಮವಹಿಸುತ್ತಿಲ್ಲ. ಸಮಸ್ಯೆಗೆ ಯಾರೂ ಸ್ಪಂದಿಸ ದಿದ್ದರೆ ಬಗೆಹರಿಯುವುದು ಹೇಗೆ ಎಂದು ಅಧಿ ಕಾರಿಗಳ ವಿರುದ್ಧ ಕಿಡಿಕಾರಿದರು.

ಅಧಿಕಾರಿಗಳ ಮಧ್ಯೆ ವಾಗ್ವಾದ: ವಿದ್ಯಾರ್ಥಿಗಳುಕಚೇರಿಗೆ ಮುತ್ತಿಗೆ ಹಾಕಿದ ವಿಚಾರವಾಗಿಪಶುವೈದ್ಯಕೀಯ ವಿಶ್ವವಿದ್ಯಾಲಯದ ಡೀನ್‌ಹಾಗೂ ಲೋಕೋಪ ಯೋಗಿ ಇಲಾಖೆ ಸಹಾಯಕಅಭಿಯಂತರ ದೇವರಾಜ್‌ ಮಧ್ಯೆ ಮಾತಿನ ಕಚಮಕಿನಡೆಯಿತು. ಪೈಪ್‌ಲೈನ್‌ ದುರಸ್ತಿಗೊಳಿಸುವುದಾಗಿಭರವಸೆ ನೀಡಿದ್ದರೂ ವಿದ್ಯಾರ್ಥಿಗಳನ್ನು ಕರೆತಂದುರಂಪ ಮಾಡುತ್ತಿದ್ದೀರಿ ಎಂದು ಕಾಲೇಜು ಅ ಧಿಕಾರಿಗಳವಿರುದ್ಧ ದೇವರಾಜ ಹರಿಹಾಯ್ದರು. ಅದಕ್ಕೆ ಉತ್ತರಿಸಿದಡೀನ್‌ ನಾಗರಾಜ್‌ ಅವರು, ಇದು ಇಂದು ನಿನ್ನೆಯಸಮಸ್ಯೆಯಲ್ಲ. ಕಳೆದ ಮೂರು ವರ್ಷಗಳಿಂದ ಇದೇಗೋಳು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳಸಂಖ್ಯೆಯೂ ಹೆಚ್ಚುತ್ತಿದ್ದು, ನೀರಿನದ್ದೇ ಬಹುದೊಡ್ಡಸಮಸ್ಯೆಯಾಗಿದೆ. ಈ ಬಗ್ಗೆ ಹಲವು ಬಾರಿ ತಮ್ಮಗಮನಕ್ಕೆ ತಂದರೂ, ಪ್ರಯೋಜನವಾಗುತ್ತಿಲ್ಲ. ರೈಲ್ವೆಇಲಾಖೆಯಿಂದ 20 ಲಕ್ಷ ರೂ. ನೀಡಿದ್ದರೂ, ದುರಸ್ತಿಗೆಯಾಕೆ ಮೀನಮೇಷ ಎಣಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

Advertisement

ಲೋಕೋಪಯೋಗಿಇಲಾಖೆಯಿಂದಲೇ ಕಟ್ಟಡನಿರ್ಮಿಸಿದ್ದರಿಂದ ಮೂಲ ಸೌಕರ್ಯ ಒದಗಿಸುವುದು ನಮ್ಮ ಹೊಣೆ. ಆದರೆ,ಕಾಲೇಜಿನ ಸಮಸ್ಯೆ ಗಂಭೀರವಾಗಿಕಾಡುತ್ತಿರುವ ಬಗ್ಗೆ ಈಗಷ್ಟೇ ನನ್ನಗಮನಕ್ಕೆ ಬಂದಿದೆ. ಎರಡು ದಿನಗಳಲ್ಲಿಕಾಮಗಾರಿ ಪೂರ್ಣಗೊಳಿಸಿ, ವಾರದಲ್ಲಿ ನೀರು ಸರಬರಾಜು ಮಾಡಿ, ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. – ರಾಥೋಡ್‌, ಇಇ ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next