Advertisement

ಭೂಮಿ ಹಕ್ಕಿಗೆ ಆಗ್ರಹಿಸಿ ಡಿ. 22 ಕ್ಕೆ ‘ಅರಣ್ಯವಾಸಿಗಳಿಂದ ಬೆಳಗಾವಿ ಚಲೋ’

01:12 PM Dec 15, 2021 | Team Udayavani |

ಶಿರಸಿ: ಅರಣ್ಯ ಅಧಿಕಾರಿಗಳಿಂದ ಅರಣ್ಯವಾಸಿಗಳ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅರಣ್ಯವಾಸಿಗಳ ಪ್ರಮುಖ 10 ಸಮಸ್ಯೆಗೆ ಸ್ಪಂದಿಸಿ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಳಗಾವಿಯಲ್ಲಿ ಜರಗುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಡಿಸೆಂಬರ್ 22 ರಂದು ‘ಅರಣ್ಯವಾಸಿಗಳಿಂದ ಬೆಳಗಾವಿ ಚಲೋಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

Advertisement

ಬುಧವಾರ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಬೆಳಗಾಂವ ಚಲೋ ಕಾರ್ಯಕ್ರಮದ ಮಾಹಿತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯ ಅಧಿಕಾರಿಗಳಿಂದ ಉಂಟಾಗುತ್ತಿರುವ ದೌರ್ಜನ್ಯ, ಸಕಾರಣವಿಲ್ಲದೇ ಅಭಯಾರಣ್ಯ ಪ್ರದೇಶ ವಿಸ್ತರಿಸುವುದು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಸಂದರ್ಭದಲ್ಲಿ ಅಸಮರ್ಪಕ ಜಿಪಿಎಸ್ ನ್ನು ಸರಿದೂಗಿಸುವುದು, ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಫಲ್ಯವಾಗಿದೆ ಎಂದರು.

ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿಸದೇ ಜರಗುತ್ತಿರುವ ಮಂಜೂರಿ ಪ್ರಕ್ರಿಯೆ, ಅರಣ್ಯವಾಸಿಗಳಿಗೆ ಅತಿವೃಷ್ಟಿಯಿಂದ ಬರಗಾಲ ಸಂದರ್ಭದಲ್ಲಿ ಪರಿಹಾರ ನಿಡದೇ ಇರುವುದು, ವನ್ಯಪ್ರಾಣಿಗಳಿಂದ ಅರಣ್ಯವಾಸಿಗಳಿಗೆ ವಿಮೆ ಮತ್ತು ಬೆಳೆಸಾಲ ನೀಡುವುದು,ಅತಿವೃಷ್ಟಿಯಿಂದ ಉಂಟಾಗಿರುವ ವಾಸ್ತವ್ಯದ ಇಮಾರತ್ತು ರಿಪೇರಿಗೆ ಕಿರುಕುಳ ನೀಡುವುದು ಎಂಬ ಪ್ರಮುಖ 10 ಬೇಡಿಕೆಗಳನ್ನು ಸರಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.

ಅರಣ್ಯ ಇಲಾಖೆಯು ಅರಣ್ಯ ಕ್ಷೇತ್ರದಲ್ಲಿ ಕಾಮಗಾರಿ ನೆಪದಲ್ಲಿ ಇತ್ತೀಚಿನ 5 ವರ್ಷದಲ್ಲಿ ಐದು ಲಕ್ಷಕ್ಕೂ ಮಿಕ್ಕಿ ಮರ ಕಡಿದಿರುವ ಕುರಿತು ಹಾಗೂ ಕಾಮಗಾರಿಯ ಪಾರದರ್ಶಕ್ಕೆ ವಿಶೇಷ ತನಿಖೆಗೆ ಒಳಪಡಿಸಲು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಅಗ್ರಹಿಸಲಾಗುವುದು ಎಂದು ರವೀಂದ್ರ ನಾಯ್ಕ ತಿಳಿಸಿದರು.

ವೇದಿಕೆಯ ಮೇಲೆ ಹೋರಾಟಗಾರರ ವೇದಿಕೆಯ ಸಂಚಾಲಕರಾದ ಉದಯ ನಾಯ್ಕ, ರವಿ ಕುಂದರಗಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next