Advertisement

ಕುಡಿವ ನೀರಲ್ಲಿ ಯುರೇನಿಯಂ ಧಾತು ಪತ್ತೆ

01:45 PM Mar 23, 2022 | Team Udayavani |

ಚಿಕ್ಕಬಳ್ಳಾಪುರ: ಕುಡಿಯುವ ನೀರಿನಲ್ಲಿ ಅಪಾಯಕಾರಿ ಯುರೇನಿಯಂ ಧಾತು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಪ್ರತಿಯೊಂದು ಕೊಳವೆ ಬಾವಿಯ ನೀರಿನ ಮಾದರಿಯನ್ನು ಶೇಖರಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಜಿಲ್ಲೆಯಲ್ಲಿ ಸುರಕ್ಷಿತ ಪರ್ಯಾಯ ಕುಡಿವ ನೀರಿನ ವ್ಯವಸ್ಥೆಗೆ ತುರ್ತು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಆರ್‌.ಲತಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿದ ಹೋರಾಟ ಸಮಿತಿಯ ಸದಸ್ಯರು ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಅಪಾಯದ ಮಟ್ಟ ಮೀರಿದ ಪ್ರಮಾಣದಲ್ಲಿ ಯುರೇನಿಯಂ ಅಂಶ ಕುಡಿಯುವ ನೀರಿನಲ್ಲಿರುವುದು ದೃಢವಾಗಿದೆ. ಇದರಿಂದ ಮೂತ್ರಪಿಂಡಗಳ ಕಾಯಿಲೆ, ಕ್ಯಾನ್ಸರ್‌, ಪಾರ್ಶ್ವವಾಯು, ನವಜಾತ ಶಿಶುಗಳ ದುರ್ಮರಣ ಮತ್ತು ಶಾರೀರಿಕ ಜಡತ್ವ ಸೇರಿದಂತೆ ಮಾರಣಾಂತಿಕ ಕಾಯಿಲೆ ಬರುವ ಬಗ್ಗೆ ಎಚ್ಚರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಮಾಡಿರುವಂತೆ ಒಂದು ಲೀಟರ್‌ ಕುಡಿವ ನೀರಿನಲ್ಲಿ 30 ಮೈಕ್ರೊಗ್ರಾಮ್‌ ಯುರೇನಿಯಂ ಇರಬಹುದೆಂದು ನಿಗದಿ ಮಾಡಿದೆ. ಅದೇ ರೀತಿ ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡ ರ್ಡ್‌ ಒಂದು ಲೀ. ಕುಡಿವ ನೀರಿನಲ್ಲಿ ಗರಿಷ್ಠ 60 ಮೈಕ್ರೊಗ್ರಾಮ್‌ ಯುರೇನಿಯಂ ಇರಬಹುದೆಂದು ಹೇಳಿದೆ.

ಆದರೆ,ನಮ್ಮ ಜಿಲ್ಲೆಗಳಲ್ಲಿ ಆಯ್ದ ಕೆಲವು ಕೊಳವೆಬಾವಿಗಳಲ್ಲಿ ನಡೆಸಲಾದ ಪ್ರಯೋಗಾಲಯದ ವರದಿಗಳಲ್ಲಿ ಕುಡಿಯುವ ನೀರಿನಲ್ಲಿ 1 ಸಾವಿರ ಮೈಕ್ರೊಗ್ರಾಂಗಿಂತಲೂ ಅ ಧಿಕ ಯುರೆನಿಯಂ ಇರು ವುದು ಖಚಿತವಾಗಿದೆ. ಇದನ್ನು ಕೇಂದ್ರ ಜಲಶಕ್ತಿ ಮಂತ್ರಾಲಯದ ಸಚಿವರು ಸಹ ಸ್ಪಷ್ಟಪಡಿಸಿದ್ದು, ರಾಜ್ಯ ಸರ್ಕಾರ ಮಾತ್ರ ಮೌನವಾಗಿದೆ ಎಂದು ಹೋರಾಟ ಸಮಿತಿಯ ಪದಾ ಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಳ್ಳೂರು ಹರೀಶ್‌, ಎಂ.ಆರ್‌.ಲಕ್ಷ್ಮೀನಾರಾಯಣ, ಪ್ರಭಾ ನಾರಾಯಣಗೌಡ, ಸುಷ್ಮಾ , ಆನೂರು ದೇವ ರಾಜ್‌, ಬಸವರಾಜಪ್ಪ, ವಿಜಯಬಾವರೆಡ್ಡಿ, ಸಂದೀಪ್‌ ರೆಡ್ಡಿ, ಮುದ್ದರಂಗಪ್ಪ, ನಂದಿ ಪುರುಷೋತ್ತಮ್‌, ಕರವೇ ಶ್ರೀರಾಮಗೌಡ ಇತರರಿದ್ದರು.

Advertisement

ರಾಜಧಾನಿಯ ನೀರಿನಿಂದ ಕೊಳವೆ ಬಾವಿ ಕಲುಷಿತ : ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುತ್ತಿರುವುದರಿಂದ ಕೆರೆಯಂಗಳದಲ್ಲಿ ಕೊರೆಸಲಾಗಿರುವ ಕೊಳವೆಬಾವಿಗಳ ಮೂಲಕವೂ ಅಂತರ್ಜಲ ಕಲುಷಿತವಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಪ್ರತಿ ಕೊಳವೆ ಬಾವಿಯ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಯುರೇನಿಯಂ ಪತ್ತೆಯಾಗಿದೆ ರಾಜ್ಯದ ಈಶಾನ್ಯ ಭಾಗದ ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕುಡಿವ ನೀರಿಗಾಗಿ ಕೊರೆಸಿರುವ ಕೊಳವೆ ಬಾವಿಗಳ ನೀರಿನಲ್ಲಿ ವಿಕಿರಣ ಪೂರಿತ ಯುರೇನಿಯಂ ಪತ್ತೆಯಾಗಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next