Advertisement

ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಧಿಡೀರ್ ಶೋಧ ಕಾರ್ಯ

03:48 PM Aug 30, 2019 | keerthan |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉಗ್ರರ ದಾಳಿ ಭೀತಿಯ ಬೆನ್ನಲ್ಲೇ ಜಿಲ್ಲೆಯ ಐತಿಹಾಸಿಕ ನಂದಿಗಿರಿ ಧಾಮದಲ್ಲಿ ಶುಕ್ರವಾರ ಶಸ್ತ್ರಸಜ್ಜಿತ ಪೋಲಿಸರ ತಂಡ ಶೋಧ ಕಾರ್ಯ ನಡೆಸಿದೆ.

Advertisement

ರಾಜ್ಯದಲ್ಲಿ ಉಗ್ರರ ದಾಳಿ ಭೀತಿ ಇರುವ ಬಗ್ಗೆ ಕೇಂದ್ರದ ಗುಪ್ತಚರ ಇಲಾಖೆಯ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿ ಬಾಂಬ್ ನಿಷ್ಕ್ರಿಯ ತಂಡ, ಶ್ವಾನ ದಳ ತಂಡಗಳು ತೆರಳಿ ತೀವ್ರ ತಪಾಸಣೆ ನಡೆಸುತ್ತಿರುವ ಪೊಲೀಸರು, ಜಿಲ್ಲೆಯ ವಿಶ್ವ ವಿಖ್ಯಾತ ಪ್ರವಾಸಿ ತಾಣವಾದ ನಂದಿಗಿರಿ ಧಾಮದಲ್ಲಿ ತಪಾಸಣೆ ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲಾಧ್ಯಂತ ಹೈ ಅಲರ್ಟ್ ಘೋಷಿಸಿದ್ದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಂತೋಷ್ ಬಾಬು. ಕೆ ರವರ ಆದೇಶದಂತೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕರಾದ ಎನ್. ಎಲ್. ನಾಗೇಂದ್ರ ಪ್ರಸಾದ್ ರವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ವಿಶೇಷ ಡಿ -ಸ್ವಾಟ್ ತರಬೇತಿಯನ್ನು ಪಡೆದಿರುವ ತಂಡ ನಂದಿಗಿರಿಧಾಮದಲ್ಲಿ ತಪಾಸಣೆ ನಡೆಸಿತು.

ಗಿರಿಧಾಮದಲ್ಲಿ ಅನುಮಾನಸ್ಪದ ವ್ಯಕ್ತಿಗಳನ್ನು ಮತ್ತು ವಾಹನಗಳನ್ನು ತಪಾಸಣೆ ನಡೆಸುವ ಕಾರ್ಯದಲ್ಲಿ ನಿರತವಾಗಿದೆ. ಶನಿವಾರ, ಭಾನುವಾರ ವೀಕೆಂಡ್ ನಲ್ಲಿ ನಂದಿಗಿರಿಧಾಮಕ್ಕೆ ದೇಶ, ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ. ಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ತಪಾಸಣೆ ನಡೆಸಿಯೇ ಒಳ ಬಿಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next