Advertisement
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಯೂರಿಯ ಗೊಬ್ಬರ ಸಮರ್ಪಕವಾಗಿ ರೈತರಿಗೆ ಲಭ್ಯವಾಗುವಂತೆ ಸೂಕ್ತ ಕ್ರಮವಹಿಸಿ. ತಾಡಪಲ್ಲುಗಳಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಲಿ ಎಂದುತಿಳಿಸಿದರು. ತಾಡಪಲ್ಲು ಆಯ್ಕೆಗೆ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವಾಗ ಜನಪ್ರತಿನಿಧಿ ಗಳನ್ನು ಕರೆದು ಆಯ್ಕೆ ಮಾಡಿ ಎಂದು ತಾಪಂ ಸದಸ್ಯ ಪಾಂಡುನಾಯ್ಕ ಆಗ್ರಹಿಸಿದರು. ಕೃಷಿ ಸಹಾಯಕ ನಿರ್ದೇಶಕ ಜೀವನ್‌ಸಾಬ್ ಪ್ರತಿಕ್ರಿಯಿಸಿ, ಯೂರಿಯಾಸಮರ್ಪಕ ವಿತರಣೆಗೆ ಈಗಾಗಲೇ ಕ್ರಮವಹಿಸಲಾಗಿದೆ. ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
Related Articles
Advertisement
ಪ್ರತಿ ಗ್ರಾ.ಪಂ.ನಲ್ಲಿ ಯಾವುದಾದರೂ ಹಣಕಾಸು ಯೋಜನೆಯಲ್ಲಿ ಪ್ರತಿ ಶಾಲೆಗೆ ಒಂದು ಟಿವಿಯನ್ನು ಕೊಡಿಸಿ ಮಕ್ಕಳ ಬೋರಯ್ಯ ಕೇಳಿದಾಗ, ಸದಸ್ಯ ಪಿ. ಕೊಟ್ರೇಶ ತಾ.ಪಂ.ಸದಸ್ಯರೆಲ್ಲ 14ಜನ ಆಯಾ ಪಂಚಾಯ್ತಿ ವ್ಯಾಪ್ತಿಯ ಒಂದು ಶಾಲೆಗೆ ಸ್ವಂತ ಅನುದಾನದಲ್ಲಿ ಟಿವಿಯನ್ನು ಕೊಡಿಸುತ್ತೇವೆ ಎಂದು ತಿಳಿಸಿದರು. ತಾಪಂ ಇಒ ಪ್ರತಿಕ್ರಿಯಿಸಿ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಕೊಡಿಸುವುದು ಕಷ್ಟ, ಪಂಚಾಯ್ತಿಯ ಒಂದು ಶಾಲೆಗೆ ಕೊಡಿಸಲು ಪಿಡಿಒಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು. ಶಿಕ್ಷಣದ ಕಾರ್ಯಕ್ರಮಗಳಿಗೆ ತಾಪಂ ಉಪಾಧ್ಯಕ್ಷರನ್ನು ಕರೆಯಿರಿ ಎಂದು ತಾಪಂ ಅಧ್ಯಕ್ಷೆ ನಾಗಮ್ಮ ಒತ್ತಾಯಿಸಿದರು.
ತಾಲೂಕಿನಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಕೊಳೆ ರೋಗದಿಂದ ನಷ್ಟಕ್ಕೆ ಒಳಗಾಗಿದ್ದು ಪರಿಹಾರಕ್ಕೆಕ್ರಮಕೈಗೊಳ್ಳಿ ಎಂದು ಸದಸ್ಯ ಪಾಂಡುನಾಯ್ಕ ಒತ್ತಾಯಿಸಿದರು. ನಷ್ಟ ಪರಿಹಾರದಲ್ಲಿ ತಾರತಮ್ಯಬೇಡ ನಷ್ಟವಾದ ಫಲಾನುಭವಿಗೆ ಪರಿಹಾರ ದೊರಕಲಿ ಎಂದರು. ತೋಟಗಾರಿಕೆ ಸಹಾಯಕ ನಿರ್ದೇಶಕಡಾ| ಪರಮೇಶ್ವರಪ್ಪ ಪ್ರತಿಕ್ರಿಯಿಸಿ ಬೆಳೆನಷ್ಟದ ಅರ್ಜಿ ಸಲ್ಲಿಸಿದವರಿಗೆ ಪರಿಹಾರ ದೊರಕುತ್ತದೆ ಯಾವುದೇತಾರತಮ್ಯ ಮಾಡುವುದಿಲ್ಲ. ಬೆಳೆಸಮೀಕ್ಷೆ ಅಪ್‌ನಲ್ಲಿ ಬೆಳೆ ದಾಖಲಾಗಿರುವುದು ಪರಿಹಾರ ವಿತರಣೆಗೆ ಸುಲಭವಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಬಿಕ್ಯಾ ಮುನ್ನಿಬಾಯಿ, ಸದಸ್ಯರಾದ ತಿಪ್ಪೇರುದ್ರಮುನಿ, ಚೌಟಿ ಗೀತಾ, ರಮೀಜಾ, ಶ್ಯಾಮಲಾ, ಜೆಸ್ಕಾಂ ಎಇಇ ತೇಜನಾಯ್ಕ, ಪಶು ಸಹಾಯಕ ನಿರ್ದೇಶಕ ಡಾ| ದೇವಗಿರಿ, ಕುಡಿಯುವ ನೀರು ಸರಬರಾಜು ಇಲಾಖೆ ಎಇಇಸುರೇಶ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಜನಾಧಿಕಾರಿ ಉಮೇಶಗೌಡ, ವ್ಯವಸ್ಥಾಪಕ ಮಲ್ಲನಗೌಡ, ಕುಮಾರಸ್ವಾಮಿ ನಿರ್ವಹಿಸಿದರು.