Advertisement
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಸೋಮವಾರ ಟೋಕಿಯೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಈ ರೀತಿ ಮಾತನಾಡಿದ್ದಾರೆ. ಸ್ವಾಮಿ ವಿವೇಕಾನಂದ ಹಾಗೂ ರಬೀಂದ್ರನಾಥ್ ಟ್ಯಾಗೋರ್ ಅವರ ಹೆಸರನ್ನೂ ಪ್ರಸ್ತಾಪಿಸಿದ ಮೋದಿ, ಭಾರತ ಮತ್ತು ಜಪಾನ್ ನಡುವೆ ಆಳವಾದ ಸಾಂಸ್ಕೃತಿಕ ಬಂಧವಿದೆ ಎಂದು ಹೇಳಿದ್ದಾರೆ.
Related Articles
ಇದಕ್ಕೂ ಮುನ್ನ ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೆàಮ್‌ವರ್ಕ್(ಐಪಿಇಎಫ್) ಆರಂಭಿಸುವ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕರೆದಿದ್ದ ಸಭೆಯಲ್ಲೂ ಪ್ರಧಾನಿ ಮೋದಿ ಭಾಗವಹಿಸಿದ್ದರು.
Advertisement
ಮಂಗಳವಾರ ಟೋಕಿಯೋದಲ್ಲಿ ಕ್ವಾಡ್ ಶೃಂಗಸಭೆ ನಡೆಯಲಿದೆ. ಜತೆಗೆ, ಮೋದಿ ಅವರು ಅಮೆರಿಕ ಅಧ್ಯಕ್ಷ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್, ಜಪಾನ್ ಪ್ರಧಾನಿ ಫುಮಿಯೋ ಕಿಶಿದಾರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಹೂಡಿಕೆಗೆ ಆಹ್ವಾನಸಾಫ್ಟ್ ಬ್ಯಾಂಕ್‌ನ ಮಸಾಯೋಶಿ, ಸುಜುಕಿ ಮೋಟಾರ್ ಕಂಪನಿಯ ಒಸಾಮು ಸುಜುಕಿ ಸೇರಿದಂತೆ ಜಪಾನ್‌ನ ಪ್ರಮುಖ ಉದ್ದಿಮೆದಾರರೊಂದಿಗೆ ಪ್ರಧಾನಿ ಮೋದಿ ಸೋಮವಾರ ಸಂವಾದ ನಡೆಸಿದ್ದಾರೆ. ಭಾರತದಲ್ಲಿ ಜವಳಿಯಿಂದ ಹಿಡಿದು ಆಟೋಮೊಬೈಲ್‌ವರೆಗೆ, ತಂತ್ರಜ್ಞಾನದಿಂದ ಹಿಡಿದು ಸ್ಟಾರ್ಟಪ್‌ವರೆಗೆ ವಿವಿಧ ವಲಯಗಳಲ್ಲಿ ಸಾಕಷ್ಟು ಹೂಡಿಕೆ ಅವಕಾಶಗಳಿವೆ. ಈ ಅವಕಾಶಗಳನ್ನು ನೀವು ಸದುಪಯೋಗಪಡಿಸಿಕೊಳ್ಳಿ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ, ಹೊಸ ಹೂಡಿಕೆ ಉತ್ತೇಜನಾ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಟೋಕಿಯೋದಲ್ಲಿ ಸಹಿ ಹಾಕಿವೆ. ವಾವ್, ಹಿಂದಿ ಭಾಷೆ ಹೇಗೆ ಕಲಿತೆ?
ಸೋಮವಾರ ಬೆಳಗ್ಗೆ ಟೋಕಿಯೋ ತಲುಪಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಹೋಟೆಲ್‌ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಭಾರತೀಯ ಮೂಲದವರ ಜತೆ ಟೋಕಿಯೋ ನಾಗರಿಕರೂ ಮೋದಿಯನ್ನು ಸ್ವಾಗತಿಸಿದ್ದಾರೆ. ಈ ವೇಳೆ ಟೋಕಿಯೋದ ಬಾಲಕನೊಬ್ಬ ಮೋದಿಯವರಿಗಾಗಿ ಪ್ರೀತಿಯಿಂದ ತಂದಿದ್ದ ಗ್ರೀಟಿಂಗ್ ಕಾರ್ಡ್ ನೋಡಿ, ಪ್ರಧಾನಿ ಖುಷಿಪಟ್ಟಿದ್ದಾರೆ. ವಿಶೇಷವೆಂದರೆ, ಟೋಕಿಯೋದ ಆ ಬಾಲಕ ಹಿಂದಿ ಭಾಷೆಯಲ್ಲೇ, “ಜಪಾನ್‌ಗೆ ಸ್ವಾಗತ. ನಾನು ನಿಮ್ಮ ಆಟೋಗ್ರಾಫ್ ಪಡೆಯಬಹುದೇ’ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ವಾವ್, ಹಿಂದಿ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಿ. ಈ ಭಾಷೆಯನ್ನು ನೀನು ಕಲಿತಿದ್ದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.