Advertisement

ಶಾಲೆಗಳನ್ನು ಉಳಿಸಲು ಊರ ಜನತೆ ಶ್ರಮಿಸಲಿ: ಶಶಿಧರ ತೆಕ್ಕೆಮೂಲೆ

08:19 PM Jun 07, 2019 | Sriram |

ಬದಿಯಡ್ಕ: ಊರಿನ ಶಾಲೆಗಳು ವಿದ್ಯಾ ದೇಗುಲಗಳಾಗಿವೆ. ಸಮಗ್ರವಾದ ಶಿಕ್ಷಣ ಲಭಿಸುವಂತಹ ಇಂತಹ ಶಾಲೆಗಳನ್ನು ಉಳಿಸಿ ಕೊಳ್ಳುವ ಮಹತ್ತರವಾದ ಹೊಣೆ ಊರವರಿಗಿದೆ. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಿ ಕನ್ನಡದ ಉಳಿವಿಗಾಗಿ ಶ್ರಮಿಸಬೇಕು ಎಂದು ಕುಂಬಾxಜೆ ಗ್ರಾಮ ಪಂಚಾಯತ್‌ ಸದಸ್ಯ ಶಶಿಧರ ತೆಕ್ಕೆಮೂಲೆ ಅಭಿಪ್ರಾಯಪಟ್ಟರು.

Advertisement

ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಕಿರಿಯ ಪ್ರಾಥಮಿಕ ಶಾಲೆಯ 2019-20ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಊರಿನ ಶಾಲೆಗಳು ಪ್ರಧಾನ ಪಾತ್ರವಹಿಸುತ್ತವೆ. ಮಕ್ಕಳು ಕೇವಲ ಪುಸ್ತಕದ ಹುಳುಗಳಾಗಿರ ಬಾರದು, ಎಲ್ಲ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು. ಗ್ರಾಮೀಣ ಶಾಲೆಗಳು ಈ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಕಾರ್ಯಾಚರಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಶಾಲಾ ವ್ಯವಸ್ಥಾಪಕ ರಾಧಾಕೃಷ್ಣ ಭಟ್‌ ಬಳ್ಳಪದವು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅಗಲ್ಪಾಡಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವಾಸುದೇವ ಭಟ್‌ ಉಪ್ಪಂಗಳ, ಗ್ರಾ.ಪಂ. ಸದಸ್ಯೆ ಶಾಂತಾ ಎಸ್‌.ಭಟ್‌, ರಾಮ ಮಾಸ್ತರ್‌ ಪಿಲಾಂಕಟ್ಟೆ, ಮಾತೃಸಂಘದ ಅಧ್ಯಕ್ಷೆ ಮಾಳವಿಕಾ, ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಸುಬ್ರಾಯ ಭಟ್‌ ಶುಭಾಶಂಸನೆಗೈದರು.

ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್‌ ಸ್ವಾಗತಿಸಿ, ಅಧ್ಯಾಪಿಕೆ ಸುಜಯ ಬಿ. ವಂದಿಸಿದರು. ಅಧ್ಯಾಪಿಕೆ ಸೌಮ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳನ್ನು ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ತನ್ಮೂಲಕ ಹಬ್ಬದ ಕಳೆಯನ್ನು ಸೃಷ್ಟಿಸಲಾಯಿತು.

Advertisement

ಪರಿಕರ ವಿತರಣೆ
ನರೇಂದ್ರ ಮೋದಿಯರು ಭಾರತದ ಪ್ರಧಾನಿಯಾದ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಶಾಲೆಯ ಎಲ್ಲ ಮಕ್ಕಳಿಗೂ ಉಬ್ರಂಗಳ ಗ್ರಾಮ ವಿಕಾಸ ಸಮಿತಿಯ ವತಿಯಿಂದ ನೀಡುತ್ತಿದ್ದ ಶೈಕ್ಷಣಿಕ ಪರಿಕರಗಳನ್ನು ಈ ಬಾರಿಯೂ ನೀಡಲಾಯಿತು. ಇದಲ್ಲದೆ ಡಾ| ರಾಜೇಶ್‌ ಪಿ. ಜೋಸ್‌ ಪಂಜರಿಕೆ ಹಾಗೂ ಶಾಲಾ ಶಿಕ್ಷಕ ವೃಂದದ ವತಿಯಿಂದ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next