ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸುವುದಾರೆ, ಘಟ್ಟದ ಮೇಲಿನ ತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾದ ಯಲ್ಲಾಪುರ ತಾಲೂಕನ್ನು ಜಿಲ್ಲಾಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿಜಿಲ್ಲಾ ಹೋರಾಟ ಸಮಿತಿ ಜನಜಾಗೃತಿ ಕಾರ್ಯಕ್ರಮ ನಡೆಸಿತು.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಯಲ್ಲಾಪುರ ಘಟ್ಟದ ಮೇಲಿನತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾಗಿದೆ. ಜಿಲ್ಲೆಯಾಗುವ ಎಲ್ಲಾ ಅರ್ಹತೆ ಹೊಂದಿದೆಎಂದು ಹಕ್ಕೊತ್ತಾಯ ಮಂಡಿಸಿದರು.
ಹೋರಾಟ ಸಮಿತಿಯವರಾದಶ್ರೀರಂಗ ಕಟ್ಟಿ, ಬೀರಣ್ಣ ನಾಯಕಮೊಗಟಾ, ಪ್ರೇಮಾನಂದ ನಾಯ್ಕ,ನಾಗೇಶ್ ಯಲ್ಲಾಪುರಕರ್, ಜಿ.ಆರ್.ಹೆಗಡೆ ಕುಬ್ರಿಗುಡ್ಡೆ, ಬಾಬಾ ಸಾಬ್‌ಅಲನ್, ಪ್ರದೀಪ ಯಲ್ಲಾಪುರಕರ್, ನಿವೃತ್ತ ತಹಶೀಲ್ದಾರ್ ತುಳಸಿ ಪಾಲೇಕರ್, ನಾರಾಯಣ ನಾಯ್ಕ, ಮಾಧವ ನಾಯಕ,ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿ ಯಲ್ಲಾಪುರ ಜಿಲ್ಲೆಗೆ ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿಸಚಿವ ಶಿವರಾಮ ಹೆಬ್ಟಾರ್ ಅವರುಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಯಲ್ಲಾಪುರ ಜಿಲ್ಲಾ ಹೋರಾಟ ಸಮಿತಿಹಮ್ಮಿಕೊಂಡಿದ್ದ ಜನ ಜಾಗೃತಿ ಶಿಬಿರಕ್ಕೆಭೇಟಿ ನೀಡಿ ಜಿಲ್ಲಾ ಹೋರಾಟ ಸಮಿತಿ ಮನವಿ ಸ್ವೀಕರಿಸಿದರು.
ಅಖಂಡ ಉತ್ತರ ಕನ್ನಡ ಜಿಲ್ಲೆ ವಿಭಜಿಸಬೇಕು ಎಂಬ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಹಾಗೊಂದು ವೇಳೆ ವಿಭಜನೆಯ ಪ್ರಸ್ತಾಪ ಬಂದಲ್ಲಿಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಎನ್‌ಜಿಒಗಳು ಎಲ್ಲಾರಾಜಕೀಯ ಪಕ್ಷಗಳು, ಹಿರಿಯರು, ತಜ್ಞರು, ಪ್ರಾಜ್ಞರು,ಚಿಂತಕರು ಸೇರಿದಂತೆ ಘಟ್ಟದ ಕೆಳಗೆ ಮತ್ತು ಮೇಲಿನಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಚಿಂತನೆಮಾಡಲಾಗುವುದು. ಜಿಲ್ಲೆ ವಿಭಜನೆಯ ಪ್ರಸ್ತಾಪ ಬಂದನಂತರವಷ್ಟೆ ಯಾವ ತಾಲೂಕನ್ನ ಜಿಲ್ಲೆ ಮಾಡಬೇಕೆಂದು ತೀರ್ಮಾನಿಸಲು ಸಾಧ್ಯ. ಈಗ ಅದು ತೀರಾ ಅಪ್ರಸ್ತುತಎಂದ ಅವರು, ಇದೊಂದು ಸೂಕ್ಷ್ಮ ವಿಚಾರವಾಗಿದೆ. ಯಾವುದೇ ಹೋರಾಟದ ಹಿಂದೆ ಸದುದ್ದೇಶ ಇರಬೇಕು. ಶಾಂತಿಯುತವಾಗಿ ಮಾಡಿದಲ್ಲಿ ಹೋರಾಟಕ್ಕೆ ಗೌರವ.
-ಶಿವರಾಮ್ ಹೆಬ್ಟಾರ್, ಜಿಲ್ಲಾ ಉಸ್ತುವಾರಿ ಸಚಿವ