Advertisement

ನಗರ ನಕ್ಸಲರಿಂದ ಡಾರ್ಕ್‌ ನೆಟ್‌ ಬಳಕೆ: ಮಹಾರಾಷ್ಟ್ರ ಪೊಲೀಸರಿಂದ ಬಯಲು

04:57 PM Sep 03, 2018 | udayavani editorial |

ಮುಂಬಯಿ : ನಗರ ನಕ್ಸಲರು ಕೊರಿಯರ್‌ ಸೇವೆಯನ್ನು ಮಾತ್ರವಲ್ಲದೆ ತಮ್ಮಲ್ಲಿನ ಮಾಹಿತಿ ರವಾನೆಗೆ ಪಾಸ್‌ ವರ್ಡ್‌ ರಕ್ಷಿತ ಪೆನ್‌ ಡ್ರೈವ್‌ಗಳನ್ನು ಬಳಸುತ್ತಿದ್ದರಲ್ಲದೆ ರಹಸ್ಯ ಮಾಹಿತಿಗಳನ್ನು ಇ-ಮೇಲ್‌ ಮೂಲಕ ರವಾನಿಸಲು ಡಾರ್ಕ್‌ ನೆಟ್‌ ಬಳಸುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ಬಹಿರಂಗಪಡಿಸಿದ್ದಾರೆ. 

Advertisement

ಈ ಮಾಹಿತಿಯನ್ನು ತಾವು ಬಂಧಿತ ನಗರ ನಕ್ಸಲರಿಂದ ತಿಳಿದುಕೊಂಡೆವೆಂದು ಪೊಲೀಸರು ಹೇಳಿದ್ದಾರೆ. (ಇದೇ ವೇಳೆ, ನ್ಯಾಯಾಂಗದ ವ್ಯಾಪ್ತಿಗೆ ಒಳಪಟ್ಟಿರುವ ಭೀಮಾ ಕೋರೇಗಾಂವ್‌ ಕೇಸಿಗೆ ಸಂಬಂಧಿಸಿ  ಕಳೆದ ಶುಕ್ರವಾರ ನಡೆಸಿರುವ ಪತ್ರಿಕಾ ಗೋಷ್ಠಿಗಾಗಿ ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದು ಇಲ್ಲಿ ಉಲ್ಲೇಖನೀಯ). 

ಡಾರ್ಕ್‌ ನೆಟ್‌ ಎನ್ನುವುದು ಕಂಪ್ಯೂಟರ್‌ ಜಗತ್ತಿನ ಒಂದು ರಹಸ್ಯ ಭಾಗವಾಗಿದೆ. ಇದನ್ನು ಬಳಸಿಕೊಂಡು ಸೈಬರ್‌ ಖದೀಮರು ಅನಾಮಿಕರಾಗಿ ಉಳಿದುಕೊಂಡು ಅಕ್ರಮ ಇಂಟರ್‌ನೆಟ್‌ ಚಟುವಟಿಕೆಗಳನ್ನು ನಡೆಸುತ್ತಾರೆ. ಸಾಮಾನ್ಯವಾಗಿ ಇಂಟರ್‌ ನೆಟ್‌ ಬಳಸುವ ವ್ಯಕ್ತಿಯನ್ನು ಪತ್ತೆ ಹಚ್ಚಬಹುದಾಗಿದೆ; ಆದರೆ ಡಾರ್ಕ್‌ ನೆಟ್‌ ಬಳಸುವ ವ್ಯಕ್ತಿಯನ್ನು ಪತ್ತೆಹಚ್ಚುವುದು ಕಷ್ಟ.

ಅಂದಹಾಗೆ ಇಂಟರ್‌ನೆಟ್‌ ಬಳಕೆಯು ನೈಜ ಮತ್ತು ವಾಸ್ತವಿಕ ಜಗತ್ತಿನ ಕೇವಲ ಶೇ.4ರಷ್ಟಿರುತ್ತದೆ. ಉಳಿದಂತೆ ಡೀಪ್‌ ವೆಬ್‌, ಡಾರ್ಕ್‌ ನೆಟ್‌ ಬಳಕೆಯಲ್ಲಿದೆ. ಅಂತೆಯೇ ಮೂರು ಸ್ತರಗಳಲ್ಲಿ ಅಂತರ್‌ಜಾಲ ಇರುತ್ತದೆ : 1. ಸರ್‌ ಫೇಸ್‌ ವೆಬ್‌ (ನಾವು ನೀವು ಬಳಸುವಂಥದ್ದು), 2. ಡೀಪ್‌ ವೆಬ್‌, 3. ಡಾರ್ಕ್‌ ನೆಟ್‌.

Advertisement

Udayavani is now on Telegram. Click here to join our channel and stay updated with the latest news.

Next