Advertisement

ಮದ್ಯದಂಗಡಿ ಬಂದ್‌ ಮಾಡಿ ಪ್ರತಿಭಟನೆ

12:03 PM Mar 24, 2021 | Team Udayavani |

ನವಲಗುಂದ: ತಿರ್ಲಾಪುರ ಗ್ರಾಮದಲ್ಲಿ ಮದ್ಯದಂಗಡಿ ಪ್ರಾರಂಭವಾಗಿದ್ದನ್ನು ಖಂಡಿಸಿ ರೈತಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹಾಗೂ ಗ್ರಾಮದಮಹಿಳೆಯರು ಮಂಗಳವಾರ ರಾತ್ರಿಅಂಗಡಿಯನ್ನು ಬಂದ್‌ ಮಾಡಿ ಪ್ರತಿಭಟನೆ ಮಾಡಿದರು.

Advertisement

ವೀರೇಶ ಸೊಬರದಮಠ ಮಾತನಾಡಿ, ಗ್ರಾಮಗಳಲ್ಲಿ ಮದ್ಯ ಮಾರಾಟಮಾಡಬಾರದು ಎಂದು ಮೇಲಿಂದ ಮೇಲೆ ತಹಶೀಲ್ದಾರ್‌ ಹಾಗೂ ಜಿಲ್ಲಾ ಧಿಕಾರಿಗೆಮನವಿ ಮಾಡುತ್ತಾ ಬಂದರೂ ಈಗತಿರ್ಲಾಪುರ ಗ್ರಾಮದಲ್ಲಿ ಮದ್ಯದಂಗಡಿಗೆಪರವಾನಗಿ ನೀಡಿರುವುದನ್ನು ಖಂಡಿಸುತ್ತೇವೆ.ಬಾರ್‌ ಆರಂಭದಿಂದ ಯುವಕರು ತಮ್ಮಜೀವನ ಹಾಳು ಮಾಡಿಕೊಳ್ಳುತ್ತಾರೆ.ತಕ್ಷಣ ಮದ್ಯದಂಗಡಿ ಪರವಾನಗಿ ರದ್ದುಮಾಡಿ ಮದ್ಯ ಮುಕ್ತಗೊಳಿಸಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಸಿಪಿಐ, ಪಿಎಸ್‌ಐ ಹಾಗೂ ಅಬಕಾರಿ ಇಲಾಖೆ ಸಿಬ್ಬಂ ದಿ ಆಗಮಿಸಿ ಪ್ರತಿಭಟನೆಗಾರರ ಮನವೊಲಿಸುವ ಪ್ರಯತ್ನ ಮಾಡಿದರು.ಬಾರ್‌ ಪರವಾನಗಿ ರದ್ದುಗೊಳಿಸುವವರೆಗೂಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪ್ರತಿಭಟನೆ ಮುಂದುವರಿಸಿದರು. ಗ್ರಾಪಂಸದಸ್ಯ ಅಶೋಕ ಮಂಕಣಿ, ಲಕ್ಷ್ಮಣವಾಲ್ಮೀಕಿ, ಬಸವರಾಜ ಕಂಬಳಿ, ಮಹಾಂತೇಶಕುಂದಗೋಳ, ಸಿದ್ಲಿಂಗಪ್ಪ ಮರೇವಾಡ,ಮಂಜುಳಾ ಕುಸುಗಲ್ಲ, ವಿಜಯಲಕ್ಷ್ಮೀ ಮೊರಬದ ಇತರರು ಇದ್ದರು.

ಶಿಕ್ಷಕರಿಗೆ ಕೋವಿಡ್‌ ಲಸಿಕೆಗೆ ಒತ್ತಾಯ :

ಹುಬ್ಬಳ್ಳಿ: ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಕರ್ತವ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಕೂಡಲೇ ಕೋವಿಡ್‌-19 ಲಸಿಕೆ ನೀಡುವಂತೆ ಗ್ರಾಮೀಣ ಶಿಕ್ಷಕರ ಸಂಘ ಒತ್ತಾಯಿಸಿದೆ.

Advertisement

ಈಗಾಗಲೇ 6-10ನೇ ತರಗತಿ ಹಾಗೂ ಎಲ್ಲ ಕಾಲೇಜುಗಳು ಪ್ರಾರಂಭಗೊಂಡಿದ್ದು ಶಿಕ್ಷಕರು, ಅಧ್ಯಾಪಕರು, ಪ್ರಾಧ್ಯಾಪಕರು, ಬೇರೆ ಬೇರೆ ಸ್ಥಳಗಳಿಂದ ಪ್ರಯಾಣಿಸಿ ಕರ್ತವ್ಯದ ಸ್ಥಳಗಳಿಗೆ ಹಾಜರಾಗುತ್ತಿದ್ದಾರೆ.ಇವರ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರಿಗೂ ವಯಸ್ಸಿನ ನಿರ್ಬಂಧ ವಿಧಿ ಸದೆ ಕೋವ್ಯಾಕ್ಸಿನ್‌ ನೀಡಬೇಕು. ವ್ಯಾಕ್ಸಿನ್‌ ಪಡೆದವರಿಗೆ ಎರಡು ದಿನಗಳ ವಿಶೇಷ ರಜೆ ಮಂಜೂರು ಮಾಡಬೇಕುಎಂದು ಮುಖ್ಯಮಂತ್ರಿ, ಶಿಕ್ಷಣ ಸಚಿವ, ಸರಕಾರದ ಮುಖ್ಯಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಅವರಿಗೆ ಸಂಘದ ಅಧ್ಯಕ್ಷ ಅಶೋಕ ಸಜ್ಜನ, ಮಲ್ಲಿಕಾರ್ಜುನ ಉಪ್ಪಿನ, ಎಲ್‌.ಐ.ಲಕ್ಕಮ್ಮನವರ, ಶರಣಪ್ಪಗೌಡ್ರ, ಪವಾಡೆಪ್ಪ ಕಾಂಬಳೆ ಎಸ್‌.ಎಫ್‌. ಪಾಟೀಲ,ಎಂ.ಐ. ಮುನವಳ್ಳಿ, ಗೋವಿಂದ ಜುಜಾರೆ, ಪೀರಸಾಬ ನದಾಫ್‌, ಕೆ.ಎಂ.ನಾಗರಾಜು, ವಿ. ಕುಸುಮಾ, ರಾಜಶ್ರೀ ಪ್ರಭಾಕರ, ರಾಮಪ್ಪ ಹಂಡಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next