Advertisement

ಸ್ಥಳೀಯರಿಗೆ ಅಂಗನವಾಡಿ ಹುದ್ದೆ ನೀಡಲು ಒತ್ತಾಯ  

01:41 PM May 01, 2022 | Team Udayavani |

ಯಳಂದೂರು: ಅಂಗನವಾಡಿ ಕಾರ್ಯ ಕರ್ತೆಯನ್ನು ಸ್ಥಳೀಯರಿಗೆ ನೀಡ ಬೇಕೆಂದು ಆಗ್ರಹಿಸಿ ತಾಲೂಕಿನ ಮೆಳ್ಳಹಳ್ಳಿ ಗ್ರಾಮಸ್ಥರು ಶನಿವಾರ ಅಂಗನವಾಡಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ, ಸಿಡಿಪಿಒ ಹಾಗೂ ಕಚೇರಿಯ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.

Advertisement

ಈ ಕೇಂದ್ರದಲ್ಲಿ ಕಳೆದ ವರ್ಷ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಮ್ಮ ನಿವೃತ್ತಿ ಹೊಂದಿದರು. ಇಲ್ಲಿಗೆ ದೂರದ ಅಂಬಳೆ ಗ್ರಾಪಂ ವ್ಯಾಪ್ತಿಗೆ ಸೇರುವ ಕಾರ್ಯಕರ್ತೆಗೆ ನೇಮಕ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯ 3 ಕಿ.ಮೀ. ಒಳಗಿನ ಮಹಿಳೆಯನ್ನೇ ಕಾರ್ಯಕರ್ತೆಯಾಗಿ ನೇಮಿಕಸಬೇಕೆಂಬ ನಿಯಮವಿದೆ. ಈ ನಿಯಮ ಗಾಳಿಗೆ ತೂರಲಾಗಿದೆ. ಅಂಬಳೆ ಗ್ರಾಪಂ ವ್ಯಾಪ್ತಿಯ ಇಲ್ಲಿಗೆ ಐದು ಕಿ.ಮೀ. ಗೂ ಹೆಚ್ಚು ದೂರದಿಂದ ಬರುವ ಮಹಿಳೆಗೆ ಈ ಹುದ್ದೆಗೆ ನೇಮಿಸಿ ಕೊಳ್ಳ ಲಾಗಿದ್ದು ಇಲಾಖೆಯ ಅಧಿಕಾರಿಗಳು ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಸಿಡಿಪಿಒ ಹಾಗೂ ಡಿಡಿ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಮನವಿಯನ್ನು ಮಾಡಲಾಗಿದೆ. ಕೂಡಲೇ ಸ್ಥಳೀಯರನ್ನು ಇಲ್ಲಿಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಟನೆ ನಡೆಸಿದರು.

ಸಿಡಿಪಿಒಗೆ ಘೇರಾವ್‌: ಸ್ಥಳಕ್ಕೆ ಸಿಡಿಪಿಒ ಸೋಮಶೇಖರ್‌ ಹಾಗೂ ಮೇಲ್ವಿಚಾರಕಿ ಸರಸ್ವತಿ ಭೇಟಿ ನೀಡಿದರು. ಈ ಸಂದರ್ಭ ದಲ್ಲಿ ಗ್ರಾಮಸ್ಥರು ಘೇರಾವ್‌ ಮಾಡಿದರು. ಸಿಡಿಪಿಒ ಸೋಮಶೇಖರ್‌ ಮಾತ ನಾಡಿ, ಈಗಿರುವ ಕಾರ್ಯಕರ್ತೆಯನ್ನು ಬೇರೆಡೆ ವರ್ಗಾವಣೆ ಮಾಡಲು ಪತ್ರ ಬರೆಯಲಾಗಿದೆ. ತಕ್ಷಣಕ್ಕೆ ದುಗ್ಗಹಟ್ಟಿ ಕಾರ್ಯಕರ್ತೆಯನ್ನು ಇಲ್ಲಿಗೆ ನೇಮಿಸಿ ಮುಂದಿನ ದಿನಗಳಲ್ಲಿ ಸರ್ಕಾರಿ ನಿಯಮದಂತೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಸದಸ್ಯ ಮಾಲತಿ, ಕೆಂಪರಾಜು, ಚಿಕ್ಕತಾಯಮ್ಮ ಮುಖಂಡ ರಾದ ನಟರಾಜು, ಮಾದಪ್ಪನಾಯಕ, ದುಂಡಯ್ಯ, ಬಸವರಾಜು, ಮಹದೇವನಾಯಕ, ಬಸವಣ್ಣ, ಗೀತಾ ಸೇರಿದಂತೆ ಅನೇಕರು ಇದ್ದರ

Advertisement

Udayavani is now on Telegram. Click here to join our channel and stay updated with the latest news.

Next