Advertisement
ದೇಶದ ನಗರ ಪ್ರದೇಶದಲ್ಲಿ 2020ರ ನವೆಂಬರ್‌ಗೆ ಹೋಲಿಸಿದರೆ ಎಫ್ಎಂಸಿಜಿಗಳ ಮಾರಾಟ ಈ ವರ್ಷದ ನವೆಂಬರ್‌ನಲ್ಲಿ ಕಡಿಮೆಯಾಗಿತ್ತು. ವಲಸೆ ಕಾರ್ಮಿಕರು, ಸಣ್ಣಪುಟ್ಟ ಅಂಗಡಿ ಮಾಲಕರು ಹಬ್ಬದ ಋತುವಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗೆ ಮರಳಿದ್ದೇ ಇದಕ್ಕೆ ಕಾರಣ ಎಂದು ಬಿಝೋಮ್ ಎಂಬ ಚಿಲ್ಲರೆ ವಹಿವಾಟು ಸಮೀಕ್ಷಾ ಸಂಸ್ಥೆಯ ಸರ್ವೇ ವರದಿ ಹೇಳಿದೆ. ನಗರ ಪ್ರದೇಶದಲ್ಲಿ ನವೆಂಬರ್‌ನಲ್ಲಿ ಎಫ್ಎಂಸಿಜಿ ವ್ಯವಹಾರ ಕಳೆದ ವರ್ಷದ ಇದೇ ಅವಧಿಗಿಂತ ಶೇ. 6.3 ಕುಸಿತ ಕಂಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅದು ಕಳೆದ ವರ್ಷದ ಇದೇ ಅವಧಿಗಿಂತ ಶೇ. 17.9 ಹೆಚ್ಚಳವಾಗಿದೆ ಎಂದು ಈ ಸರ್ವೇ ತಿಳಿಸಿದೆ. ದೇಶದ ಒಟ್ಟು ಎಫ್ಎಂಸಿಜಿ ವ್ಯವಹಾರ ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ಶೇ. 10.2ರಷ್ಟು ಪ್ರಗತಿ ಕಂಡಿದೆ ಎಂದು ಅದು ತಿಳಿಸಿದೆ. Advertisement
ಗ್ರಾಮೀಣ ಭಾಗದಲ್ಲೇ ಎಫ್ಎಂಸಿಜಿ ವ್ಯವಹಾರ ಹೆಚ್ಚಳ
08:14 PM Dec 04, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.