ದಾಂಡೇಲಿ: ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಕಚೇರಿಗಳನ್ನು ಶೀಘ್ರದಲ್ಲಿ ಪ್ರಾರಂಭಿಸವುದರ ಜೊತೆಗೆ ಸಮಗ್ರ ಅಭಿವೃದ್ಧಿಗೆ ಹಾಗೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ದಾಂಡೇಲಿ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ಸಮಿತಿ ಪದಾಧಿಕಾರಿಗಳು ಸುದ್ದಿ ಗೋಷ್ಠಿಯಲ್ಲಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಲಿಖೀತ ಮನವಿ ಸಲ್ಲಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಅಕ್ರಮ್ ಖಾನ್ ಮಾತನಾಡಿ, ಹಿಂದಿನ ರಾಜ್ಯ ಸರ್ಕಾರವು ದಾಂಡೇಲಿ ತಾಲೂಕನ್ನಾಗಿಘೋಷಣೆ ಮಾಡಿ ಎರಡು ವರ್ಷವಾದರು ಯವುದೇ ತಾಲೂಕು ಕಚೇರಿಗಳು
ಪ್ರಾರಂಭವಾಗದಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು ಆದಷ್ಟು ಬೇಗನೆ ತಹಶೀಲ್ದಾರ್ ಕಾರ್ಯಾಲಯಕ್ಕೆ ಸಿಬ್ಬಂದಿ ನಿಯೋಜನೆ, ಅಭಿವೃದ್ಧಿಗೆ ಅನುಕೂಲವಾಗುವಂತೆ 28 ತಾಲೂಕು ಕಚೇರಿಗಳನ್ನು ಪ್ರಾರಂಭಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ 2007 ರಲ್ಲಿ ದಾಂಡೇಲಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ಜೈನ್ ವರದಿಯಲ್ಲಿನ ಯಾವುದೇ ಅಂಶಗಳು ಇದುವರೆಗೂ ಅನುಷ್ಠಾನ ಮಾಡದೇ ದಾಂಡೇಲಿ ತಾಲೂಕಿಗೆ ಅನ್ಯಾಯ ಮಾಡಲಾಗಿದೆ. ಅಲ್ಲದೇ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯಾವುದೇ ವಿಶೇಷ ಕ್ರಮಗಳು ಜರಗುತ್ತಿಲ್ಲ ಇದರಿಂದ ನಗರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಆದ್ದರಿಂದ ಜೈನ್ ವರದಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಈ ಕೂಡಲೇ ಆದೇಶ ಹೊರಡಿಸಿ ಮುಚ್ಚಿರುವ ಕೈಗಾರಿಕೆಗಳನ್ನು ಪುನಾರಂಭಿಸಲು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸಮಿತಿ ಉಪಾಧ್ಯಕ್ಷ ಅಬ್ದುಲ್ ವಹಾಬ ಬಾಂಸರಿ ಮಾತನಾಡಿ ತಾಲೂಕಿನಲ್ಲಿ ಅನೇಕ ಕೈಗಾರಿಕೆಗಳು ನೇಪಥ್ಯಕ್ಕೆ ಸರಿದಿವೆ. ಇರುವ ಒಂದೇ ಕೈಗಾರಿಕೆಯಲ್ಲಿ ಸ್ಥಳಿಯರನ್ನು ಕಡೆಗಣಿಸಿ ಪರಕಿಯರಿಗೆ ಉದ್ಯೋಗ ನೀಡಲಾಗುತ್ತಿದೆ. ನಿರುದ್ಯೋಗ ಸಮಸ್ಯೆಯಿಂದಾಗಿ ವ್ಯಾಪಾರ ವಹಿವಾಟು ಕುಸಿದಿದೆ ಆದ್ದರಿಂದ ತಾಲೂಕಿಗೆ ರಾಜ್ಯ ಸರ್ಕಾರ ಕೂಡಲೇ 250 ಕೋಟಿ ವಿಷೇಶಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ವಿ.ಎ ಕೋನಾಪುರಿ, ಫಿರೋಜ್ ಪೀರ್ ಜಾದೆ, ರಮೇಶ ಚಂದಾವರ, ರಫೀಕ್ ಹುದ್ದಾರ್, ರವಿ ಚವ್ಹಾಣ, ರುದ್ರಪ್ಪಾ, ಪ್ರೇಮ ಕುಮಾರ, ಮೀನಾಕ್ಷಿ ಬಡಿಗೇರ, ಮುಜಿಬಾ ಛಬ್ಬಿ ಇನ್ನಿತರರು ಇದ್ದರು.