Advertisement

ಶಾಶ್ವತ ಯೋಜನೆ ಜಾರಿ ಮಾಡಲು ಆಗ್ರಹ

03:39 PM Nov 26, 2019 | Suhan S |

ದಾಂಡೇಲಿ: ನಗರದಲ್ಲಿ ಒಳ ಚರಂಡಿ ಯೋಜನೆ ಕಾಮಗಾರಿ ಪ್ರಾರಂಭಿಸುವ ಮುನ್ನ ಸಾರ್ವಜನಿಕರ ಅಹವಾಲು ಸ್ವೀಕರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ನಗರ ಬಿಜೆಪಿ ಘಟಕದವರು ಸೋಮವಾರ ನಗರಸಭಾ ಪೌರಾಯುಕ್ತ ಡಾ| ಸೈಯದ್‌ ಜಾಹೇದಾಲಿ ಮತ್ತು ಜಿಲ್ಲಾಧಿಕಾರಿ ಪರವಾಗಿ ತಹಶೀಲ್ದಾರ್‌ ಶೈಲೇಶ ಪರಮಾನಂದಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ, ಕುಮಟಾ, ಬೈಲಹೊಂಗಲ, ಹುನಗುಂದ ಸೇರಿದಂತೆ ಹಲವು ನಗರಗಳಲ್ಲಿ ಒಳಚರಂಡಿ ಯೋಜನೆ ಯಶಸ್ವಿಯಾಗಿಲ್ಲ. ಗದಗ ನಗರದಲ್ಲಿ ಕಾಮಗಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಎಲ್ಲ ಕಾರಣಗಳಿಗಾಗಿ ಜನರು ಯೋಜನೆ ವಿರೋಧಿಸುತ್ತಿದ್ದಾರೆ ಎಂದರು.

ಯೋಜನೆ ಬಗ್ಗೆ ಸರಿಯಾದ ಮಾಹಿತಿಯನ್ನು ನಗರದ ನಿವಾಸಿಗಳಿಗೆ ನೀಡದ ಕಾರಣ ಸಂಬಂಧಿಸಿದ ಇಲಾಖೆಯವರು ಸಾರ್ವಜನಿಕ ಸಭೆ ಕರೆದು ಅಹವಾಲು ಪಡೆಯಬೇಕು. ಇದಾದ ನಂತರ ಯೋಜನೆಯಲ್ಲಿ ಬದಲಾವಣೆ ಮಾಡಬೇಕೆಂದರೆ ಮಾಡಿ, ನಗರಕ್ಕೆ ಶಾಶ್ವತಕಾಯಂ ಯಶಸ್ವಿ ಯೋಜನೆ ಜಾರಿ ಮಾಡಿಕೊಡಬೇಕು ಎಂದರು. ಕಾಮಗಾರಿ ನಡೆಸಲು ವಿರೋಧ ಮಾಡುತ್ತಿದ್ದೇವೆ ಹೊರತು, ಯೋಜನೆ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಸಾರ್ವಜನಿಕರ ಸಭೆ ಕರೆದು ಎಲ್ಲ ಸಮಸ್ಯೆಗಳ ಕುರಿತುಹಾಗೂ ಯೋಜನೆ ಚಿತ್ರಣ, ನೀಲನಕ್ಷೆ ಮತ್ತು ಸಂಪೂರ್ಣ ಮಾಹಿತಿ ನೀಡಬೇಕು. ಒಳಚರಂಡಿ ಯೋಜನೆಯಿಂದ ಸಾರ್ವಜನಿಕರಿಗೆ ಆಗುವ ಸಮಸ್ಯೆ ಬಗೆಹರಿಸುವ ಸಂಪೂರ್ಣ ಜವಾಬ್ದಾರಿ ವಹಿಸುವ ಬಗ್ಗೆ ಲಿಖೀತ ಭರವಸೆಯನ್ನು ಈ ಯೋಜನೆಗೆ ಸಂಬಂಧಪಟ್ಟವರು ಸರ್ಕಾರಕ್ಕೆ ಕೊಡಬೇಕು ಎಂದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ನಗರಸಭಾ ಸದಸ್ಯ ನರೇಂದ್ರ ಚೌಹಾಣ್‌, ಕಾರ್ಯದರ್ಶಿ ಸುಭಾಷ ಅರವೇಕರ, ಪಕ್ಷದ ಮುಖಂಡರಾದ ಸುಧಾಕರ ರೆಡ್ಡಿ, ಅಶೋಕ ಪಾಟೀಲ, ಚಂದ್ರಕಾಂತ ಕ್ಷೀರಸಾಗರ, ಟಿ.ಎಸ್‌. ಬಾಲಮಣಿ, ಗುರು ಮಠಪತಿ, ಮಂಜುನಾಥ ಪಾಟೀಲ, ಶಾರದಾ ಪರಶುರಾಮ,  ಹುದ್ದಾರ, ದೇವಕ್ಕಾ ಕೆರೆಮನೆ, ನಗರಸಭಾ ಸದಸ್ಯರಾದ ಬುಧವಂತಗೌಡಾ ಪಾಟೀಲ, ರೋಷನ್‌ಜಿತ್‌ ಶಿವದಾಸನ್‌, ದಶರಥ ಬಂಡಿವಡ್ಡರ, ವಿಷ್ಣು ವಾಜವೆ, ವಿಜಯ ಕೊಲೆಕರ, ಮಹಾದೇವಿ ಭದ್ರಶೆಟ್ಟಿ, ರಮಾರವೀಂದ್ರ, ಪದ್ಮಜಾ ಜನ್ನು, ಶೋಭಾ ಜಾಧವ,ಅನ್ನಪೂರ್ಣಾ ಬಾಗಲಕೋಟೆ, ರಿಯಾಜ್‌ ಖಾನ್‌ ಹಾಗೂ ಪಕ್ಷದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next