Advertisement
ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮರಗಳನ್ನು ಕಡಿದ ಪರಿಣಾಮ ಬಿಸಿಲ ಝಳ ಹೆಚ್ಚಾಗಿದೆ. ಇನ್ನೊಂದೆಡೆ ಗಿಡಗಳನ್ನು ನೆಟ್ಟು ಬೆಳೆಸುವ ನಿಟ್ಟಿನಲ್ಲಿ ಆಚರಿಸಲಾಗುವ ವನಮಹೋತ್ಸವ ಕಾರ್ಯಕ್ರಮಗಳು ಕೇವಲ ಹೆಸರಿಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದ ಹರಿಸುವ ಹೊದಿಕೆಗಳು ಕಡಿಮೆಯಾಗುತ್ತಿದೆ. ಈ ನಡುವೆ ಹೊಸ ಮಾದರಿಯ ಕಾಡು ಬೆಳೆಸುವ “ಅರ್ಬನ್ ಫಾರೆಸ್ಟ್ ‘ ಪರಿಕಲ್ಪನೆ, ಸದ್ಯ ಜನಪ್ರಿಯವಾಗುತ್ತಿದೆ.
Related Articles
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 36ಕ್ಕೂ ಅಧಿಕ ಖಾಲಿ ಜಾಗ ಗುರುತಿಸಿದ್ದು, ಗಿಡ ನೆಡಲು ಉದ್ದೇಶಿಸಿದೆ. ಇನ್ನೊಂದೆಡೆ ರಾಮಕೃಷ್ಣ ಮಠದ ವತಿಯಿಂದಲೂ ವಿವಿಧೆಡೆ ಮಿಯಾವಾಕಿ ಅರ್ಬನ್ ಫಾರೆಸ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಎಲ್ಲ ಯೋಜನೆಯಗಳು ಯಶಸ್ವಿಯಾಗಿ ಅನುಷ್ಠಾನವಾದರೆ ಮುಂದಿನ ಕೆಲವು ವರ್ಷಗಳ ಬಳಿಕ ನಗರದ ವಿವಿಧೆಡೆ ಇಂತಹ ಹಲವು ಕಾಡು ಪ್ರದೇಶ ಕಾಣಬಹುದು.
Advertisement
ರಾಮಕೃಷ್ಣ ಮಠದ ವತಿಯಿಂದ 2023ರ ಮಳೆಗಾಲದಲ್ಲಿ ಶಕ್ತಿನಗರದ ಡಾ| ಜೀವರಾಜ್ ಸೊರಕೆ ಅವರ ಜಾಗದಲ್ಲಿ 10 ಸಾವಿರ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅವರು ಎರಡು ಎಕರೆ ಪ್ರದೇಶದಲ್ಲಿ ಸಂಪೂರ್ಣ ಕಾಡು ಮಾಡಲು ಉದ್ದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಮಠದ ವತಿಯಿಂದ ಈಗಾಗಲೇ 4 ಮಿಯಾವಾಕಿ ಅರ್ಬನ್ ಫಾರೆಸ್ಟ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.-ಏಕಗಮ್ಯಾನಂದ ಸ್ವಾಮೀಜಿ, ರಾಮಕೃಷ್ಣ ಮಠ ಏನಿದು ಅರ್ಬನ್ ಫಾರೆಸ್ಟ್ ?
ನಗರದ ಪ್ರದೇಶದಲ್ಲಿರುವ ಕಡಿಮೆ ಜಾಗದಲ್ಲಿ ದಟ್ಟ ವಿವಿಧ ಜಾತಿಯ ಮರಗಳನ್ನೊಳಗೊಂಡು ಅರಣ್ಯ ಬೆಳೆಸುವುದನ್ನು ಅರ್ಬನ್ ಫಾರೆಸ್ಟ್ ಎನ್ನಲಾಗುತ್ತದೆ. ಜಪಾನ್‌ನ ಜೈವಿಕ ತಜ್ಞ ಡಾ| ಅಕಿರಾ ಮಿಯಾವಾಕಿ ಅವರು ಈ ಪರಿಕಲ್ಪನೆ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ್ದರು. ಅವರ ಹೆಸರಿನಲ್ಲೇ, ಮಿಯಾವಾಕಿ ಅರ್ಬನ್ ಫಾರೆಸ್ಟ್ ಎಂದು ಪ್ರಸಿದ್ಧಿ ಪಡೆಯಿತು. ಸಾಮಾನ್ಯ ಅರಣ್ಯಕ್ಕಿಂತ ಹಲವು ಪಟ್ಟು ಹೆಚ್ಚು ದಟ್ಟವಾಗಿ ಗಿಡ ಬೆಳಸಲಾಗುತ್ತದೆ. ಮುಖ್ಯವಾಗಿ ಹಣ್ಣಿನ ಗಿಡಗಳು, ಔಷಧೀಯ ಗಿಡಗಳು, ಹೂ ಬಿಡುವ ಗಿಡಗಳು, ಅಳಿವಿನಂಚಿನಲ್ಲಿರುವ ಗಿಡಗಳನ್ನು ಬೆಳೆಸುವ ಮೂಲಕ ಪ್ರಾಣಿ ಪಕ್ಷಿಗಳಿಗೆ ಒಂದು ವಾಸಸ್ಥಾನವಾಗಿಯೂ ಇದು ಸಹಕಾರಿಯಾಗುತ್ತದೆ. – ಭರತ್ ಶೆಟ್ಟಿಗಾರ್