Advertisement

ಕುಶಲಕರ್ಮಿಗಳಿಗೆ ಸಹಾಯಧನ ನೀಡಲು ಸರ್ಕಾರಕ್ಕೆ ಒತ್ತಾಯ

10:08 AM Jun 01, 2020 | Suhan S |

ಗಲಗಲಿ: ಕೋವಿಡ್‌-19 ವೈರಸ್‌ ನಿಯಂತ್ರಣಕ್ಕಾಗಿ ಸರ್ಕಾರ ಒಂದೂವರೆ ತಿಂಗಳಿಂದ ಲಾಕ್‌ಡೌನ್‌ ಜಾರಿಗೊಳಿಸಿದ್ದು, ಈ ದಿನಗಳಲ್ಲಿ ಕುಶಲಕರ್ಮಿಗಳ ಕುಟುಂಬಗಳು ದುಡಿಮೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಇಂತಹ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಬರುವಂತೆ ಸ್ಥಳೀಯ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ಈಗಾಗಲೇ ಅನೇಕ ಶ್ರಮಿಕ ಕುಟುಂಬಗಳಿಗೆ ಮುಖ್ಯಮಂತ್ರಿಗಳು ನೆರವಿನ ಹಸ್ತ ನೀಡಿದ್ದು ಪ್ರಶಂಸನೀಯ. ಇವರಂತೆಯೇ ಲಾಕ್‌ ಡೌನ್‌ನಿಂದಾಗಿ ರಾಜ್ಯದಲ್ಲಿ ಕುಲಕಸುಬು ಮಾಡಿಕೊಂಡು ಜೀವನ ನಡೆಸುತ್ತಿರುವ ವಿಶ್ವಕರ್ಮ ಸಮಾಜದ ಕಮ್ಮಾರಿಕೆ, ಅಕ್ಕಸಾಲಿಗ, ಲೋಹಶಿಲ್ಪಿ, ಬಡಿಗತನ ಹಾಗೂ ಶಿಲ್ಪಿ ಕೆಲಸ ಮಾಡಿಕೊಂಡ ಕುಟುಂಬಗಳು ಕೆಲಸವಿಲ್ಲದೇ ಬದುಕು ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಇಂಥ ಕುಟುಂಬಗಳ ಸಹಾಯಕ್ಕೆ ಬರಬೇಕು. ಸಮಾಜದ ಪಂಚ ಕುಲಕಸುಬುಗಳನ್ನು ಅವಲಂಬಿಸಿದವರಿಗೆ ಹತ್ತು ಸಾವಿರ ರೂ. ಪ್ರತಿ ಕುಟುಂಬಕ್ಕೆ ಸಹಾಯ ನೀಡುವಂತೆ ಬೀಳಗಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next