Advertisement

ಖಾಸಗಿ ಶಾಲಾ-ಕಾಲೇಜುಗಳ ಸಮಸ್ಯೆ ನಿವಾರಣೆಗೆ ಒತ್ತಾಯ

05:32 PM Jul 07, 2022 | Team Udayavani |

ರಾಯಚೂರು: ಖಾಸಗಿ ಅನುದಾನ, ಅನುದಾನ ರಹಿತ ಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳ ನಿವಾರಿಸುವಂತೆ ಒತ್ತಾಯಿಸಿ ರಾಯಚೂರು ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿನಾಗೇಶರಿಗೆ ಮನವಿ ಸಲ್ಲಿಸಲಾಯಿತು.

Advertisement

ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ಅನುದಾನರಹಿತ ಶಾಲಾ- ಕಾಲೇಜುಗಳನ್ನು ಸಂವಿಧಾನ 371(ಜೆ) ಅಡಿ ವೇತನಾನುದಾನಕ್ಕೆ ಒಳಪಡಿಸಬೇಕು. ಸರ್ಕಾರ ಖಾಸಗಿ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು 2015ರ ಮುಂಚೆ ನಿವೃತ್ತಿ ಹಾಗೂ ಇತರ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿಗೆ ಅನುಮತಿಸಿದೆ. ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದ ಕಾರಣ 2021ರವರೆಗೆ ತೆರವಾದ ಬೋಧಕ ಹುದ್ದೆಗಳ ಭರ್ತಿ ಮಾಡಲು ಆದೇಶಿಸಬೇಕು ಎಂದು ಒತ್ತಾಯಿಸಿದರು.

ಖಾಸಗಿ ಶಾಲಾ-ಕಾಲೇಜುಗಳಲ್ಲಿ ಓದುವ ಮಕ್ಕಳಿಗಾಗಿ ಕುಡಿಯುವ ನೀರು ಹಾಗೂ ಶೌಚಾಲಯಗಳನ್ನು ಸರ್ಕಾರ ಅಥವಾ ಕೆಕೆಆರ್‌ಡಿಬಿಯಿಂದ ನಿರ್ಮಿಸಬೇಕು ಎಂಬುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಹೈ.ಕ ಹೋರಾಟ ಸಮಿತಿ ಮುಖಂಡ ಡಾ| ರಜಾಕ್‌ ಉಸ್ತಾದ್‌, ಕೇಶವರೆಡ್ಡಿ, ಬಸವರಾಜ ಪಾಟೀಲ್‌ ದರೂರು ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next