Advertisement

ಒಬಿಸಿ ಮೀಸಲು: ಸುಪ್ರೀಂ ಮೆಟ್ಟಿಲೇರಿದ ಉ.ಪ್ರ. ಸರ್ಕಾರ

08:04 PM Dec 29, 2022 | Team Udayavani |

ನವದೆಹಲಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ವಜಾಗೊಳಿಸಿ, ಒಬಿಸಿಗಳಿಗೆ ಮೀಸಲಾತಿ ನೀಡದೇ ಚುನಾವಣೆ ನಡೆಸುವಂತೆ ಸೂಚಿಸಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶದ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

Advertisement

ಎಸ್‌ಸಿ, ಎಸ್‌ಟಿ, ಮಹಿಳೆಯರ ಜೊತೆಗೆ ಇತರೆ ಹಿಂದುಳಿದ ವರ್ಗಗಳಿಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೀಸಲಾತಿ ಒದಗಿಸಿ ಡಿ.5ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸುಪ್ರೀಂ ಕದ ತಟ್ಟಿರುವ ಸರ್ಕಾರ, “ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್‌ ವಜಾ ಮಾಡಲು ಸಾಧ್ಯವಿಲ್ಲ. ಒಬಿಸಿಗಳು ಕೂಡ ಸಾಂವಿಧಾನಿಕವಾಗಿ ರಕ್ಷಣೆ ಹೊಂದಿರುವ ವರ್ಗವಾಗಿದ್ದು, ಅಧಿಸೂಚನೆ ರದ್ದು ಮಾಡುವ ಮೂಲಕ ಹೈಕೋರ್ಟ್‌ ಲೋಪವೆಸಗಿದೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next