ಮಂಡ್ಯ: ಹಲಗೂರು ಗ್ರಾಮ ಪಂಚಾಯ್ತಿ ಪಿಡಿಒ ಎ.ಬಿ.ಶಶಿಧರ್‌ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ, ಗ್ರಾಪಂಸದಸ್ಯರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಲಗೂರು ಗ್ರಾಪಂ ಪಿಡಿಒ ಎ.ಬಿ.ಶಶಿಧರ್‌ಹಾಗೂ ಅಧ್ಯಕ್ಷೆ ಮಂಗಳಮ್ಮ ಸೇರಿ ಪಂಚಾಯ್ತಿಯ ವಿವಿಧ ಯೋಜನೆಯಲ್ಲಿ ಹಣಕಾಸಿನ ಅವ್ಯವಹಾರ ನಡೆಸಿದ್ದಾರೆ. ಇದರ ಬಗ್ಗೆ ತಾಪಂ ವತಿಯಿಂದ ತನಿಖೆ ನಡೆಸ ಲಾಗಿದ್ದು, ವರದಿಯಲ್ಲಿ ಸುಮಾರು 30 ಲಕ್ಷ ರೂ. ಹಣ ದುರುಪಯೋಗವಾಗಿರುವುದು ದೃಢಪಟ್ಟಿದೆ. ಆದ್ದರಿಂದ ಪಿಡಿಒ ಎ.ಬಿ.ಶಶಿಧರ್ ಪ್ರೊಬೆಷನರಿ ಅವಧಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿರುವುದರಿಂದ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ನಡೆದಿದೆ ಅವ್ಯವಹಾರ: 2018-19ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಸುಮಾರು 12 ಲಕ್ಷ ರೂ., ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯಡಿ 5 ಲಕ್ಷ ರೂ., 14ನೇ ಹಣಕಾಸಿನಯೋಜನೆಯಡಿ ಸುಮಾರು 11 ಲಕ್ಷ ರೂ. ಹಾಗೂ ಗ್ರಾಪಂ ನಿಧಿಯಲ್ಲಿ 3 ಲಕ್ಷ ರೂ. ಹಣ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದರು.
ಕ್ರಮ ಕೈಗೊಂಡಿಲ್ಲ: ಗ್ರಾಮ ಪಂಚಾಯ್ತಿಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಹಣ ಮೀಸಲಿರಿಸಿಸರಿಯಾಗಿ ಬಳಕೆ ಮಾಡಿಲ್ಲ. ನರೇಗಾ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ. ಹಲಗೂರು ಗ್ರಾಮದಲ್ಲಿ ಚರಂಡಿ, ರಸ್ತೆಗಳನ್ನು ಸರಿಯಾಗಿ ಕ್ಲೀನ್ ಮಾಡದೆ ದುರ್ವಾಸನೆಯಿಂದಕೂಡಿದೆ. ಗ್ರಾಪಂಕಟ್ಟಡಕ್ಕೆಹಣ ಮೀಸಲಿದ್ದರೂ, ಕಟ್ಟಡ ನಿರ್ಮಾಣದ ಬಗ್ಗೆ ಯಾವುದೇ ರೀತಿಯ ಕ್ರಮವಹಿಸಿಲ್ಲ. ಬೀದಿ ದೀಪ ನಿರ್ವಹಣೆ ಮಾಡಿಲ್ಲ ಎಂದು ಕಿಡಿಕಾರಿದರು.
ಸಾಮಾನ್ಯ ಸಭೆ ನಡೆಸಿಲ್ಲ: ಪಿಡಿಒ ಸಾರ್ವಜನಿಕರ ಜತೆ ಸರಿಯಾಗಿ ನಡೆದುಕೊಳ್ಳುವುದಿಲ್ಲ. ಗ್ರಾಪಂನಲ್ಲಿ ಸ್ಟಾಕ್ ಬುಕ್ ಮತ್ತು ಪ್ರೊಮ್ ಟು ರಿಜಿಸ್ಟ್ರಾರ್ ನಿರ್ವಹಣೆ ಮಾಡಿಲ್ಲ. ಗ್ರಾಮಸಭೆ ಮತ್ತು ವಾರ್ಡ್ ಸಭೆಯನ್ನು ಸರಿಯಾಗಿ ನಡೆಸಿರುವುದಿಲ್ಲ. ಅಧ್ಯಕ್ಷರು ಮತ್ತು ಪಿಡಿಒ ಇಬ್ಬರು ಸೇರಿ 8 ತಿಂಗಳ ಕಾಲ ಸಾಮಾನ್ಯ ಸಭೆ ನಡೆಸಿಲ್ಲ. ಇಲಾಖೆ ಅನುಮತಿ ಇಲ್ಲದೆ ಪಿಡಿಒ ಎ.ಬಿ.ಶಶಿಧರ್ ಐಷಾರಾಮಿ ಹೊಂಡೈ ಕಾರುಖರೀದಿಸಿದ್ದಾರೆ. ಆದ್ದರಿಂದ ಕೂಡಲೇ ಪಿಡಿಒ ಶಶಿಧರ್ ಹಾಗೂ ಅಧ್ಯಕ್ಷೆ ಮಂಗಳಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಹಣ ವಸೂಲಿ ಮಾಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯರಾದ ಎಂ.ಶ್ರೀಕಂಠ, ಮಂಜುನಾಥ, ಅಬ್ಟಾಸ್, ಬಾಬು, ಅಕ್ರಂ ಉಲ್ಲಾ, ಪಾಪಣ್ಣ, ರಮಾನಂದ, ರವಿಗೌಡ, ಕೆಂಪಣ್ಣಸಾಗ್ಯ, ಹುರುಗಲವಾಡಿ ರಾಮಯ್ಯ, ದೇವರಾಜ್, ಶಿವಕುಮಾರ ಹುಲ್ಲೇಗಾಲ, ಜಕಾವುಲ್ಲ ಸೇರಿದಂತೆ ಮತ್ತಿತರರಿದ್ದರು.