Advertisement

ಶುದ್ಧ ನೀರಿನ ಘಟಕಗಳ ಅಕ್ರಮ ತನಿಖೆಗೆ ಆಗ್ರಹ

05:31 PM Jun 05, 2022 | Team Udayavani |

ಕೋಲಾರ: ನಗರಸಭೆ ವ್ಯಾಪ್ತಿಯಲ್ಲಿನ ಶುದ್ದನೀರಿನ ಘಟಕಗಳಲ್ಲಿ ಹಾಗೂ ಯುಜಿಡಿ ಕಾಮಗಾರಿಯ ನಿರ್ವಹಣೆಯ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸರಕಾರದ ಗಮನಕ್ಕೆ ತರುವ ಜೊತೆಗೆ ತನಿಖೆ ನಡೆಸಬೇಕು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒತ್ತಾಯಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಶನಿವಾರ ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ನಗರಸಭೆ ವತಿಯಿಂದ ಪ್ರತಿ ವರ್ಷ ಹಣ ಕೊಡಬೇಕು. ಆದರೆ, ಸುಮಾರು ಕಡೆಗಳಲ್ಲಿ ಕೆಟ್ಟು ನಿಂತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರಿದ್ದಾರೆ. ಸುಮಾರು ಘಟಕಗಳು ಬೋಗಸ್‌ ಆಗಿದ್ದು, ಇದರ ಬಗ್ಗೆ ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ಕಳಸಿಕೊಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ನಗರದಲ್ಲಿನ ಯುಜಿಡಿ ಪೈಪ್‌ ಲೈನ್‌ಗಳು ಸರಿಯಾಗಿ ಆಳವಡಿಸಿಲ್ಲ ಟೆಂಡರ್‌ದಾರ ಮೊದಲೇ ಹಣ ಪಡೆದಿದ್ದಾನೆ. ಯುಜಿಡಿ ದುರಸ್ತಿಯ ವಾಹನವನ್ನು ವಾಪಸ್‌ ಕಳುಹಿಸಿ ಅವರ ಹತ್ತಿರ ಎಲ್ಲ ಹಣ ವಾಪಸ್‌ ಪಡೆಯಿರಿ, ಮುಂದೆ ಚನಗರಸಭೆಯಿಂದಲೇ ನಿರ್ವಹಣೆ ಮಾಡಿಕೊಳ್ಳೋಣ ಯುಜಿಡಿಯಲ್ಲಿ ಪ್ರತಿಯೊಂದು ಮನೆಯಿಂದ ಹಣ ಸಂಗ್ರಹ ಮಾಡಿದ್ದಾರೆ. ಈಗ ನಾವು ಹೋಗಿ ಕೇಳಿದರೆ ನಗರಸಭೆಗೆ ಕೆಟ್ಟ ಹೆಸರು ಬರುತ್ತದೆ ಇದರ ಬಗ್ಗೆ ಟೆಂಡರ್‌ ದಾರನ ವಿರುದ್ಧ ಸರಕಾರಕ್ಕೆ ಸುತ್ತೂಲೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ನಗರಕ್ಕೆ ನೀರು ಕೊಡುವ ಉದ್ದೇಶದಿಂದ ಸುಮಾರು ವರ್ಷಗಳಿಂದ ಯರಗೋಳು ಯೋಜನೆಯನ್ನು ಪ್ರಾರಂಭ ಮಾಡಿ ಕಾಮಗಾರಿ ನಡೆಯತ್ತಲೇ ಇದೆ ನಗರಸಭೆ ವತಿಯಿಂದ ಪ್ರತಿ ವರ್ಷ ಶೇ.10 ಹಣ ವಂತಿಕೆ ರೂಪದಲ್ಲಿ ಹಣ ಕೊಡುತ್ತಿದ್ದರೂ ನೀರು ಮಾತ್ರ ನಗರಕ್ಕೆ ಬರುತ್ತಿಲ್ಲ ಇದರ ಬಗ್ಗೆ ಶಾಸಕರು ಸಂಸದರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ದಿನಾಂಕ ನಿಗದಿ ಮಾಡಿ ಸಭೆ ಮಾಡಬೇಕು ಎಂದು ಹೇಳಿದರು.

ನಗರದಲ್ಲಿ ಜಾಹೀರಾತು ಫಲಕಗಳಿಗೆ ಅಳವಡಿಸಲು ಮುಕ್ತವಾದ ಅವಕಾಶವನ್ನು ನೀಡಬೇಕು ನೋಟಿಸ್‌ ನೀಡಿ ಯಾರು ಬೇಕಾದರೂ ಹಾಕಿಕೊಳ್ಳಲಿ ನಗರಸಭೆಗೆ ತೆರಿಗೆ ಹೆಚ್ಚಳವಾಗುತ್ತದೆ ಅದೇ ರೀತಿ ಕಳೆದ ಬಾರಿ ಸಭೆಯಲ್ಲಿ 15 ನೆಯ ಹಣಕಾಸು ಯೋಜನೆಯಲ್ಲಿ ಕೆಲವು ವಾರ್ಡ್‌ಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಕೇಳಿದ್ದರೂ ಈ ಬಾರಿ ಅನುಮೋದನೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸಭೆಯಲ್ಲಿ ವಿಷಯವಾರು ಚರ್ಚೆ ನಡೆಯದೆ ಗಲಾಟೆ ವಾದ ವಿವಾದ ನಡೆಯುವ ಸಂದರ್ಭದಲ್ಲಿ ಸಂಸದ ಎಸ್‌ ಮುನಿಸ್ವಾಮಿ ಮಧ್ಯೆ ಪ್ರವೇಶಿಸಿ ನಗರಸಭೆ ಸಾಮಾನ್ಯ ಸಭೆಯ ಘನತೆ ಗೌರವಗಳನ್ನು ಕಾಪಾಡುವುದು ಸದಸ್ಯರ ಕರ್ತವ್ಯ ಒಂದೊಂದೇ ವಿಷಯವಾರು ಚರ್ಚೆ ಮಾಡೋಣ ಎಂದಾಗ ಸದಸ್ಯರು ಸುಮಾರು ಒಂದು ತಿಂಗಳ ಹಿಂದೆಯೇ ಮನವಿ ಮಾಡಿದರೂ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದಾಗ ಸರಿ ಕೂತುಕೊಳ್ಳಿ ಎಂದು ಸದಸ್ಯರನ್ನು ಸಮಾಧಾನ ಪಡಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ, ಉಪಾಧ್ಯಕ್ಷ ಅಸ್ಲಾಂ ಪಾಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌ ಅಂಬರೀಶ್‌, ಪೌರಾಯುಕ್ತ ಪ್ರಸಾದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next