Advertisement

ಅಡಿಕೆ ಬೆಳೆಗಾರರಿಗೆ ತುರ್ತು ಪರಿಹಾರ: ಕೇಂದ್ರಕ್ಕೆ ರಾಜ್ಯದ ನಿಯೋಗದಿಂದ ಮನವಿ

09:46 PM Oct 19, 2022 | Team Udayavani |

ಬೆಂಗಳೂರು: ಅಡಿಕೆ ಬೆಳೆಗೆ ಹರಡುತ್ತಿರುವ ಎಲೆಚುಕ್ಕೆ ರೋಗದಿಂದ ರೈತರು ತತ್ತರಿಸಿದ್ದು, ಅಡಿಕೆ ಬೆಳೆಗಾರರಿಗಾಗಿ ತುರ್ತು ಪರಿಹಾರ ಪ್ಯಾಕೇಜ್‌ ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ಕರ್ನಾಟಕದ ನಿಯೋಗ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.

Advertisement

ಈ ಸಂಬಂಧ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಭೇಟಿಯಾದ ನಿಯೋಗವು, ತಜ್ಞರು ಈಗಾಗಲೇ ಸೂಚಿಸಿದ ಶಿಲೀಂಧ್ರನಾಶಕ ಸಿಂಪಡಿಸಿದ್ದರೂ ಪ್ರಯೋಜನವಾಗಿಲ್ಲ. ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ರೋಗದ ಅಧ್ಯಯನ ಮತ್ತು ಸೂಕ್ತ ಪರಿಹಾರಕ್ಕಾಗಿ ವಿಜ್ಞಾನಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕು ಎಂದೂ ನಿಯೋಗ ಮನವಿ ಮಾಡಿದೆ.

ಇದಕ್ಕೂ ಮುನ್ನ ರಾಜ್ಯದ ಅಡಿಕೆ ಬೆಳೆಗಾರರ ಸ್ಥಿತಿಗತಿಯನ್ನು ವಿವರಿಸಿದ ನಿಯೋಗದ ಮುಖಂಡರು, ದೇಶಾದ್ಯಂತ ಸುಮಾರು 12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, 12 ಲಕ್ಷ ಟನ್‌ ಉತ್ಪಾದನೆಯಾಗುತ್ತಿದೆ. ಇದರ ಮೌಲ್ಯ ಸುಮಾರು 5,400 ಕೋಟಿ ರೂ. ಆಗಿದೆ. ಈ ಪೈಕಿ ಕರ್ನಾಟಕದಲ್ಲೇ 9.5 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದ್ದು, ಇದರ ಮೌಲ್ಯ 4,300 ಕೋಟಿ ರೂ. ಆಗಿದೆ. ಅಂದಾಜು 50 ಲಕ್ಷ ಜನ ಇದನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಪ್ರೊ| ಕೃಷ್ಣ ಭಟ್‌ ಮತ್ತಿತರರು ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next